3 ದಿನಗಳ ಹಂಪಿ ಉತ್ಸವಕ್ಕೆ ತೆರೆ: 8 ಲಕ್ಷ ಜನರ ಆಗಮನ

| Published : Mar 03 2025, 01:46 AM IST

3 ದಿನಗಳ ಹಂಪಿ ಉತ್ಸವಕ್ಕೆ ತೆರೆ: 8 ಲಕ್ಷ ಜನರ ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಗತ ವೈಭವವನ್ನು ಸಾರುವ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ತೆರೆ ಬಿದ್ದಿದೆ. 3 ದಿನಗಳು ಹಂಪಿ ನೆಲದಲ್ಲಿ ಕಲೆ, ಸಾಹಿತ್ಯ, ಪುನರ್ಜನ್ಮ ಪಡೆದಿದ್ದು, ಹಂಪಿ ನೆಲದಲ್ಲಿ ಜೀವಕಳೆ ಮೂಡಿಸಿದ ಉತ್ಸವ ವಿಜೃಂಭಣೆಯೊಂದಿಗೆ ಸಮಾಪ್ತಿಗೊಂಡಿತು.

ಕೃಷ್ಣ ಎನ್‌.ಲಮಾಣಿ

ಕನ್ನಡಪ್ರಭ ವಾರ್ತೆ ಹಂಪಿ

ವಿಜಯನಗರ ಗತ ವೈಭವವನ್ನು ಸಾರುವ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ತೆರೆ ಬಿದ್ದಿದೆ. 3 ದಿನಗಳು ಹಂಪಿ ನೆಲದಲ್ಲಿ ಕಲೆ, ಸಾಹಿತ್ಯ, ಪುನರ್ಜನ್ಮ ಪಡೆದಿದ್ದು, ಹಂಪಿ ನೆಲದಲ್ಲಿ ಜೀವಕಳೆ ಮೂಡಿಸಿದ ಉತ್ಸವ ವಿಜೃಂಭಣೆಯೊಂದಿಗೆ ಸಮಾಪ್ತಿಗೊಂಡಿತು. ಉತ್ಸವದ ಮೂರು ದಿನಗಳಲ್ಲಿ ಎಂಟು ಲಕ್ಷ ಜನಸಾಗರ ಹಂಪಿಗೆ ಹರಿದು ಬಂದಿದ್ದಾರೆ.

ಹಂಪಿ ಉತ್ಸವದ ಮೊದಲ ದಿನ 1 ಲಕ್ಷ ಜನ ಆಗಮಿಸಿದ್ದರೆ, 2ನೇದಿನ 2 ಲಕ್ಷ, 3ನೇ ದಿನ 5 ಲಕ್ಷ ಜನ ಹಂಪಿಗೆ ಹರಿದು ಬಂದಿದ್ದಾರೆ. ಪ್ರಧಾನ ವೇದಿಕೆ, ಎದುರು ಬಸವಣ್ಣ ವೇದಿಕೆ, ಮಹಾನವಮಿ ದಿಬ್ಬ ವೇದಿಕೆ, ಸಾಸಿವೆ ಕಾಳು ಗಣಪತಿ ವೇದಿಕೆ, ಶ್ರೀವಿರೂಪಾಕ್ಷೇಶ್ವರ ದೇವಾಲಯ ವೇದಿಕೆ ಮತ್ತು ಧ್ವನಿ ಮತ್ತು ಬೆಳಕು ವೇದಿಕೆಗಳಲ್ಲಿ ಸಾವಿರಾರು ಜನರು ಆಗಮಿಸಿದ್ದರು.

ಹಂಪಿ ಉತ್ಸವದ ಮೂರನೇ ದಿನ ಎಲ್ಲೆಡೆ ಜನರು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಅದರಲ್ಲೂ ಪ್ರಧಾನ ವೇದಿಕೆಗೆ ಅಪರಾಹ್ನ 4 ಗಂಟೆಯಿಂದಲೇ ಜನರ ದಂಡೇ ಸೇರಿತ್ತು. ಸಂಜೆ 6:30 ಆಗುತ್ತಲೇ ಕುರ್ಚಿಗಳು ಫುಲ್‌ ಆಗಿದ್ದವು. ವಿಐಪಿ, ವಿವಿಐಪಿ ಪಾಸುಗಳು ಇದ್ರೂ ಜನರು ವಾಪಸ್‌ ಹೋಗುವ ಸ್ಥಿತಿ ನಿರ್ಮಾಣ ಆಗಿತ್ತು. ಎಲ್ಲಾ ಕುರ್ಚಿಗಳು ಫುಲ್‌ ಆಗಿದ್ದರಿಂದ ಜನರು ನಿಂತುಕೊಂಡೇ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು. ಜನರು ಬಂಡೆಗಳ ಮೇಲೆ ಕುಳಿತು ವೀಕ್ಷಿಸಿದರು. ಕೆಲ ಸ್ಮಾರಕಗಳ ಬಳಿಯೂ ಜನರು ಕುಳಿತು ವೀಕ್ಷಣೆ ಮಾಡಿದರು. ಉತ್ಸವದಲ್ಲಿ ಜನರು ಭಾರೀ ಪ್ರಮಾಣದಲ್ಲಿ ಜನರು ಜಮಾಯಿಸಿದ್ದರು.

ಹಂಪಿ ಉತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಕಂಡು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಅವರು ಹಂಪಿ ಉತ್ಸವ ನಿಜಕ್ಕೂ ಯಶಸ್ವಿ ಆಗಿದೆ. ಈ ಮಾದರಿಯಲ್ಲಿ ನಾವು ಉತ್ಸವ ಆಚರಿಸೋಣ. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಕನ್ನಡಿಗರು ಸದಾ ಮುಂದಿದ್ದಾರೆ. ಹಂಪಿ ಉತ್ಸವದಲ್ಲಿ ಸಾಗರೋಪಾದಿಯಲ್ಲಿ ಜನರು ಬಂದಿದ್ದಾರೆ ಎಂದು ಗುಣಗಾನ ಮಾಡಿದ್ದರು.