ಸಾರಾಂಶ
ಜಿಲ್ಲೆಯ ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೈದೀವಿಗೆಗಳು ಬಹಳ ಪ್ರಾಮುಖ್ಯತೆ ಪಡೆದಿದೆ. ಇದನ್ನು ಕೇವಲ ಪಠ್ಯಕ್ರಮದ ಜೊತೆಗೆ ಹೆಚ್ಚುವರಿ ಕಲಿಕ ಸಾಮಾಗ್ರಿಗಳಾಗಿ ಬಳಸಿಕೊಳ್ಳಬೇಕೆ ವಿನಃ ಇದನ್ನೇ ಮುಖ್ಯ ಪಠ್ಯವಾಗಿ ಅಭ್ಯಸಿಸಬಾರದು . ಪ್ರತಿ ಶಿಕ್ಷಕರಿಗೂ ಅವರದೇ ಆದ ಜವಾಬ್ದಾರಿಗಳಿದೆ. ಈಗಾಗಲೇ ಬಹುತೇಕ ಎಲ್ಲಾ ಶಾಲೆಗಳಲ್ಲಿ ಪಠ್ಯಕ್ರಮ ಪೂರ್ಣಗೊಳಿಲಾಗಿದೆ
ಕನ್ನಡಪ್ರಭ ವಾರ್ತೆ ಕೋಲಾರಶಾಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಜವಾಬ್ದಾರಿ ಶಿಕ್ಷಕರ ಆದ್ಯ ಕರ್ತವ್ಯ ಅದರಿಂದ ತಪ್ಪಿಸಿಕೊಳ್ಳಲಾಗದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲಾಧಿಕಾರಿ ಕಛೇರಿ ಆಡಿಟೋರಿಯಂನಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ ಹಾಗೂ ಪರೀಕ್ಷಾ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೈದೀವಿಗೆ ಸರಿಯಾಗಿ ಬಳಸಿಕೊಳ್ಳಿ
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಜಿಲ್ಲೆಯಲ್ಲಿ ಹಾಕಿಕೊಂಡಿರುವ ಯೋಜನೆಗಳಲ್ಲಿ ಮುಖ್ಯ ಶಿಕ್ಷಕರಿಗೆ ಕಾರ್ಯಾಗಾರವು ಒಂದು ಯೋಜನೆಯಾಗಿದೆ. ಜಿಲ್ಲಾಡಳಿತ, ಜಿಪಂ ಇಂತಹ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ವಿಷನ್ ಕೋಲಾರ, ಸ್ಪರ್ಧಾತ್ಮಕ ಪರೀಕ್ಷಗಳ ಕೈಪಿಡಿಗಳು, ಸಿಇಟಿ ಮತ್ತು ನೀಟ್ ಪುಸ್ತಕಗಳ ವಿತರಣೆ ಮುಂತಾದ ಕ್ರಮಗಳು ಮುಖ್ಯವಾದವು. ಅದೇ ನಿಟ್ಟಿನಲ್ಲಿ ಇಂದು ಎಸ್.ಎಸ್.ಎಲ್.ಸಿ ಮಾರ್ಗದರ್ಶಿ ಕೈದೀವಿಗೆ ಪುಸ್ತಕಗಳನ್ನು ವಿದ್ಯಾರ್ಥಿಗಳ ಕೈಗಿಡುತ್ತಿದೆ ಪಠ್ಯಪರಿಕರಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು. ಈ ಹಿಂದೆ ಕಂದಾಯ ಸೇವೆಗಳನ್ನು ನೀಡುವುದರಲ್ಲಿ ೨೭ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆಯನ್ನು ಸಿಬ್ಬಂದಿ ಕೊರತೆ ನಡೆವೆಯೂ ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ತರಲಾಗಿದೆ. ಇದಕ್ಕೆ ಮುಖ್ಯ ಕಾರಣ ಸಿಬ್ಬಂದಿಗಳ ಮನಸ್ಥಿತಿ ಮತ್ತು ಕಾರ್ಯ ವೈಖರಿಯನ್ನು ಬದಲಿಸಿದ್ದೆ ಆಗಿದೆ. ಅಂತಯೇ ನಿಮ್ಮ ಶಾಲಾ ಘಟಕಗಳಲ್ಲಿ ಕಾರ್ಯ ವೈಖರಿಯನ್ನು ಹಾಗೂ ಶಿಕ್ಷಕರ ಮನಸ್ಥಿತಿಯನ್ನು ಬದಲಿಸಿ ಉತ್ತಮ ಪಲಿತಾಂಶ ಬರುವಂತೆ ಮಾಡಬೇಕು ಎಂದರು.ಕೈದೀವಿಗೆಯೇ ಪಠ್ಯವಲ್ಲ
ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಮಾತನಾಡಿ, ಜಿಲ್ಲೆಯ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಇಂದು ಬಿಡುಗಡೆ ಮಾಡಲಾದ ಕೈದೀವಿಗೆಗಳು ಬಹಳ ಪ್ರಾಮುಖ್ಯತೆ ಪಡೆದಿದೆ. ಇದನ್ನು ಕೇವಲ ಪಠ್ಯಕ್ರಮದ ಜೊತೆಗೆ ಹೆಚ್ಚುವರಿ ಕಲಿಕ ಸಾಮಾಗ್ರಿಗಳಾಗಿ ಬಳಸಿಕೊಳ್ಳಬೇಕೆ ವಿನಃ ಇದನ್ನೇ ಮುಖ್ಯ ಪಠ್ಯವಾಗಿ ಅಭ್ಯಸಿಸಬಾರದು . ಪ್ರತಿ ಶಿಕ್ಷಕರಿಗೂ ಅವರದೇ ಆದ ಜವಾಬ್ದಾರಿಗಳಿದೆ. ಈಗಾಗಲೇ ಬಹುತೇಕ ಎಲ್ಲಾ ಶಾಲೆಗಳಲ್ಲಿ ಪಠ್ಯಕ್ರಮ ಪೂರ್ಣಗೊಳಿಲಾಗಿದೆ. ಇಂತಹ ಕೈದೀವಿಗೆಯ ಸಹಾಯದಿಂದ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿಗಳನ್ನು ಸನ್ನದ್ದು ಮಾಡಬೇಕು ಎಂದರು.ಶ್ರದ್ಧೆಯಿಂದ ಅಭ್ಯಾಸ ಮಾಡಿ
ಡಯಟ್ ಪ್ರಾಂಶುಪಾಲ ಚಂದ್ರಪ್ಪ ಮಾತನಾಡಿ, ಶ್ರದ್ಧೆಯಿಂದ ಕಲಿಸಿದರೆ ಎಲ್ಲಾ ವಿದ್ಯಾರ್ಥಿಗಳು ಪಾಸಾಗಲಬಲ್ಲರು. ಪ್ರತಿ ವಿದ್ಯಾರ್ಥಿಗೂ, ಪ್ರತಿ ಶಿಕ್ಷಕರು ಕಲಿಯಲು ಸಹಕಾರ ನೀಡಬೇಕು ಎಂದು ತಿಳಿಸಿದರು.ಕಾರ್ಯಾಗಾರದಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಡಯಟ್ ತಾಂತ್ರಕಾಧಿಕಾರಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಮೈಲಾರಪ್ಪ, ಸಹಾಯಕ ನಿರ್ದೇಶಕ ಮುರಳಿ ಇದ್ದರು.