ರೈತರ ಪಂಪ್‍ಸೆಟ್‍ಗೆ ಆಧಾರ್ ಜೋಡಣೆ ಖಂಡಿಸಿ ಪ್ರತಿಭಟನೆ

| Published : Jul 20 2024, 12:46 AM IST

ರೈತರ ಪಂಪ್‍ಸೆಟ್‍ಗೆ ಆಧಾರ್ ಜೋಡಣೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

protest againt government policy, pumpset, Adhar joint: farmers angry with governent

ಕನ್ನಡಪ್ರಭ ವಾರ್ತೆ ಸಿರಿಗೆರೆ

ರೈತರ ಮೋಟಾರ್ ಪಂಪ್‍ಗಳಿಗೆ ಆಧಾರ್ ಜೋಡಣೆ ರಾಜ್ಯ ಸರ್ಕಾರದ ನೀತಿ ಖಂಡಿಸಿ ಭರಮಸಾಗರದಲ್ಲಿ ರೈತ ನಾಯಕ ಪುಟ್ಟಣ್ಣ ಬಣದ ನೂರಾರು ರೈತರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸಾಮುದ್ರ ಗ್ರಾಮದ ಎಂ.ಎಸ್.ಪ್ರಭು ನೇತೃತ್ವದಲ್ಲಿ ಬೈಕ್ ರ್‍ಯಾಲಿ ನಡೆಸಿದರು. ನಂತರ ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಬೆಸ್ಕಾಂ ಎಇಇ ಜಯಣ್ಣ ಅವರಿಗೆ ಮನವಿ ಸಲ್ಲಿಸಿದರು.

ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಭು, ರಾಜ್ಯ ಸರ್ಕಾರ ಮತ್ತು ಬೆಸ್ಕಾಂ ಅಧಿಕಾರಿಗಳು ರೈತರ ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ರೈತರಿಗೆ ಘೋರ ಅನ್ಯಾಯ ಮಾಡುತ್ತಿದೆ.

ಕಳೆದ ವರ್ಷ ತೀವ್ರ ಬರಗಾಲ ಅನುಭವಿಸಿ, ರೈತರು ಆರ್ಥಿಕವಾಗಿ ಸಂಕಷ್ಟ ಅನುಭವಿಸಿದ್ದಾರೆ.

ರೈತರು ಬೆಳೆದ ಬೆಳೆಗಳಿಗೆ ಎಂಎಸ್‍ಪಿ ಕಾನೂನು ಜಾರಿಗೆ ತಂದು ನಿಗದಿತ ದರ ಮಾಡಿ, ನಂತರ ಆಧಾರ್ ಜೋಡಣೆ ಅಥವಾ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಲಿ.

ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಿಸುವ ಪ್ರಕ್ರಿಯೆ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಂ.ಬಸವರಾಜ್, ಶಂಭುಲಿಂಗಪ್ಪ, ರವಿಕುಮಾರ್, ಎಂ.ಬಿ.ಶಿವರಾಜ್ ಪಾಟೀಲ್, ಎಸ್.ಎಸ್.ಶ್ರೀನಿವಾಸ್ ಭಾಗವಹಿಸಿದ್ದರು.

----

ಫೋಟೊ: ಭರಮಸಾಗರದಲ್ಲಿ ಬೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ಖಂಡಿಸಿ ಮನವಿ ಸಲ್ಲಿಸಿದರು.