ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡದಾವಲಮಲಿಕ ಅಜ್ಜನವರು ಸ್ವಗ್ರಾಮ ಕಾರಕೂರದಲ್ಲಿ ಅನಾಥಾಶ್ರಾಮ ಮಾಡಬೇಕು ಎಂದು ಸಂಕಲ್ಪ ಮಾಡಿ ಇವತ್ತು ತಮ್ಮ ಜಮೀನಿನಲ್ಲಿ ಭೂಮಿ ಪೂಜೆ ನೆರವೇರಿದ್ದಾರೆ. ಈಗಾಗಲೆ ಅವರು ಕೊಡೆಕಲ್ ಗ್ರಾಮದಲ್ಲಿ ಅನಾಥಾಶ್ರಮ ನಡೆಸುತಿದ್ದು, ಈಗ ತಮ್ಮ ಸ್ವಗ್ರಾಮದಲ್ಲಿ ಅನಾಥಾಶ್ರಮ ನಿರ್ಮಾಣ ಮಾಡಲು ಹೊರಟಿರುವುದು ಸಂತೋಷದ ವಿಷಯ ಎಂದು ಪ.ಪಂ ಸದಸ್ಯ ಪೃಥ್ವಿರಾಜ ನಾಡಗೌಡ ಹೇಳಿದರು. ಕಾರಕೂರ- ಬಲದಿನ್ನಿ ಮುಖ್ಯ ರಸ್ತೆಯಲ್ಲಿ ದಾವಲಮಲಿಕ ಅನಾಥಾಶ್ರಮ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಮತ್ತು ಪಾಲಕರನ್ನು ಕಳೆದುಕೊಂಡ ಮಕ್ಕಳು ಅನಾಥರೆಂದು ಭಾವಿಸಬಾರದು ಎಂದು ಅವರು ಚಿಕ್ಕ ವಯಸ್ಸಿನಿಂದ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ಡಾ.ಲಾಲಲಿಂಗೇಶ್ವರ ಶ್ರೀ ಮಾತನಾಡಿ ಅನಾಥಾಶ್ರಮ ನಡೆಸುವುದು ಸುಲಭದ ಮಾತಲ್ಲ. ಪಾಲಕರು ಮಕ್ಕಳನ್ನು ಬೆಳೆಸಲು ತುಂಬ ಶ್ರಮ ಪಡುತ್ತಾರೆ. ಒಂದು ಮಗುವನ್ನು ಬೆಳೆಸಬೇಕಾದರೆ ಹೈರಾಣುತ್ತಾರೆ. ಅಂತಹದ್ದರಲ್ಲಿ ದಾವಲಮಲಿಕ ಅಜ್ಜನವರು ಅನೇಕ ಅನಾಥ ಮಕ್ಕಳ ಪಾಲನೆ ಮಾಡುತಿದ್ದಾರೆ. ಅವರನ್ನು ಉತ್ತಮ ಶಿಕ್ಷಣ ನೀಡುವದರ ಜೋತೆಗೆ ಮದುವೆ ಸಹ ಮಾಡಿಸಿದ್ದಾರೆ. ಅವರ ಕಾರ್ಯವನ್ನು ನಿಜಕ್ಕು ನಾವೆಲ್ಲು ಮೆಚ್ಚಬೇಕು ಎಂದರು.
ಪುಣ್ಯಾಶ್ರಮದ ದಾವಲಮಲಿಕ ಅಜ್ಜನವರು ಮಾತನಾಡಿ, ಅನೇಕ ವರ್ಷಗಳಿಂದ ಯಾದಗಿರ ಜಿಲ್ಲೆಯ ಕೊಡೆಕಲ್ ಗ್ರಾಮದಲ್ಲಿ ಅನಾಶ್ರಮ ನಡೆಸಿಕೊಂಡು ಬರುತಿದ್ದೇನೆ. ಕಾರಣಾಂತರಗಳಿಂದ ಈಗ ಅದನ್ನು ಬಂದ ಮಾಡಿದ್ದೇನೆ. ಮಕ್ಕಳನ್ನು ಬೇರೆ ಕಡೆ ಬಿಟ್ಟು ಅವರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುತಿದ್ದೇನೆ. ಕಟ್ಟಡ ಇಲ್ಲದ ಕಾರಣ ನಾನು ಈ ರೀತಿ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಆ ನಿಟ್ಟಿನಲ್ಲಿ ಈಗ ನನ್ನ ಸ್ವಂತ ಜಮೀನಿನಲ್ಲಿ ಅನಾಥಾಶ್ರಮ ನಿರ್ಮಾಣ ಮಾಡಬೇಕು ಎಂದು ಸಂಕಲ್ಪ ಮಾಡಿ ಗ್ರಾಮದ ಮುಖಂಡರು ಹಾಗೂ ಹಿರಿಯರ ಸಮ್ಮುಖದಲ್ಲಿ ಇವತ್ತು ಭೂಮಿ ಪೂಜೆ ನಡೆಸಿದ್ದೇನೆ ಎಂದರು.ಈ ವೇಳೆ ಡಾ.ಲಾಲಲಿಂಗೇಶ್ವರ ಶ್ರೀ, ಗ್ರಾಮದ ಮುಖಂಡ ಬಸನಗೌಡ ಪಾಟೀಲ, ದೊಡ್ಡಬಸಪ್ಪ ನಾಡಗೌಡ, ರಕ್ಕಸಗಿ ಗ್ರಾ.ಪಂ ಸದಸ್ಯ ಶಂಕ್ರಪ್ಪ ನಾಡಗೌಡ, ಶರಣಪ್ಪ ವಾಲಿಕಾರ, ರಾಜೇಸಾಬ ನದಾಫ, ಬಸವರಾಜ ನಾಯ್ಕರ, ರಂಜೇಸಾಬ ನದಾಫ, ಮಂಜುನಾಥ ಮಾದರ ಹಾಗೂ ಇನ್ನಿತರರು ಇದ್ದರು.