ವಿದ್ಯಾರ್ಥಿಗಳಲ್ಲಿ ಉದ್ಯಮಶಾಲತೆ ಬೆಳೆಸಿ

| Published : Jul 13 2024, 01:35 AM IST

ಸಾರಾಂಶ

ನನ್ನ ದೇಶ ಮೊದಲು ಎನ್ನುವ ಸಾಮಾಜಿಕ ಪ್ರಜ್ಞೆ ನಮ್ಮೆಲ್ಲರಲ್ಲಿ ಜಾಗೃತವಾಗಿದ್ದಾಗ ಮಾತ್ರ ದೇಶ ನಿಜವಾದ ಪ್ರಗತಿ ಸಾಧಿಸುತ್ತದೆ, ಇದ್ದಕ್ಕಾಗಿ ನಮ್ಮಲ್ಲೆರ ಕನಸುಗಳು ಒಂದಾಗಬೇಕು, ಮೌಲ್ಯಗಳೇ ಮುಖ್ಯವಾಗಬೇಕು, ನಾನು ಉತ್ತಮನಾಗಬೇಕು ಎನ್ನುವ ನಿರಂತರ ತುಡಿತ ನಮ್ಮಲ್ಲಿರಬೇಕು

ಕನ್ನಡಪ್ರಭ ವಾರ್ತೆ ಕೆಜಿಎಫ್ವಿಶ್ವ ವಿದ್ಯಾಲಯಗಳಿಂದ ಹೊರ ಬರುತ್ತಿರುವ ಶೇ.೭೦ರಷ್ಟು ಮಂದಿ ಪದವೀಧರರಿಗೆ ಸೂಕ್ತ ಉದ್ಯೋಗ ಸಿಕ್ಕಲ್ಲ ಎನ್ನುವ ಸಮಸ್ಯೆ ಇದ್ದು, ಹಾಗಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಡಿಗ್ರಿಗಳಿಗಾಗಿ ಸಿದ್ದಪಡಿಸುವ ಬದಲು ಉದ್ಯಮಶೀಲತೆ ಅವರಲ್ಲಿ ಬೆಳೆಸುವಂತಾಗಬೇಕೆಂದು ಬೆಂಗಳೂರು ಉತ್ತರ ವಿವಿ ಉಪಕುಲಪತಿ ನಿರಂಜನ ವಾನಳ್ಳಿ ತಿಳಿಸಿದರು.ಶ್ರೀ ಭಗಾವನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ೨೦ನೇ ವರ್ಷದ ಪದವಿ ಪ್ರಧಾನ ಘಟಿಕ್ಸೋವದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮೌಲ್ಯಗಳೇ ಮುಖ್ಯವಾಗಬೇಕು

ನನ್ನ ದೇಶ ಮೊದಲು ಎನ್ನುವ ಸಾಮಾಜಿಕ ಪ್ರಜ್ಞೆ ನಮ್ಮೆಲ್ಲರಲ್ಲಿ ಜಾಗೃತವಾಗಿದ್ದಾಗ ಮಾತ್ರ ದೇಶ ನಿಜವಾದ ಪ್ರಗತಿ ಸಾಧಿಸುತ್ತದೆ, ಇದ್ದಕ್ಕಾಗಿ ನಮ್ಮಲ್ಲೆರ ಕನಸುಗಳು ಒಂದಾಗಬೇಕು, ಮೌಲ್ಯಗಳೇ ಮುಖ್ಯವಾಗಬೇಕು, ನಾನು ಉತ್ತಮನಾಗಬೇಕು ಎನ್ನುವ ನಿರಂತರ ತುಡಿತ ನಮ್ಮಲ್ಲಿರಬೇಕೆಂದು ತಿಳಿಸಿದರು. ಜಗತ್ತಿನಲ್ಲಿ ಇಂದು ಎಲ್ಲೆಡೆ ಗುಣಮಟ್ಟದ ಮತ್ತು ಕೌಶಲ್ಯದಿಂದ ಕೂಡಿದ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಇದೆ, ಯುವ ರಾಷ್ಟ್ರವೆಂಬ ಖ್ಯಾತಿ ಇರುವ ಭಾರತದಲ್ಲಿ ಇಂತಹ ಜಾಗತಿಕ ಸವಾಲನ್ನು ಎದುರಿಸುವ ಯುವ ಸಮೂಹದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕ್ಯಾಂಪಸ್‌ ಸೆಲೆಕ್ಷನ್‌ ಅವಕಾಶ

ಕಾಲೇಜಿನ ಪ್ರಾಂಶುಪಾಲೆ ರೇಖಾ ಸೇಥಿ ಮಾತನಾಡಿ, ವಿದ್ಯಾರ್ಥಿ ಜೀವನ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ದಿಯ ಮೂಲಾಧಾರ, ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನ ಅಯ್ಕೆ ಮೂಲಕ ಉದ್ಯೋಗ ನೀಡಲು ರಾಜ್ಯದ ಪ್ರತಿಷ್ಟಿತ ಸಂಸ್ಥೆಗಳು ಮುಂದೆ ಬಂದಿದ್ದು, ಉನ್ನತವಾಗಿ ತೇರ್ಗೆಡೆ ಹೊಂದಿರುವ ಪದವಿ ವಿದ್ಯಾರ್ಥಿಗಳಿಗೆ ಜೈನ್ ಕಾಲೇಜಿನ ಆಡಳಿತ ಮಂಡಳಿಯು ವಿಪುಲ ಅವಕಾಶಗಳನ್ನು ಕಲ್ಪಿಸಿರುವುದಾಗಿ ತಿಳಿಸಿದರು.

ಕಾಲೇಜಿನ ಎಲ್ಲ ವಿಭಾಗಗಳಲ್ಲಿ ಉನ್ನತ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದ ವಿದ್ಯಾರ್ಥಿಗಳಿಗೆ ಉಪ-ಕುಲಪತಿ ನಿರಂಜನ್ ವಾನಳ್ಳಿ, ಕಾಲೇಜಿನ ಪ್ರಾಂಶುಪಾಲೆ ರೇಖಾ ಸೇಥಿ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ವಿದ್ಯಾರ್ಥಿಗಳನ್ನು ಗೌರವಿಸಿದರು.