ಮಾನವ ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮ

| Published : Nov 09 2024, 01:07 AM IST / Updated: Nov 09 2024, 01:08 AM IST

ಸಾರಾಂಶ

ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಡಲಾಗಿದ್ದು, ಏನಾದರೂ ಉಲ್ಲಂಘನೆಯಾದರೇ ಪೊಲೀಸ್ ಠಾಣೆಗೆ ಹೋಗುತ್ತಾರೆ. ಕೂಡಲೇ ಎಫ್‌ಐಆರ್‌ ದಾಖಲಿಸಿ ರಿಜಿಸ್ಟರ್‌ ಮಾಡದಿದ್ದರೇ ನಂತರ ಮಾನವ ಹಕ್ಕುಗಳ ಆಯೋಗಕ್ಕೆ ಹೋಗಿ ದೂರನ್ನು ಸಲ್ಲಿಸುತ್ತಾರೆ ಎಂದು ಉಚಿತ ಕಾನೂನು ನೆರವು ಸಮಿತಿ ಸದಸ್ಯ ಕಾರ‍್ಯದರ್ಶಿ ಹಾಗೂ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ತಿಳಿಸಿದರು. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಫೇಸ್ ಮಾಡಬೇಕೆ ಹೊರತು ತಮ್ಮ ಸ್ಥಿಮಿತವನ್ನು ಕಳೆದುಕೊಳ್ಳಬಾರದು. ಮಾನವ ಹಕ್ಕುಗಳು ಉಲ್ಲಂಘನೆ ಆದಾಗ ಏನು ಮಾಡಬೇಕು? ನಿಮ್ಮ ಸ್ವತಂತ್ರವನ್ನು ಪಡೆಯುವ ಹಕ್ಕು ನಿಮಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಂವಿಧಾನದಲ್ಲಿ ಎಲ್ಲಾರಿಗೂ ಸಮಾನ ಹಕ್ಕುಗಳನ್ನು ಕೊಡಲಾಗಿದ್ದು, ಏನಾದರೂ ಉಲ್ಲಂಘನೆಯಾದರೇ ಪೊಲೀಸ್ ಠಾಣೆಗೆ ಹೋಗುತ್ತಾರೆ. ಕೂಡಲೇ ಎಫ್‌ಐಆರ್‌ ದಾಖಲಿಸಿ ರಿಜಿಸ್ಟರ್‌ ಮಾಡದಿದ್ದರೇ ನಂತರ ಮಾನವ ಹಕ್ಕುಗಳ ಆಯೋಗಕ್ಕೆ ಹೋಗಿ ದೂರನ್ನು ಸಲ್ಲಿಸುತ್ತಾರೆ ಎಂದು ಉಚಿತ ಕಾನೂನು ನೆರವು ಸಮಿತಿ ಸದಸ್ಯ ಕಾರ‍್ಯದರ್ಶಿ ಹಾಗೂ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ಒಕ್ಕೂಟದ ವಾರ್ಷಿಕೋತ್ಸವ ಹಾಗೂ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಪದಾಧಿಕಾರಿಗಳಿಗೆ ಐಡಿ ಕಾರ್ಡ್ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಫೇಸ್ ಮಾಡಬೇಕೆ ಹೊರತು ತಮ್ಮ ಸ್ಥಿಮಿತವನ್ನು ಕಳೆದುಕೊಳ್ಳಬಾರದು. ಮಾನವ ಹಕ್ಕುಗಳು ಉಲ್ಲಂಘನೆ ಆದಾಗ ಏನು ಮಾಡಬೇಕು? ನಿಮ್ಮ ಸ್ವತಂತ್ರವನ್ನು ಪಡೆಯುವ ಹಕ್ಕು ನಿಮಗಿದೆ. ಸಂವಿಧಾನದಲ್ಲಿ ಹಕ್ಕುಗಳನು ಕೊಡಲಾಗಿದೆ. ಏನಾದರೂ ಉಲ್ಲಂಘನೆಯಾದಾಗ ಇಲ್ಲವೇ ಹಲ್ಲೆಯಾದಗ ಪೊಲೀಸ್ ಠಾಣೆಗೆ ಹೋಗುತ್ತಾರೆ. ಪೊಲೀಸರು ಕೂಡಲೇ ಎಫ್.ಐ.ಆರ್. ದಾಖಲಿಸಿ ರಿಜಿಸ್ಟರ್ ಮಾಡಬೇಕು. ಈ ವೇಳೆ ಯಾವುದೋ ಕಾರಣಕ್ಕೆ ನಿಮ್ಮ ಕೇಸು ದಾಖಲು ಮಾಡುವುದಿಲ್ಲ. ಇನ್ನು ಬೇಕಾಗಿಯೇ ಕೇಸನ್ನು ದಾಖಲಿಸಲು ಹಿಂದೇಟು ಹಾಕುತ್ತಿರುವುದು ಇದು ಮಾನವನ ಹಕ್ಕು ಉಲ್ಲಂಘನೆ. ನಂತರದಲ್ಲಿ ಪರಿಹಾರಕ್ಕಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಕೊಡಬೇಕಾಗುತ್ತದೆ. ನಂತರ ಇವರು ನಿಮಗೆ ಸಲಹೆ ಕೊಡುತ್ತಾರೆ. ಹಕ್ಕು ಉಲ್ಲಂಘನೆ ಆಗಿದ್ದಾಗ ಆ ವ್ಯಕ್ತಿಯು ಪರಿಹಾರ ಕೊಡಬೇಕೆಂದು ಸಲಹೆ ಕೊಡುವುದು ಸರ್ಕಾರದ ಕೆಲಸ ಎಂದು ಕಿವಿಮಾತು ಹೇಳಿದರು. ಯಾರು ಕೂಡ ಕಾನೂನನ್ನು ಉಲ್ಲಂಘಿಸಿಬಾರದು. ಅಂತಹವರಿಗೆ ಶಿಕ್ಷೆ ವಿಧಿಸುತ್ತದೆ ಜೊತೆಗೆ ಪರಿಹಾರ ಕೊಡುವಂತೆಸೂಚನೆ ಕೊಡುತ್ತದೆ ಎಂದು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಎಲ್ಲರ ರಕ್ಷಣೆ ಮಾಡಲು ಸಂವಿಧಾನದಲ್ಲಿ ಏನಿದೆ ಅದರ ಜ್ಞಾನವನ್ನು ಅಳವಡಿಸಿಕೊಳ್ಳುವುದಕ್ಕೆ ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೂ ತಿಳಿಸುವ ಕಾರ್ಯಕ್ರಮವಾಗಿದೆ. ಇಂತಹ ಒಕ್ಕೂಟದಿಂದ ನೊಂದವರಿಗೆ, ಬಡವರಿಗೆ, ರೈತರಿಗೆ, ಕೂಲಿಕಾರ್ಮಿಕರ ಮಕ್ಕಳಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದರು.

