ಸಾರಾಂಶ
ಐ.ಸಿ.ವೈ.ಎಂ. ಬಳಕುಂಜೆ ನೇತೃತ್ವದಲ್ಲಿ ಐ.ಸಿ.ವೈ.ಎಂ. ವಲಯ ಆಡಳಿತದ ಸಹಕಾರದಲ್ಲಿ ಬಳಕುಂಜೆಯಲ್ಲಿ ಗಾದ್ಯಾಂತ್ ಗಮ್ಮತ್’ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಮಾಡುವುದರಿಂದ ಮಕ್ಕಳಿಗೆ ಕೃಷಿಯ ಮಹತ್ವ, ಸಂಸ್ಕೃತಿಗಳನ್ನು ಕಲಿಯಲು ಪ್ರೇರಣೆ ದೊರೆಯುತ್ತದೆ ಎಂದು ಬಳಕುಂಜೆ ಚರ್ಚ್ ಧರ್ಮಗುರು ಪಾವ್ಲ್ ಸಿಕ್ವೇರಾ ಹೇಳಿದರು.ಐ.ಸಿ.ವೈ.ಎಂ. ಬಳಕುಂಜೆ ನೇತೃತ್ವದಲ್ಲಿ ಐ.ಸಿ.ವೈ.ಎಂ. ವಲಯ ಆಡಳಿತದ ಸಹಕಾರದಲ್ಲಿ ಬಳಕುಂಜೆಯಲ್ಲಿ ನಡೆದ ‘ಗಾದ್ಯಾಂತ್ ಗಮ್ಮತ್’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಮ್ರಾಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಡಿಸೋಜ, ಬಳಕುಂಜೆ ಪಂಚಾಯಿತಿ ಅಧ್ಯಕ್ಷ ಮಮತಾ ಡಿ. ಪೂಂಜ, ಐ.ಸಿ.ವೈ.ಎಂ.ವ ಲಯ ನಿರ್ದೇಶಕ ಲ್ಯಾನ್ಸಿ ಸಲ್ಡಾನ್ಹಾ, ಕೇಂದ್ರದ ಅಧ್ಯಕ್ಷ ವಿನ್ಸಟನ್ ಸಿಕ್ವೇರಾ, ಸದಸ್ಯೆ ಜಸ್ಮಿತಾ ಮೊಂತೆರೊ, ಬಳಕುಂಜೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಡಾ.ಫ್ರೀಡಾ ರೊಡ್ರಿಗಸ್, ಕಾರ್ಯದರ್ಶಿ ನ್ಯಾನ್ಸಿ ಕರ್ಡೋಜಾ, ಆಯೋಗಗಳ ಸಂಯೋಜಕ ಲವೀನಾ ಸೆರಾವೊ ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಸ್ಟ್ಯಾಲನ್ ಸೆರವೊ ಸ್ವಾಗತಿಸಿದರು. ಬಳಕುಂಜೆ ಘಟಕ ಅಧ್ಯಕ್ಷ ಕ್ಲೆರಿಸ್ಸಾ ಕರ್ಡೋಜಾ ವಂದಿಸಿದರು. ಡಾ.ಫ್ರೀಡಾ ರೊಡ್ರಿಗಸ್ ಕ್ರೀಡಾ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು. ನೇಹಾ, ಜೊನಿಟಾ, ರೇಷಲ್ ಕಾರ್ಯಕ್ರಮ ನಿರೂಪಿಸಿದರು. ಪಾವ್ಲ್ ಸಿಕ್ವೇರಾ ಗದ್ದೆಗೆ ಇಳಿದು ಗದ್ದೆಯಲ್ಲಿ ನೇಜಿ ನೆಟ್ಟರು. ಇದರಿಂದ ಸಿಗುವ ಅಕ್ಕಿಯನ್ನು ಬಡಕುಟುಂಬಕ್ಕೆ ದಾನವಾಗಿ ನೀಡಲು ನಿರ್ಧರಿಸಲಾಯಿತು. ವಲಯದ 7 ಚರ್ಚ್‌ಗಳು ಭಾಗವಹಿಸಿದ್ದು, ಬಳಕುಂಜೆ ತಂಡವು ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ಪಡೆದುಕೊಂಡಿತು.