ಸಾರಾಂಶ
11 ಗಂಟೆ ವಿದ್ಯುತ್ ಕೊಡುವುದನ್ನು ನಿಲ್ಲಿಸಿ, 1 ಗಂಟೆ ಕೊಟ್ಟರೆ ಭೂಮಿ ಪರಿಸ್ಥಿತಿ, ಭೂಮಿಯನ್ನೇ ನಂಬಿದ ರೈತನ ಪರಿಸ್ಥಿತಿ ಏನಾಗಬೇಕು. ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ವಿದ್ಯುತ್ ಬದಲಿಗೆ ನಮಗೆ ವಿಷ ಕೊಡಿ, ನಾವು ಸತ್ತಹೋಗುತ್ತೇವೆ.
ಕನ್ನಡಪ್ರಭ ವಾರ್ತೆ ಸಾವಳಗಿ
ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಹೆಸ್ಕಾಂ ಕಚೇರಿ ಮುಂಭಾಗ ವಿವಿಧ ಗ್ರಾಮಗಳ ರೈತರು ಸೋಮವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.ಹಾಳಟ್ಟಿ, ಟಕ್ಕೋಡ, ಜಂಬಗಿ ಬಿಕೆ, ಜಂಬಗಿ ಕೆಡಿ, ಶೂರಪಾಲಿ ಸೇರಿದಂತೆ ಸುತ್ತ - ಮುತ್ತಲಿನ ಹಳ್ಳಿಗಳ ರೈತರು ಹೆಸ್ಕಾ ಕಛೇರಿಯಲ್ಲಿ ಪ್ರತಿಭಟಣೆ ಮಾಡಿದರು. ಸ್ಥಳಕ್ಕೆ ಮೇಲಾಧಿಕಾರಿಗಳು ಬರುವವರೆಗೂ ಪ್ರತಿಭಟಣೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಸಾವಳಗಿ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಿ ಆಕ್ರೋಶ ಹೊರಹಾಕಿದರು.
ಈಗಾಗಲೇ ಮುಂಗಾರು ಹಾಗೂ ಹಿಂಗಾರು ಮಳೆ ಇಲ್ಲದ್ದರಿಂದ ಬೆಳೆನಾಶವಾಗಿ ಸಂಕಷ್ಟು ಅನುಭವಿಸಿದ್ದೇವೆ. ಈಗ ನಮ್ಮ ಹೊಲದಲ್ಲಿರುವ ಬೆಳೆಗಳಿಗೆ ನೀರು ಹಾಯಿಸಲು ಪಂಪ್‌ಸೆಟ್‌ಗಳಿಗೆ ಸರಿಯಾದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಳೆಗಳು ಒಣಗಿ ಹೋಗುತ್ತಿವೆ, ಮೊದಲೆ ಬರಗಾಲ ಇದ್ದರಿಂದ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾದ ನೀರು ಸಿಗುತ್ತಿಲ್ಲ. ಹೊಳೆ ದಂಡಿ ಮೋಟಾರ್‌ನಿಂದ ನೀರು ಹಾಯಿಸಬೇಕಂದರೆ ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ನಮ್ಮದು ಹೆಂತಾ ಕೆಟ್ಟ ಹಣೆಬರಹ ಇದೆ ನೋಡಿ ಎಂದು ರೈತರು ಸಂಕಷ್ಟು ತೋಡಿಕೊಂಡರು.ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗಾಗಿ 1 ಗಂಟೆ ಕರೆಂಟ್ ಕೊಡುತ್ತೇವೆ ಅಂತಾ ಭರವಸೆ ನೀಡಿದ್ದಾರೆ. 20 - 25 ಸಾವಿರ ಎಕರೆ ಜಮೀನು ಇದೆ. ಎಲ್ಲೆಡೆ ಕಬ್ಬು, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಇವೆ. ಕುಡಿಯಲು ಅಷ್ಟೇ ನೀರು ಎಂದರೆ ರೈತರ ಪರಿಸ್ಥಿತಿ ಹೇಗೇ?. 11 ಗಂಟೆ ಕರೆಂಟ್ ಬರುತ್ತಿತ್ತು. ಈಗ 1 ಗಂಟೆ ವಿದ್ಯುತ್ ಪೂರೈಸಿದರೆ ರೈತರು ಬದುಕುವುದರು ಹೇಗೆ? ದಯವಿಟ್ಟು ನಮ್ಮ ರೈತರ ಪರಿಸ್ಥಿತಿ ಸ್ವಲ್ಪ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಪ್ರತಿಭಟನೆ ವೇಳೆ ಶ್ರೀಶೈಲ ಬರಗಿ, ಕುಮಾರ ಹವಾಲ್ದಾರ, ಭಗವಂತ ಕರೆ, ಶಿವಲಿಂಗ ತೇಲಿ, ರಜಾಕ ಮುಲ್ಲಾ, ಬಸಪ್ಪ ಕಾಖಂಡಕಿ, ದಾದು ನ್ಯಾಮಗೌಡ, ಟೋಪನ ಶಿರಹಟ್ಟಿ ಸೇರಿದಂತೆ ಅನೇಕರು ಇದ್ದರು.--
ಕೋಟ್..11 ಗಂಟೆ ವಿದ್ಯುತ್ ಕೊಡುವುದನ್ನು ನಿಲ್ಲಿಸಿ, 1 ಗಂಟೆ ಕೊಟ್ಟರೆ ಭೂಮಿ ಪರಿಸ್ಥಿತಿ, ಭೂಮಿಯನ್ನೇ ನಂಬಿದ ರೈತನ ಪರಿಸ್ಥಿತಿ ಏನಾಗಬೇಕು. ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ವಿದ್ಯುತ್ ಬದಲಿಗೆ ನಮಗೆ ವಿಷ ಕೊಡಿ, ನಾವು ಸತ್ತಹೋಗುತ್ತೇವೆ. ದಾದು ನ್ಯಾಮಗೌಡ. ರೈತರು ಟಕ್ಕೋಡ