ಸಾರಾಂಶ
ಹಾಸನ ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಾಂಜಾ ಹಾಗೂ ನಶೆ ಪದಾರ್ಥಗಳನ್ನು ಯಥೇಚ್ಛವಾಗಿ ಮಾರಾಟ ಮಾಡಲಾಗುತ್ತಿದು, ಕೂಡಲೇ ಕಾನೂನು ಕ್ರಮ ವಹಿಸುವಂತೆ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಥದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಾರಾಟ ದಿನೇದಿನೆ ಹೆಚ್ಚುತ್ತಿರುವುದರಿಂದ ಯುವಕರು ಹಾಗೂ ಯುವತಿಯರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡು ಹುಚ್ಚರಾಗುತ್ತಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಾಂಜಾ ಹಾಗೂ ನಶೆ ಪದಾರ್ಥಗಳನ್ನು ಯಥೇಚ್ಛವಾಗಿ ಮಾರಾಟ ಮಾಡಲಾಗುತ್ತಿದು, ಕೂಡಲೇ ಕಾನೂನು ಕ್ರಮ ವಹಿಸುವಂತೆ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಥದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲೆಯಲ್ಲಿ ಗಾಂಜಾ ಹಾಗೂ ಇನ್ನಿತರ ನಶೆ ಪದಾರ್ಥಗಳು ಜಿಲ್ಲೆಯಲ್ಲಿ ಯಥೇಚ್ಛವಾಗಿ ಯಾವುದೇ ಹೆದರಿಕೆ ಇಲ್ಲದೆ ನಗರದಲ್ಲಿ, ಜಿಲ್ಲೆಯ ವಿವಿಧ ತಾಲೂಕು ಮತ್ತು ಹಳ್ಳಿಗಳಲ್ಲಿ ಗಾಂಜಾ ಪದಾರ್ಥವನ್ನು ಹೊಲಗಳಲ್ಲಿ ಬೆಳೆದು ಮಾರಾಟ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಈ ಕ್ರಿಯೆ ದಿನೇದಿನೆ ಹೆಚ್ಚುತ್ತಿರುವುದರಿಂದ ಯುವಕರು ಹಾಗೂ ಯುವತಿಯರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡು ಹುಚ್ಚರಾಗುತ್ತಿದ್ದಾರೆ ಎಂದರು.
ಪಾಲಕರು ಕಷ್ಟಪಟ್ಟು ದುಡಿದು ಶ್ರಮಪಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಕುಟುಂಬದ ಕೀರ್ತಿ ತರಲೆಂದು ಹಾಗೂ ದೇಶದ ಆಸ್ತಿಯಾಗಬೇಕೆಂದು ಕನಸು ಕಟ್ಟಿಕೊಂಡಿರುವ ತಂದೆ ತಾಯಿ ಹಾಗೂ ಪೋಷಕರು ಕನಸು ನುಚ್ಚುನೂರಾಗುತ್ತಿದೆ. ಈಗಾಗಲೇ ಸಾಕಷ್ಟು ಕೊಲೆ, ಸುಲಿಗೆ, ದರೋಡೆ ಹಾಗೂ ಅಪಘಾತದಂತಹ ಸಮಾಜಕ್ಕೆ ಮಾರಕವಾಗುವ ಆಘಾತಕಾರಿ ಕ್ರಿಯೆಗಳಲ್ಲಿ ಈ ಮಾದಕ ವಸ್ತುಗಳ ಪಾತ್ರವು ತುಂಬಾ ಇದೆ. ಎಂದು ತಮಗೆ ತಿಳಿದ ವಿಚಾರ. ತಾವು ಇದಕ್ಕೆ ತಕ್ಷಣದಿಂದಲೇ ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಬೇಕಾದ ಅನಿವಾರ್ಯತೆಗೆ ಅವಕಾಶ ಕೊಡಬೇಡಿ ಎಂದು ವಿನಂತಿಸಿದರು. ಇದೇ ವೇಳೆ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಥ ರಾಜ್ಯ ಸಹ ಸಂಚಾಲಕ ಎಚ್.ಎನ್. ನಾಗೇಶ್, ಮಾಜಿ ಜಿಲ್ಲಾ ಸಂಚಾಲಕ ಭರತ್, ಜಿಲ್ಲಾ ಸಹ ಸಂಚಾಲಕ ಹೆಚ್.ಎಸ್. ಸತೀಶ್, ವಿಷ್ಣು ಮೊದಲಾದವರಿದ್ದರು.