ವಿದ್ಯಾ ಸರಸ್ವತಿ ಮಡಿಲಿಗೆ ‘ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್’ ಪ್ರಶಸ್ತಿ

| Published : Nov 13 2024, 12:08 AM IST

ವಿದ್ಯಾ ಸರಸ್ವತಿ ಮಡಿಲಿಗೆ ‘ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್’ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್‌ನಲ್ಲಿ ಪ್ರತಿಷ್ಠಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್‌ಸಿಐ) ಇದರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್‌ನಲ್ಲಿ ಪ್ರತಿಷ್ಠಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್‌ಸಿಐ) ಇದರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಇದೇ ಸಂದರ್ಭದಲ್ಲಿ ಉಡುಪಿಯ ಫ್ಯಾಷನ್ ತಾರೆ​ ವಿದ್ಯಾ ಸರಸ್ವತಿ ಅವರಿಗೆ ‘ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್’ ಎಂಬ ಪ್ರಶಸ್ತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀಪಾದ್ ನಾಯಕ್ ಅವರ ಮೂಲಕ ಪ್ರದಾನ ಮಾಡಲಾಯಿತು.

ವಿದ್ಯಾ ಸರಸ್ವತಿ ಅವರು ಮಿಸೆಸ್ ಇಂಡಿಯಾ ಕರ್ಣಾಟಕದ ‘ವಾರಿಯರ್ ಕ್ವೀನ್’ ಮತ್ತು ‘ಟ್ರೆಡಿಷನಲ್ ವಿನ್ನರ್’ ಆಗಿದ್ದಾರೆ. ‘2022ರ ಕ್ಯೂಟೆಸ್ಟ್ ಮಾಮ್’ ಕಿರೀಟವನ್ನೂ ಪಡೆದಿದ್ದಾರೆ.​ ಜ್ಯುವೆಲ್ಲರಿ ಹಾಗೂ ಉಡುಪಿ ಕೈಮಗ್ಗ ಸೀರೆಯ ಮೊದಲ ರೂಪದರ್ಶಿಯೂ ಆಗಿದ್ದಾರೆ.ಕಳೆದ 4 ವರ್ಷಗಳಿಂದ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂದು ತೋರಿಸಿರುವ ವಿದ್ಯಾ ಸರಸ್ವತಿ ಅವರು, ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷರು, ಆಟಿ ಕೂಟದ ಸಂಚಾಲಕಿಯಾಗಿದ್ದಾರೆ.