ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ

| Published : Apr 22 2024, 02:16 AM IST

ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನೇಹಾ ಸಾವಿನಿಂದ ಅವರ ತಂದೆ-ತಾಯಿಗೆ ತುಂಬಲಾರದ ನಷ್ಟವಾಗಿದೆ. ಅವರ ದುಃಖದಲ್ಲಿ ನಾವು ಪಾಲುದಾರರಾಗಿದ್ದೇವೆ. ದೇವರು ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂಥಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಬಿಜೆಪಿ ಮುಖಂಡ ಮನೋಹರ ಶಿರೋಳ ಅಗ್ರಹಿಸಿದರು.

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಘಟನೆ ಖಂಡಿಸಿ ಭಾನುವಾರ ಹಿಂದೂ ಪರ ಸಂಘಟನೆಗಳು, ಜಂಗಮ ಸಮಾಜದವರು ನಗರದ ಬಸ್ ನಿಲ್ದಾಣದ ಹತ್ತಿರದ ಚನ್ನಮ್ಮ ಸರ್ಕಲ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನೇಹಾ ಸಾವಿನಿಂದ ಅವರ ತಂದೆ-ತಾಯಿಗೆ ತುಂಬಲಾರದ ನಷ್ಟವಾಗಿದೆ. ಅವರ ದುಃಖದಲ್ಲಿ ನಾವು ಪಾಲುದಾರರಾಗಿದ್ದೇವೆ. ದೇವರು ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಜಂಗಮ ಸಮಾಜದ ಅಧ್ಯಕ್ಷ ಚನ್ನಯ್ಯ ಚಟ್ಟಿಮಠ ಮಾತನಾಡಿ, ಹಿಂದುಗಳಿಗೆ ರಕ್ಷಣೆ ಕೊಡಬೇಕು. ಸರ್ಕಾರ ಲವ್‌ ಜಿಹಾದಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಅಲ್ಲದೆ ಪ್ರೀತಿ ನಿರಾಕರಿದ್ದ್ದಕ್ಕೆ ಇಂತಹ ಹೇಯ ಕೃತ್ಯವೆಸಗಿದ ಕೊಲೆ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಈ ಘಟನೆಯಿಂದ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸಲು ಹಿಂಜರಿಯುವಂತಾಗಿದೆ. ಕಾರಣ ನೇಹಾ ಕೊಲೆ ಆರೋಪಿಗೆ ನೀಡುವ ಗಲ್ಲುಶಿಕ್ಷೆ ಬೇರೆಯವರಿಗೆ ಮಾದರಿಯಾಗಲಿ ಎಂದರು.

ಶಿಕ್ಷಕ ಎಂ.ಎಸ್ ತೆಗ್ಗಿನಮಠ ಮಾತನಾಡಿ, ಹಾಡಹಗಲೇ ವಿದ್ಯಾರ್ಥಿನಿಯ ಹತ್ಯೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಂಥಹ ಅಮಾನವೀಯ ಕೃತ್ಯೆವೆಸಗಿದ ಆರೋಪಿಗೆ ಕಠೀಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ರಾಘು ಗರಗಟ್ಟಿ, ಸುವರ್ಣಾ ಆಸಂಗಿ ಮಾತನಾಡಿದರು. ಪುರಸಭೆ ಸದಸ್ಯ ರವಿ ಜವಳಗಿ, ಶೇಖರ ಅಂಗಡಿ, ರಾಜು ಚಮಕೇರಿ, ಪ್ರಹ್ಲಾದ ಸಣ್ಣಕ್ಕಿ, ಮುಖಂಡ ಶಿವಾನಂದ ಅಂಗಡಿ, ಬಸವರಾಜ ಹಿಟ್ಟಿನಮಠ, ಕುಮಾರ್‌ ಮನ್ನಯ್ಯನವರಮಠ, ಮಹಾಲಿಂಗಯ್ಯ ಮನ್ನಯ್ಯನವರಮಠ, ಮಹಾಂತೇಶ ಮನ್ನಯ್ಯನವರಮಠ, ಈಶ್ವರ ಮಠಪತಿ, ಗುರುಪಾದಯ್ಯ ಚಟ್ಟಿಮಠ, ಜಗದೀಶ ಜಕ್ಕಣ್ಣವರ, ಈರಯ್ಯ ಚಟ್ಟಿಮಠ, ಅಪ್ಪು ಹಿಟ್ಟಿನಮಠ, ವಿಜಯ ಜಗದಾಳ, ರಾಜು ಮನ್ನಯ್ಯನವರಮಠ ಹಣಮಂತ ಜಮಾದಾರ್‌, ಶಂಕರಗೌಡ ಪಾಟೀಲ್, ವಿಜಯ ಸಬಕಾಳೆ, ಮಾನಿಂಗ್ ಕಂಕಣವಾಡಿ, ಮಾನಿಂಗ್ ಕಂಠಿ, ಯಮನೂ ಉಪ್ಪಾರ, ಶಿವಾನಂದ್ ಹುಣಶ್ಯಾಳ. ಬಸು ವಗ್ಗರ, ಚನ್ನಪ್ಪ ಪಟ್ಟಣಶೆಟ್ಟಿ, ವಿನೋದ ಕಡಪಟ್ಟಿ, ಕಲ್ಲಯ್ಯ ಮಠದ, ಮಲ್ಲು ಸಂಗಣ್ಣವರ, ಚನ್ನಪ್ಪ ರಾಮೋಜಿ, ಬಸವರಾಜ ಪರೀಟ, ಮಲ್ಲಪ್ಪಾ ಸೈದಾಪುರ, ಸಾಗರ ಮಠದ ಸೇರಿ ಹಲವರು ಇದ್ದರು. ನೇಹಾ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿದರು. ಎಲ್ಲರೂ ದೀಪ ಬೆಳಗಿಸಿ ನೇಹಾ ಆತ್ಮಕ್ಕೆ ಶಾಂತಿ ಕೋರಿದರು.