ಬದುಕು ಸಾರ್ಥಕತೆ ಆಗಬೇಕಾದರೇ ಮೊದಲು ಶಿಸ್ತನ್ನು ಕಲಿತುಕೊಳ್ಳಬೇಕು. ಕಲಿತ ಶಿಕ್ಷಣದಿಂದ ಮೊದಲು ಸಮಯ, ಶಿಸ್ತು, ಸಂಯಮ, ಜ್ಞಾನ ಇದಕ್ಕೆ ಆದ್ಯತೆ ಕೊಡಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ದೇಶದಲ್ಲಿ ಇವತ್ತು 141 ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಇಡೀ ವಿಶ್ವದಲ್ಲಿ ಹೆಚ್ಚು ಯುವಕರು ಒಳಗೊಂಡಿರುವ ದೇಶ ಇದ್ದರೇ ಅದು ಭಾರತ. ನಮ್ಮ ದೇಶದಲ್ಲಿ ಶೇಕಡ 70 ಕೋಟಿ ಯುವಕರು ಇದ್ದಾರೆ. ಯುವಕರಲ್ಲಿ ಧೈರ್ಯ, ಶೌರ್ಯ ಹಾಗೂ ಜ್ಞಾನ ಇದ್ದರೇ ದೇಶ ಉತ್ತಮ ಮಟ್ಟಕ್ಕೆ ಹೋಗುತ್ತದೆ ಎಂದು ಸಲಹೆ ನೀಡಿದರು.

ನಮ್ಮ ದೇಶದಲ್ಲಿ ವರ್ಷಕ್ಕೆ 3 ಕೋಟಿ 20 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಪ್ರತಿ ವರ್ಷ 88 ಲಕ್ಷ ಜನರಲ್ಲಿ ಕೆಲಸವು 8 ಲಕ್ಷ ಜನರಿಗೆ ಮಾತ್ರ ಸಿಗುತ್ತಿದೆ. ಅನೇಕ ವಿದ್ಯಾವಂತರು ಟೋಪಿ ಹಾಕಿಕೊಂಡು, ಕೊಳಲು ಹಿಡಿದುಕೊಂಡು ಟಿವಿ, ಮೊಬೈಲ್ ಹಿಡಿದು ಸಮಯ ಕಳೆಯುತ್ತಾರೆ. ಈ ಮೂಲಕ ಮನೆಯಲ್ಲಿ ಭಾರವಾಗಿ ಉಳಿಯುತ್ತಾರೆ. ಫ್ಯಾಕ್ಟರಿಯಲ್ಲಿ ಅನುಪಯುಕ್ತ ವಸ್ತುಗಳಾಗಿ ಇವರು ಇರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಮಾನವ ಹಕ್ಕುಗಳ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಪುನೀತ್ ಗೌಡ, ಜಿಲ್ಲಾಧ್ಯಕ್ಷ ಯಲಗುಂದ ಶಾಂತಕುಮಾರ್‌, ಕಾನೂನು ಸಲಹೆಗಾರರಾದ ದೇವರಾಜೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮಂಜುನಾಥ್, ಎವಿಕೆ ಕಾಲೇಜು ಪ್ರಾಂಶುಪಾಲ ಸೀ.ಚ. ಯತೀಶ್ವರ್‌, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವೀಲೆ ಪರಮೇಶ್, ವೈದ್ಯರಾದ ಡಾ. ಎಂ. ಉಮೇಶ್, ಹಿರಿಯ ಪತ್ರಕರ್ತರಾದ ರಂಗಸ್ವಾಮಿ, ಯು.ಎಸ್. ಬಸವರಾಜು, ಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.