ಸಾರಾಂಶ
ಡಿ.ದೇವರಾಜ ಅರಸು ಅವರ ಜಯಂತ್ಯೋತ್ಸವದ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೆ.ರಾಘವೇಂದ್ರ ನಾಯರಿ ಸೇರಿದಂತೆ 10 ಮಂದಿಗೆ ಈ ಪ್ರಶಸ್ತಿಯನ್ನು ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಘವು ಕೊಡ ಮಾಡುವ ‘ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ರತ್ನ’ ರಾಜ್ಯ ಪ್ರಶಸ್ತಿಗೆ ಸಾಲಿಗ್ರಾಮದ ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ ಭಾಜನರಾಗಿದ್ದಾರೆ.ಡಿ.ದೇವರಾಜ ಅರಸು ಅವರ ಜಯಂತ್ಯೋತ್ಸವದ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾರ್ಮಿಕ ಸಂಘಟನೆ, ಯಕ್ಷಗಾನ, ಸಾಹಿತ್ಯ, ಜನಪರ ಹೋರಾಟ, ಕನ್ನಡಪರ ಸಂಘಟನೆ, ಸಾಮಾಜಿಕ ಸೇವೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಕೆ.ರಾಘವೇಂದ್ರ ನಾಯರಿ ಸೇರಿದಂತೆ 10 ಮಂದಿಗೆ ಈ ಪ್ರಶಸ್ತಿಯನ್ನು ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.ಈ ಸಮಾರಂಭದಲ್ಲಿ ಶಿವಗಂಗೆಯ ಶ್ರೀ ಮಹಾಲಕ್ಷ್ಮೀ ಮಹಾಸಂಸ್ಥಾನ ಪೀಠದ ಜಗದ್ಗುರು ಶ್ರೀ ಜ್ಞಾನಾನಂದಪುರಿ ಶ್ರೀಗಳು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಸಿಂಗ್, ಕರ್ನಾಟಕ ಸರ್ಕಾರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಿ.ಕೀರ್ತಿಗಣೇಶ್, ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್, ಉಪಾಧ್ಯಕ್ಷ ಆಂಜನೇಯಲು, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆರ್.ಕೆ.ದಿವ್ಯಾ, ದೇವಾಡಿಗ ಸಮಾಜದ ಮುಖಂಡರಾದ ಹೋಟೆಲ್ ಉದ್ಯಮಿ ಹಾಗೂ ಸಮಾಜ ಸೇವಕ ಚಂದ್ರ ದೇವಾಡಿಗ, ಎನ್.ರಮೇಶ್ ದೇವಾಡಿಗ ವಂಡ್ಸೆ, ಬಿಲ್ಲವ ಸಮಾಜದ ಮುಖಂಡರಾದ ಬಿ.ನವೀನ ಚಂದ್ರ ಪೂಜಾರಿ, ಗೋವಿಂದ ಬಾಬು ಪೂಜಾರಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.