ಹಾಸನಾಂಬೆ ದರ್ಶನಕ್ಕೆ ಹತ್ತನೇ ದಿನವೂ ಭಕ್ತಸಾಗರ

| Published : Oct 19 2025, 01:00 AM IST

ಹಾಸನಾಂಬೆ ದರ್ಶನಕ್ಕೆ ಹತ್ತನೇ ದಿನವೂ ಭಕ್ತಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನದ ಹತ್ತನೇ ದಿನವಾದ ಶನಿವಾರ ಹಾಸನ ನಗರವು ಭಕ್ತರ ಮಹಾಸಾಗರದಿಂದ ತುಂಬಿಹೋಗಿತ್ತು. ಬೆಳಿಗ್ಗೆ ಮೂರು ಗಂಟೆಯಿಂದಲೇ ಸಾವಿರಾರು ಭಕ್ತರು ಧರ್ಮ ದರ್ಶನ ಮತ್ತು ವಿಶೇಷ ದರ್ಶನ ಸಾಲಿನಲ್ಲಿ ಸತತ ಹತ್ತು ಗಟೆಗಳಂ ಕಾಲ ನಿಂತು ದೇವಿಯ ದರ್ಶನ ಪಡೆದರು. ದೇವಾಲಯ ಸಮಿತಿಯ ಆಡಳಿತಾಧಿಕಾರಿ ಮಾರುತಿ ಅವರು, ಸಚಿವರು ಸ್ವತಃ ಹಾಜರಿಲ್ಲದಿದ್ದರೆ ಅವರ ಕುಟುಂಬ ಸದಸ್ಯರಿಗೂ ಪ್ರತ್ಯೇಕ ದರ್ಶನಕ್ಕೆ ಅವಕಾಶವಿಲ್ಲ. ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಈ ನಿಯಮ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನದ ಹತ್ತನೇ ದಿನವಾದ ಶನಿವಾರ ಹಾಸನ ನಗರವು ಭಕ್ತರ ಮಹಾಸಾಗರದಿಂದ ತುಂಬಿಹೋಗಿತ್ತು. ಬೆಳಿಗ್ಗೆ ಮೂರು ಗಂಟೆಯಿಂದಲೇ ಸಾವಿರಾರು ಭಕ್ತರು ಧರ್ಮ ದರ್ಶನ ಮತ್ತು ವಿಶೇಷ ದರ್ಶನ ಸಾಲಿನಲ್ಲಿ ಸತತ ಹತ್ತು ಗಟೆಗಳಂ ಕಾಲ ನಿಂತು ದೇವಿಯ ದರ್ಶನ ಪಡೆದರು.

