ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

| Published : Feb 12 2024, 01:31 AM IST

ಸಾರಾಂಶ

ಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೊಂದರೆ ಉಂಟಾಗುತ್ತಿದೆ.

ಬೈಲಹೊಂಗಲ: ಸಮೀಪದ ಕುರಗುಂದ ಗ್ರಾಮದ ಜಮೀನುಗಳಲ್ಲಿರುವ ರೈತರ ಮನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮದ ಕರ್ನಾಟಕ ನವ ನಿರ್ಮಾಣ ಪಡೆ ಅಧ್ಯಕ್ಷ ಸುನೀಲ ದೇಸಾಯಿ ಆಗ್ರಹಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೊಂದರೆ ಉಂಟಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೀಳಲಿದೆ. ತೋಟದ ಪಟ್ಟಿಯಲ್ಲಿ ಹುಳು ಹುಪ್ಪಡಿಗಳ ಕಾಟದಿಂದ ವಿದ್ಯುತ್‌ ಇಲ್ಲದ್ದರಿಂದ ಕತ್ತಲೆಯಲ್ಲಿ ಜೀವ ಭಯದಲ್ಲಿ ಬದುಕುವಂತಾಗಿದೆ. ಅಧಿಕಾರಿಗಳು ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸ್ಪಂದಿಸದಿದ್ದರೆ ಹೆಸ್ಕಾಂ ಕಚೇರಿ ಎದುರು ಧರಣಿ ನಡೆಸುವ ಮೂಲಕ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಸೋಮಲಿಂಗ ಮರೆನ್ನವರ, ಈರಣ್ಣಗೌಡ ಪಾಟೀಲ, ನೀಲಪ್ಪ ತಳವಾರ, ಸೋಮಲಿಂಗ ನಾಗಲಾಪೂರ, ಫಕ್ಕೀರ ಚಿಕ್ಕವೀರನ್ನವರ, ಬಸಪ್ಪ ಬಾಗೇವಾಡಿ ಇದ್ದರು.