ಸಾರಾಂಶ
ದ್ಯಾರ್ಥಿಗಳು ಕೀಳರಿಮೆ, ಹಿಂಜರಿಕೆ ಮನೋಭಾವ ಹೊಂದಬಾರದು
ಕನ್ನಡಪ್ರಭ ವಾರ್ತೆ ಸಿಂದಗಿ
ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿನಿಯರು ಎಲ್ಲ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಓದು ನಮ್ಮ ಸ್ಥಾನ ಇಮ್ಮಡಿಗೊಳುತ್ತದೆ ಎಂದು ಬಾಗಲಕೋಟೆಯ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಮುಕ್ತಾ ಎಲ್. ಹಿರೇಮಠ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೀಳರಿಮೆ, ಹಿಂಜರಿಕೆ ಮನೋಭಾವ ಹೊಂದಬಾರದು ಎಂದರು.
ಸಾನ್ನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಮಾದರಿಯನ್ನಾಗಿಟ್ಟುಕೊಂಡು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದರು. ಪ್ರಾಚಾರ್ಯ ಎಂ.ಎಸ್ ಹೈಯಾಳಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನವಾಗಿ ಬೋರಗಿ ಎಂ.ಪಿ.ಎಸ್ ಶಾಲೆಗೆ ಆಯ್ಕೆಯಾದ ಶಿಕ್ಷಕಿ ಎಂ.ಎಸ್ ಸಜ್ಜನ, ವಿದ್ಯಾರ್ಥಿನಿ ಸುವರ್ಣಾ ಹಿಪ್ಪರಗಿ ಅವರನ್ನು ಸತ್ಕರಿಸಲಾಯಿತು. ಈ ವೇಳೆ 2023-24 ನೇ ಸಾಲಿನ ಕಾರ್ಯಾಧ್ಯಕ್ಷರಾದ ಉಪನ್ಯಾಸಕ ಎಸ್.ಎಸ್. ಸಜ್ಜನ, ಪ್ರಧಾನ ಕಾರ್ಯದರ್ಶಿ ಗಂಗಾ ಗಾಲೀಬ ದೇವಣಗಾಂವ, ಶಿಕ್ಷಕಿ ಎಂ.ಎಸ್ ಸಜ್ಜನ, ಸುವರ್ಣ ಹಿಪ್ಪರಗಿ, ಡಾ.ಚನ್ನಪ್ಪ ಕಟ್ಟಿ, ಡಾ. ಎಂ.ಎಂ ಪಡಶೆಟ್ಟಿ, ಭೀಮನಗೌಡ ಸಿಂಗನಳ್ಳಿ, ಮಹಾಂತೇಶ ನೂಲಾನವರ, ಮುಕ್ತಾಯಕ್ಕ ಕತ್ತಿ, ಬಸಮ್ಮ ಧರಿ, ಯು.ಸಿ ಪೂಜೇರಿ, ಎಂ.ಪಿ. ಸಾಗರ. ಜಿ.ಎ. ನಂದಿಮಠ, ಆರ್.ಎ. ಹಾಲಕೇರಿ, ಆಸಿಫ ಕೋಕಣಿ, ಲಕ್ಷ್ಮಿ ಮಾರ್ಸನಳ್ಳಿ, ಹೇಮಾ ಕಾಸರ, ಸತೀಶ ಕಕ್ಕಸಗೇರಿ, ಶಿವಶಂಕರ ಕುಂಬಾರ, ಲಕ್ಷ್ಮಿ ಭಜಂತ್ರಿ ಸೇರಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಇದ್ದರು. ವಿಶಾಲಾಕ್ಷಿ ಮಾಲಿ ಪಾಟೀಲ ನಿರೂಪಿಸಿದರು. ಉಪನ್ಯಾಸಕಿ ಹೇಮಾ ಹಿರೇಮಠ ಸ್ವಾಗತಿಸಿದರು. ಪಲ್ಲವಿ ಹೆಳವರ ಪ್ರಾರ್ಥಿಸಿದರು, ಕುಮಾರಿ ಗಂಗಾ ಗಾಲೀಬ ದೇವಣಗಾಂವ ವಂದಿಸಿದರು.