ಜಿಲ್ಲಾಡಳಿತವು ಭಕ್ತರ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕಾಗಿ ಧರ್ಮ ದರ್ಶನ ಸಾಲಿನ ಬ್ಯಾರಿಕೇಡ್‌ಗಳನ್ನು ಹತ್ತು ಕಿಲೋಮೀಟರ್‌ಗಳವರೆಗೆ ವಿಸ್ತರಿಸಿದೆ. ೩೦೦ ಮತ್ತು ೧೦೦೦ ವಿಶೇಷ ದರ್ಶನ ಸಾಲುಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ವಾರಾಂತ್ಯಹಾಗೂ ಸರಣಿ ರಜೆಗಳ ಹಿನ್ನೆಲೆಯಲ್ಲಿ ಹೊರರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದಲೂ ಭಕ್ತರ ಮಹಾಪ್ರವಾಹ ಹರಿದುಬಂದಿದ್ದು, ಅನೇಕರು ದೇವಿ ದರ್ಶನ ಪಡೆದ ಬಳಿಕ ಬಸ್ ನಿಲ್ದಾಣಗಳಲ್ಲಿ ಹಾಗೂ ರಸ್ತೆಗಳ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದೇವಾಲಯ ಸಮಿತಿಯ ಆಡಳಿತಾಧಿಕಾರಿ ಮಾರುತಿ ಅವರು, ಸಚಿವರು ಸ್ವತಃ ಹಾಜರಿಲ್ಲದಿದ್ದರೆ ಅವರ ಕುಟುಂಬ ಸದಸ್ಯರಿಗೂ ಪ್ರತ್ಯೇಕ ದರ್ಶನಕ್ಕೆ ಅವಕಾಶವಿಲ್ಲ. ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಈ ನಿಯಮ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.ಬೆಳ್ಳಂಬೆಳಿಗ್ಗೆ ದೇವಾಲಯಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಸ್ವತಃ ಮೈಕ್ ಹಿಡಿದು ಭಕ್ತರಿಗೆ ಮಾರ್ಗದರ್ಶನ ನೀಡಿದರು. ಧರ್ಮ ದರ್ಶನಕ್ಕೆ ಸರಾಸರಿ ೮-೯ ಗಂಟೆ, ೩೦೦ ಸಾಲಿಗೆ ೪-೫ ಗಂಟೆ, ಹಾಗೂ ೧,೦೦೦ ಸಾಲಿಗೆ ೨-೩ ಗಂಟೆ ಬೇಕಾಗುತ್ತದೆ. ನಿರೀಕ್ಷೆಗೂ ಮೀರಿ ಜನರು ಬರುತ್ತಿದ್ದಾರೆ, ಹೀಗಾಗಿ ಸಮಯ ಸ್ವಲ್ಪ ವಿಳಂಬವಾಗುತ್ತಿದೆ. ಭಕ್ತರು ಮಾನಸಿಕವಾಗಿ ಸಿದ್ಧರಾಗಿ ಬರಬೇಕು ಎಂದು ತಿಳಿಸಿದರು. ಅವರು ಮುಂದಿನ ಅಕ್ಟೋಬರ್‌ ೨೦ರಿಂದ ಪ್ರೋಟೋಕಾಲ್ ಬಂದ್ ಆಗಲಿದ್ದು, ಗಣ್ಯರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೆ ಸಹ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ಘೋಷಿಸಿದರು.ಬಸ್‌ಗಳಿಲ್ಲದೇ ತೊಂದರೆ

ಭಕ್ತರ ಅತಿ ಹೆಚ್ಚು ಸಂಖ್ಯೆಯಿಂದ ಹಾಸನ ಬಸ್ ನಿಲ್ದಾಣಗಳಲ್ಲಿ ಭಾರಿ ರಶ್‌ ಉಂಟಾಗಿದೆ. ಬೆಳಿಗ್ಗೆ ಬಸ್‌ಗಳ ಸಂಖ್ಯೆ ಕಡಿಮೆಯಾದ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಿರಿಸಾವೆ ಗ್ರಾಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಂಟೆಗಟ್ಟಲೆ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ದೃಶ್ಯಗಳು ಕಂಡುಬಂದಿವೆ. * ಬಾಕ್ಸ್‌: ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ದರ್ಶನ:ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ದೇವಿಯ ದರ್ಶನ ಪಡೆದರು. ತಮ್ಮ ಆಪ್ತರೊಂದಿಗೆ ಬೆಳಿಗ್ಗೆ ದೇವಾಲಯಕ್ಕೆ ಆಗಮಿಸಿದ ಅವರು ಭಕ್ತರ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬಳಿಕ ಸಿದ್ದೇಶ್ವರಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದರು. ಈ ವೇಳೆ ದೇವಾಲಯದ ಆವರಣದಲ್ಲಿ ಮಾಧ್ಯಮದವರು ಚಿತ್ರೀಕರಣ ಮಾಡಲು ಯತ್ನಿಸಿದಾಗ, ಸಿಎಂ ಪತ್ನಿಯ ಭದ್ರತಾ ಸಿಬ್ಬಂದಿ ಹಾಗೂ ಗನ್‌ಮ್ಯಾನ್‌ಗಳು ಮಾಧ್ಯಮದವರಿಗೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.