ರಾಜ್ಯದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳ ಜನ ಸ್ಪಂದನೆ

| Published : Jan 30 2024, 02:05 AM IST

ರಾಜ್ಯದಲ್ಲೇ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳ ಜನ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಹಾಗು ಜಿಲ್ಲಾಡಳಿತದಿಂದ ನಡೆದ ಜನಸ್ಪಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್‌ ಆನಂದ್‌ ರಾಜ್ಯದಲ್ಲೇ ಮೊದಲ ಬಾರಿಗೆ ನನ್ನ ಕಡೂರು ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಕುರಿತು ಜನ ಸ್ಪಂದನೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.

- ತಾಲೂಕು ಹಾಗು ಜಿಲ್ಲಾಡಳಿತದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಕೆ.ಎಸ್‌ ಆನಂದ್‌ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದಲ್ಲೇ ಮೊದಲ ಬಾರಿಗೆ ನನ್ನ ಕಡೂರು ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಕುರಿತು ಜನ ಸ್ಪಂದನೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಶಾಸಕ ಕೆ.ಎಸ್‌ ಆನಂದ್‌ ಹೇಳಿದರು.

ಸೋಮವಾರ ತಾಲೂಕು ಹಾಗು ಜಿಲ್ಲಾಡಳಿತದಿಂದ ನಡೆದ ಜನಸ್ಪಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಮುಂಚೆ ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಗ್ಯಾರಂಟಿಗಳ ಭರವಸೆ ನೀಡಿದ್ದರು. ಇದು ಸಾಧ್ಯವೇ ಎಂದು ಇಡೀ ರಾಜ್ಯ ಮತ್ತು ದೇಶಾದ್ಯಂತ ಚರ್ಚೆ ನಡೆಯಿತು. ಕಾಂಗ್ರೆಸ್ ಅಧಿಕಾರ ಪಡೆದ ಕೇವಲ 15 ದಿನಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿ ಮಾಡಿತು. ಒಂದು ತಿಂಗಳಲ್ಲಿ 200 ಯುನಿಟ್ ನ ಗೃಹ ಜ್ಯೋತಿ ಜಾರಿ ಮಾಡಲಾಯಿತು. ಅನ್ನಭಾಗ್ಯಕ್ಕೆ 7 ಕೆ.ಜಿ. ಅಕ್ಕಿ ಜೊತೆ 174 ರು. ಪ್ರತಿ ವ್ಯಕ್ತಿಗೆ ನೀಡಲಾಗುತ್ತಿದೆ. ಗೃಹಲಕ್ಷ್ಮೀ ಯಜಮಾನಿ ಖಾತೆಗೆ ಪ್ರತಿ ತಿಂಗಳು 2 ಸಾವಿರ ರು. ಪದವೀಧರರಿಗೆ 3 ಸಾವಿರ ರು.ನಂತೆ ಎರಡು ವರ್ಷ ಹಣ ನೀಡಲಾಗುತ್ತಿದೆ.

ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳಾ ಗಿದ್ದು ಸಿದ್ದರಾಮಯ್ಯ ಬಡವರಿಗೆ ಮಾತು ಕೊಟ್ಟಂತೆ ನಡೆಯುವ ಜೊತೆ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ವರ್ಷಕ್ಕೆ 59 ಸಾವಿರ ಕೋಟಿ ರು. ಐದು ಗ್ಯಾರಂಟಿಗಳಿಗೆ ವೆಚ್ಚವಾಗುತ್ತಿದೆ. ಹಾಗಾಗಿ ಸವಲತ್ತು ತಲುಪದಿರುವವರಿಗೆ ಸರಿಯಾದ ದಾಖಲೆಗಳ ಮೂಲಕ ಸೌಲಭ್ಯ ಕಲ್ಪಿಸಲು ಈ ಸಭೆ ನಡೆಸಲಾಗುತ್ತಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದು, ಶೀಘ್ರ ಹೊಸ ರೇಷನ್ ಕಾಡ್‌ ಅರ್ಜಿ ಕರೆಯಲಾಗುತ್ತದೆ ಎಂದರು.

