ಸಾರಾಂಶ
ಗ್ರಾಮದ ಬಯಲು ರಂಗಮಂದಿರದಲ್ಲಿ ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಗಡಿ ಗ್ರಾಮ ಚೌಳಹಿರಿಯೂರಿನಲ್ಲಿ ವಿಷ್ಣು ಸೇನಾ ಸಮಿತಿಯಿಂದ ಆಯೋಜಿಸಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಈ14ನೇ ಪುಣ್ಯಸ್ಮರಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಗ್ರಾಮದ ಬಯಲು ರಂಗಮಂದಿರದಲ್ಲಿ ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ವಕೀಲ ಲಯನ್ ರವಿಕುಮಾರ್ ಉದ್ಘಾಟಿಸಿ ಮಾತನಾಡಿ, ಸೇನಾ ಸಮಿತಿಯಿಂದ ಸಾಮಾಜಿಕ ಸೇವಾ ಕಾರ್ಯಕ್ರಮ ನಡೆಸುತ್ತಿದ್ದು, ಈ ಹಿಂದೆಯೂ ವಿಷ್ಣು ಸೇನಾ ಸಮಿತಿಯಿಂದ ಸೇವಾ ಶಿಬಿರ, ಕಾರ್ಯಾಗಾರಗಳಂತ ಅನೇಕ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದೆ. ಈ ನಿಟ್ಟಲ್ಲಿ ಗ್ರಾಮೀಣ ಪ್ರದೇಶ ಚೌಳಹಿರಿಯೂರು ಗ್ರಾಮದಲ್ಲಿ ವಿಷ್ಣು ಸ್ಮರಣೆ ಆಯೋಜಿಸಲಾಗಿದೆ. ಡಾ.ವಿಷ್ಣುವರ್ಧನ್ ತಮ್ಮ ನಟನೆ ಮೂಲಕ ಸಮಾಜದ ಯುವಕರು ಸೇರಿದಂತೆ ಎಲ್ಲರಿಗೂ ಉತ್ತಮ ಸಂದೇಶ ನೀಡಿದ್ದಾರೆ. ಈ ಗ್ರಾಮದಲ್ಲಿ ಅಂತಹ ಮಹಾನ್ ನಟನ ಪುತ್ಥಳಿ ಸ್ಥಾಪನೆ ಮಾಡಲು ಗ್ರಾಪಂಗೆ ಮನವಿ ಅರ್ಪಿಸಲಾಗುತ್ತಿದೆ ಎಂದು ಹೇಳಿದರು.ವಿಷ್ಣು ಸೇನಾ ಸಮಿತಿ ತಾಲೂಕು ಅಧ್ಯಕ್ಷ ಮನು ಮರುಗುದ್ದಿ ಮಾತನಾಡಿ, ತಮ್ಮ ಅಭಿನಯದ ಮೂಲಕ ಕನ್ನಡ ನಾಡಿನ ಕೋಟ್ಯಂತರ ಅಭಿಮಾನಿಗಳನ್ನು ಪಡೆದಿದ್ದ ಡಾ ವಿಷ್ಣುವರ್ಧನ್ ಪ್ರಚಾರ ಬಯಸದೆ ಮರೆಯಾಗಿಯೇ ಸಮಾಜದ ಸೇವೆ ಮಾಡುತ್ತಿದ್ದರು. ಅಂತಹ ಮಹಾನ್ ನಟನನನ್ನು ಸಮಾರಂಭದ ಮೂಲಕ ಸ್ಮರಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪ್ಂ ಅಧ್ಯಕ್ಷೆ ಅನಿತಾ ಮಲ್ಲೇಶಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ. ವಿಷ್ಣುವರ್ಧನ್ ರವರ 2024ರ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಗಾಯಕ ಹಿರೇನಲ್ಲೂರು ಶ್ರೀನಿವಾಸ್ ತಂಡದಿಂದ ರಸಮಂಜರಿ ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲೇಶಪ್ಪ, ಸದಸ್ಯ ಮೂರ್ತಪ್ಪ, ಜಿಮ್ ಚೇತನ್, ವಿನಯ್ ಅಪ್ಪಾಜಿ, ಪ್ರವೀಣ್ ಸೇರಿದಂತೆ ವಿವಿಧ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.13ಕೆಕೆಡಿಯು1.ಚೌಳಹಿರಿಯೂರು ಗ್ರಾಮದಲ್ಲಿ ವಿಷ್ಟು ಸೇನಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಅನಿತಾ ಮಲ್ಲೇಶಪ್ಪನವರನ್ನು ಸನ್ಮಾನಿಸಲಾಯಿತು.