ಕಾಡಾನೆ ಹಾವಳಿ ತಡೆಗಟ್ಟದಿದ್ದರೆ ಚುನಾವಣೆಗೆ ಬಹಿಷ್ಕಾರ

| Published : Mar 26 2024, 01:20 AM IST

ಕಾಡಾನೆ ಹಾವಳಿ ತಡೆಗಟ್ಟದಿದ್ದರೆ ಚುನಾವಣೆಗೆ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿ ವಿಕೋಪ, ಹಾಗೂ ಬರದ ಹೆಸರಿನಲ್ಲಿ ಸರ್ಕಾರಗಳು ರೈತರ ಜೀವನದ ಜೊತೆ ಚಲ್ಲಾಟವಾಡಿದರೆ ಮತ್ತೊಂದಡೆ ಕಷ್ಟಪಟ್ಟು ರಾತ್ರಿ ಹಗಲು ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ರಾತ್ರೋರಾತ್ರಿ ಕಾಡಾನೆಗಳು ಸಂಪೂರ್ಣವಾಗಿ ನಾಶ ಮಾಡುತ್ತಿವೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿಭಾಗಗಳಲ್ಲಿ ರೈತರ ಬೆಳೆ ನಾಶಮಾಡುತ್ತಿರುವ ಆನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಡಿದಾಟಿಸದಿದ್ದರೆ ಗಡಿ ಭಾಗದ ಜನರು ಲೋಕಸಭಾ ಚುನಾವಣೆಯಿಂದ ದೂರ ಉಳಿಯುವುದಾಗಿ ನೊಂದ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರ ಬೆವರು ಸುರಿಸಿ ಬೆಳೆದ ಬೆಳೆಯನ್ನು ಕಾಡಾನೆಗಳು ನಾಶ ಮಾಡಿದ ಬಳಿಕ ಪ್ರತ್ಯಕ್ಷವಾಗುವ ಅರಣ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಡಿಭಾಗದ ರೈತರ ವಿರೋಧಿಗಳಂತ ವರ್ತಿಸುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಗಡಿಯಲ್ಲಿ ಅನೆಗಳ ಉಪಟಳ

ಕಳೆದ ಎರಡು ದಿನಗಳಿಂದ ಗಡಿ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ಅಪಾರ ಬೆಳೆ ನಷ್ಟವಾಗಿರುವುದಕ್ಕೆ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಪ್ರಕೃತಿ ವಿಕೋಪ, ಹಾಗೂ ಬರದ ಹೆಸರಿನಲ್ಲಿ ಸರ್ಕಾರಗಳು ರೈತರ ಜೀವನದ ಜೊತೆ ಚಲ್ಲಾಟವಾಡಿದರೆ ಮತ್ತೊಂದಡೆ ಕಷ್ಟಪಟ್ಟು ರಾತ್ರಿ ಹಗಲು ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ರಾತ್ರೋರಾತ್ರಿ ಕಾಡಾನೆಗಳು ಸಂಪೂರ್ಣವಾಗಿ ನಾಶ ಮಾಡುತ್ತಿವೆ.

ಬೆಳೆ ಮತ್ತು ಪ್ರಾಣ ರಕ್ಷಣೆ ಮಾಡಿಕೊಳ್ಳುವುದೇ ರೈತರು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಗಡಿಭಾಗದ ರೈತರ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪ ಮಾಡಿದರು.

ಸಮಸ್ಯೆ ಪರಿಹರಿಸಲು ವಾರದ ಗಡುವು

ಕಾಡಾನೆಗಳ ಹಾಳಿಯಿಂದ ಬೆಳೆ ನಷ್ಟವಾಗುತ್ತಿದ್ದರೂ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಒಂದು ಕಡೆ ಬೆಳೆಯು ಇಲ್ಲ ಮತ್ತೊಂದು ಕಡೆ ಪರಿಹಾರವು ಇಲ್ಲದೆ ಜಾತಕ ಪಕ್ಷಿಗಳಂತೆ ರೈತರು ಕಣ್ಣೀರು ಸುರಿಸುತ್ತಿದ್ದರೂ, ಮನ ಕರಗದ ಅಧಿಕಾರಿಗಳ ಜನ ಪ್ರತಿನಿಧಿಗಳ ರೈತ ವಿರೋಧಿ ದೋರಣೆಗೆ ಧಿಕ್ಕಾರ ಕೂಗಿ ವಾರದೊಳಗೆ ಸಮಸ್ಯೆ ನೀಗಿಸದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.