ನನ್ನ ಕಡೂರು ಕ್ಷೇತ್ರದಲ್ಲಿ 200 ಯುನಿಟ್ ಉಚಿತ ವಿದ್ಯುತ್ ಗೆ 87,038 ಜನ ಅರ್ಜಿ ಹಾಕಿದ್ದು, ತಿಂಗಳಿಗೆ 2.20 ಕೋಟಿ ರು. ವೆಚ್ಚವಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ಒಂದು ತಿಂಗಳಲ್ಲಿ 3,14, 123 ಜನ ಮಹಿಳೆಯರು ಓಡಾಡಿದ್ದು, ಆಗಸ್ಟ್ ನಲ್ಲಿ 5,88,000 ಓಡಾಡಿದ್ದಾರೆ. ಜ. 29 ಕ್ಕೆ 4,0 54,36 ಜನರು ಓಡಾಡಿದ್ದು, ಇದಕ್ಕೆ ಪ್ರತೀ ತಿಂಗಳು ಸುಮಾರು 2 ಕೋಟಿ ಯಂತೆ ವರ್ಷಕ್ಕೆ ಸುಮಾರು 39 ಕೋಟಿ ವೆಚ್ಚವಾಗುತ್ತಿದೆ. ಅನ್ನಭಾಗ್ಯದಲ್ಲಿ 53 551 ಕಾರ್ಡುಗಳ ಕುಟುಂಬದ ಸದಸ್ಯರು ಸೇರಿ 1,80,593 ಜನ ಫಲಾನುಭವಿಗಳಾಗಿದ್ದಾರೆ. ಗೃಹಲಕ್ಷ್ಮೀಯಲ್ಲಿ ಪ್ರತಿ ತಿಂಗಳು 2 ಸಾವಿರ ದಂತೆ ವರ್ಷಕ್ಕೆ 2.97 ಕೋಟಿ ರು. ಬರಲಿದೆ.

ಗೃಹಲಕ್ಷ್ಮಿಗೆ 55,675 ಜನರಿಗೆ 10, 89, 22,000, ಸೇರಿದಂತೆ 131 ಕೋಟಿ ರು. ವರ್ಷಕ್ಕೆ ತಗಲುತ್ತಿದೆ. ಯುವನಿಧಿಗೆ 523 ಜನರು ನೋಂದಣಿ ಮಾಡಿಸಿದ್ದು, ಗೃಹಜ್ಯೋತಿ 37 ಕೋಟಿ ರು. ಅನ್ನಭಾಗ್ಯದಿಂದ ಸುಮಾರು 30 ಕೋಟಿ ರು. ನೀಡ ಲಾಗುತ್ತಿದೆ ಇದು ಬಡವರ ಪರ ಇರುವ ಸರ್ಕಾರದ ಕಾಳಜಿ ತೋರಿಸುತ್ತದೆ ಎಂದರು.

ಕೇವಲ 6 ತಿಂಗಳಲ್ಲಿ ರಾಜ್ಯ ಸರ್ಕಾರ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 93 ಕೋಟಿ ರು. ನೀಡಿದೆ. ಬಡವರಿಗೆ ಸವಲತ್ತು ನೇರವಾಗಿ ತಲುಪುವಂತೆ ಮಾಡಿದೆ. ವಿದೇಶಿಯರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ ಎಂದರು.

ತಹಸೀಲ್ದಾರ್ ಕವಿರಾಜ್ ಮಾತನಾಡಿ, ಸರ್ಕಾರ ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಸಿ ಜನರಿಗೆ ಸವಲತ್ತು ಮಾಡಿಕೊಡಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಜಯ್, ಕೆಎಸ್ಆರ್ ಟಿ ಸಿ ಬಸವರಾಜ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಂಜುನಾಥ್, ಕೌಶಲ್ಯಾಭಿವೃದ್ಧಿ ನಿಗಮ ಪ್ರಶಾಂತ, ಮೆಸ್ಕಾಂ ವಿಭಾಗೀಯ ಕಚೇರಿ ಲಿಂಗರಾಜ್, ಸಿಡಿಪಿಒ ಇಲಾಖೆ ಉಪ ನಿರ್ದೇಶಕ ರಾಜ ನಾಯ್ಕ, ಸರಸ್ವತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್, ಕಾಮನಕೆರೆ ಗ್ರಾಪಂ ಅಧ್ಯಕ್ಷ ಶೇಖರ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. --- ಬಾಕ್ಸ್---

ವಿರೋಧ ಪಕ್ಷದ ಬಹಳಷ್ಟು ಜನ ಟೀಕೆಯಲ್ಲಿ ಮುಳುಗಿದ್ದಾರೆ. ಈ ಉಚಿತ ಸವಲತ್ತುಗಳಿಂದ ರಾಜ್ಯ ದಿವಾಳಿಯಾಗಿ ಜನ ಸೋಮಾರಿ ಆಗುತ್ತಾರೆ ಎಂದು ಮಾತನಾಡುವ ಜನಕ್ಕೆ ಪಲಾನುಭವಿಗಳಾದ ನೀವು ಉತ್ತರ ನೀಡಿ. ಯಾರು ಆರೋಪಿಸು ತ್ತಾರೆ ಅವರೂ ಕೂಡ ಗ್ಯಾರಂಟಿ ಫಲಾನುಭವಿಗಳಾಗಿದ್ದಾರೆ ಇದನ್ನು ನೀವೇ ಹೇಳಬೇಕು ಎಂದು ಹೇಳಿ ಅದಾನಿ ಅಂಬಾನಿ ಯವರ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆವಾಗ ದಿವಾಳಿ ಆಗಲಿಲ್ಲವೇ ಎಂದು ಪ್ರಶ್ನಿಸಿದ ಅವರು, ನೀವು ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕು ಎಂದರು.

- ಕ.ಎಸ್ ಆನಂದ್, ಶಾಸಕರು.29ಕೆೆಕೆಡಿಯು1,1ಎ.