ಸಾರಾಂಶ
ಹಳೇಬೀಡಿನ ಸರ್ಕಾರಿ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಧ್ವಜವನ್ನು ಹಾರಿಸಲಾಯಿತು.ಈ ದ್ವಾರಸಮುದ್ರದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಗಳಿಗೆ ಅಪಾರ ಪ್ರಾಮುಖ್ಯತೆ ನೀಡಿದ ಹೊಯ್ಸಳರ ರಾಜರು ಎಂದು ಇತಿಹಾಸ ತಿಳಿಸಿದೆ ಎಂದು ಸರ್ಕಾರಿ ಕೆಪಿಎಸ್ ಶಾಲೆಯ ಅಧ್ಯಕ್ಷ ಬಿ. ಎಸ್. ಸೋಮಶೇಖರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ಭಾರತೀಯ ಭಾಷೆಗಳಲ್ಲಿ ಅತ್ಯಂತ ಸಮೃದ್ಧಿ ಹಾಗೂ ಸಾಕಷ್ಟು ಇತಿಹಾಸ ಇರುವ ಭಾಷೆ ಎಂದರೆ ಕನ್ನಡ ಭಾಷೆ ಎಂದು ಸರ್ಕಾರಿ ಕೆಪಿಎಸ್ ಶಾಲೆಯ ಅಧ್ಯಕ್ಷ ಬಿ. ಎಸ್. ಸೋಮಶೇಖರ ತಿಳಿಸಿದರು.ಹಳೇಬೀಡಿನ ಸರ್ಕಾರಿ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಧ್ವಜವನ್ನು ಹಾರಿಸಿ ಮಾತನಾಡುತ್ತಾ, ಈ ದ್ವಾರಸಮುದ್ರದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಗಳಿಗೆ ಅಪಾರ ಪ್ರಾಮುಖ್ಯತೆ ನೀಡಿದ ಹೊಯ್ಸಳರ ರಾಜರು ಎಂದು ಇತಿಹಾಸ ತಿಳಿಸಿದೆ ಎಂದು ತಿಳಿಸಿದರು.
ಕೆಪಿಎಸ್ ಶಾಲೆಗೆ ಉಪ ಪ್ರಾಂಶುಪಾಲ ಮುಳ್ಳಯ್ಯ ಮಾತನಾಡುತ್ತ, ಕನ್ನಡ ಭಾಷೆಗೆ ಪರಂಪರೆಯ ಇತಿಹಾಸವಿದೆ. ಈ ಭಾಷೆಯಲ್ಲಿ ಭಾವದ ಐಕ್ಯತೆ ಜಾನಪದ ಸೊಗಡುಗಳನ್ನು ಹೊಂದಿರುವ ಭಾಷೆ ಏಕೈಕ ಕನ್ನಡ ಭಾಷೆಯಾಗಿದೆ. ಈ ಭಾಷೆಯನ್ನು ಇಟ್ಟುಕೊಂಡು ಹಲವಾರು ಸಾಹಿತ್ಯವನ್ನು ರಚಿಸಿದ ನಾಡು ಇಲ್ಲಿ ಕರ್ನಾಟಕ ರಾಜ್ಯದ ಉದಯವಾಗಿ ೬೮ ವರ್ಷ ಕಳೆದೆ ಮೈಸೂರು ರಾಜ್ಯಕ್ಕೆ ಕನ್ನಡವೆಂದು ನಾಮಕರಣಗೊಂಡ ೫೦ ವರ್ಷಗಳಾಗಿದ್ದವು. ನಾವೀಗ ಸುವರ್ಣ ಕರ್ನಾಟಕ ಸಂಭ್ರಮ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವಿನುತಾ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಕಾಲೇಜಿನ ಉಪನ್ಯಾಸ ವರ್ಗ, ಪ್ರೌಢಶಾಲೆಯ ಶಿಕ್ಷಕವರ್ಗ, ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಜರಿದ್ದರು.