ಸಾರಾಂಶ
ಸರ್ಕಾರದ ನಿಯಮಾನುಸಸಾರ ನವೀಕರಣಕ್ಕೆ ಬೇಕಾದ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದರೂ, ದುರುದ್ಧೇಶದಿಂದ ನೋಟಿಸು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ 71 ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದಾರೆ. ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಒಂದು ನ್ಯಾಯ. ಸಾಮಾನ್ಯರಿಗೆ ಒಂದು ನ್ಯಾಯವೇ?.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿಸುರಕ್ಷತಾ ಪ್ರಮಾಣ ಪತ್ರ ಹೊಂದಿಲ್ಲ ಎಂದು ಆರೋಪಿಸಿ ನವೀಕರಣ ತಡೆಹಿಡಿದು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅಧಿಕಾರಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಖಂಡಿಸಿ ಜಿಲ್ಲಾ ಅನುದಾನ ರಹಿತ ಶಾಲೆಗಳ ಸಂಘದ ಮುಖಂಡರು ಡಿಡಿಇಐ ಹಠಾವೋ ಖಾಸಗಿ ಶಾಲೆ ಬಜಾವೋ ಎನ್ನುತ್ತಾ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಚೇರಿ ಎದುರು ಗುರುವಾರ ಜಿಲ್ಲಾ ಖಾಸಗಿ ಶಾಲೆಗಳ ಸಂಘಟನೆಯ ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಶಾಲೆಗಳ ಮುಖ್ಯಸ್ಥರು ದಿಢೀರನೆ ಜಮಾಯಿಸಿ ಡಿಡಿಪಿಐ ಸರ್ವಾಧಿಕಾರಿ ಧೋರಣೆ ಖಂಡಿಸಿದರು.71 ಶಾಲೆಗಳು ಕಪ್ಪುಪಟ್ಟಿಗೆ
ಸರ್ಕಾರದ ನಿಯಮಾನುಸಸಾರ ನವೀಕರಣಕ್ಕೆ ಬೇಕಾದ ಎಲ್ಲಾ ಮಾನದಂಡಗಳನ್ನು ಪೂರೈಸಿದ್ದರೂ, ದುರುದ್ಧೇಶದಿಂದ ನೋಟಿಸು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ 71 ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದ್ದಾರೆ. ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿಗೆ ಒಂದು ನ್ಯಾಯ. ಸಾಮಾನ್ಯರಿಗೆ ಒಂದು ನ್ಯಾಯ ಮಾಡುತ್ತಿದ್ದಾರೆ. ಇವರನ್ನು ಕೂಡಲೇ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.ಡಿಡಿಪಿಐಗೆ ಕಚೇರಿಯಲ್ಲೇ ದಿಗ್ಬಂಧನಡಿಡಿಪಿಐ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಏಕಾಏಕಿ ಕಚೇರಿ ಒಳಗೆ ನುಗ್ಗಿ ನಿಂದಿಸಿದರು. ಕಮಿಷನರ್ ಬರುವರೆಗೆ ನೀವೂ ಹೋಗಬಾರದು, ನಾವೂ ಹೋಗುವುದಿಲ್ಲ ಎಂದು ಡಿಡಿಪಿಐ ಬೈಲಾಂಜನಪ್ಪ ಅವರನ್ನು ಕಚೇರಿಯಲ್ಲಿ ದಿಗ್ಬಂಧನಕ್ಕೆ ಒಳಪಡಿಸಿದರು.
ಪ್ರತಿಭಟನೆಯಲ್ಲಿ ಡಾಲ್ಪಿನ್ ನಾಗರಾಜ್,ವಿಸ್ಡಮ್ ಶಾಲೆಯ ತಮೀಮ್, ಶ್ರೀನಿವಾಸರೆಡ್ಡಿ, ರಘುನಾಥ್, ಚಂದ್ರಮೌಳಿ, ರಾಜಣ್ಣ, ಮಾಲತಿ,ಮಂಜುನಾಥ್ ಮತ್ತಿತರರು ಇದ್ದರು.