‘ದೇವೇಗೌಡರಿಂದ ಧರ್ಮ, ಹಿಂದುತ್ವಕ್ಕೆ ಹೊಸ ವ್ಯಾಖ್ಯಾನ ಕಂಡೆ’

| Published : Oct 10 2023, 01:00 AM IST

‘ದೇವೇಗೌಡರಿಂದ ಧರ್ಮ, ಹಿಂದುತ್ವಕ್ಕೆ ಹೊಸ ವ್ಯಾಖ್ಯಾನ ಕಂಡೆ’
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ಯತೀತ ಅಂದರೆ ನಾಸ್ತಿಕತೆ ಅಲ್ಲ, ಹಿಂದುತ್ವ ಅಂದರೆ ಶ್ರದ್ಧಾ ಭಕ್ತಿಯ ಪರಾಕಾಷ್ಟೆ. ಹೀಗೆ ದೇವೇಗೌಡರು ಸುಬ್ರಹ್ಮಣ್ಯಕ್ಕೆ ಬಂದ ಬಗೆಯನ್ನು ಜೆಡಿಎಸ್‌ ಮುಖಂಡರೊಬ್ಬರು ವಿವರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ದೇವರ ಬಗ್ಗೆ ಶ್ರದ್ಧೆ, ಭಕ್ತಿ, ನಿಜ ಅರ್ಥದಲ್ಲಿ ಧರ್ಮಾಚಾರಣೆಯ ಮಾದರಿಯನ್ನು ಮತ್ತೊಮ್ಮೆ ಕಣ್ಣಾರೆ ಕಂಡ ನನಗೆ ಧರ್ಮ, ಹಿಂದುತ್ವಗಳ ಹೊಸ ವ್ಯಾಖ್ಯಾನ ಕಂಡು ಬಂದದ್ದು ಕುಕ್ಕೆ ಸುಬ್ರಮಣ್ಯದಲ್ಲಿ.... ಹೀಗೆಂದು ಜೆಡಿಎಸ್‌ ಮುಖಂಡರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. 4 ದಿನಗಳ ಹಿಂದೆ ಮಾಜಿ ಪ್ರಧಾನಿಗಳು ನನಗೆ ಫೋನಾಯಿಸಿ ಪೂಜೆಗೆ ವ್ಯವಸ್ಥೆ ಮಾಡು, ಬರುತ್ತೇನೆ ಎಂದು ಸೂಚಿಸಿದ್ದರು. ಅವರ ಪ್ರವಾಸ ಕಾರ್ಯಕ್ರಮದಂತೆ ಭಾನುವಾರ ಸಂಜೆ 3.30ಕ್ಕೆ ಹೆಲಿಕಾಪ್ಟರ್ ಮೂಲಕ ಬರಬೇಕಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಸಕಲೇಶಪುರದಿಂದ ವಾಪಸ್ ಹೋಗಬೇಕಾಯಿತು. ಎಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ದೇವೇಗೌಡ ದಂಪತಿ, ಮತ್ತೆ 8.30ರ ವಿಮಾನವೇರಿ 10 ಘಂಟೆ ರಾತ್ರಿ ಮಂಗಳೂರು ತಲುಪಿ, 1.30ಕ್ಕೆ ಕುಕ್ಕೆಗೆ ಬಂದರು. 6 ಘಂಟೆಗೆ ಮತ್ತೆ ಸ್ನಾನ ಮುಗಿಸಿ ಪೂಜೆಗೆ ಹೊರಟು ಕಾರ್‌ನಲ್ಲಿ ಕುಳಿತು ಚನ್ನಮ್ಮರನ್ನು ನಿರೀಕ್ಷಿಸುತ್ತಿರುವ 10 ನಿಮಿಷ ಕಾಲವನ್ನು ವ್ಯರ್ಥ ಮಾಡದೆ ತನ್ನ ಬಳಿ ಇದ್ದ ಸುಬ್ರಮಣ್ಯ ಶ್ಲೋಕ, ಪ್ರಾರ್ಥನೆಗಳ ಕಿರು ಹೊತ್ತಿಗೆ ತೆರೆದು ವಾಚಿಸ ತೊಡಗಿದರು. ಜಾತ್ಯತೀತ ಅಂದರೆ ನಾಸ್ತಿಕತೆ ಅಲ್ಲ, ಹಿಂದುತ್ವ ಅಂದರೆ ಶ್ರದ್ಧಾ ಭಕ್ತಿಯ ಪರಾಕಾಷ್ಟೆ. ಹೀಗೆ ದೇವೇಗೌಡರು ಸುಬ್ರಹ್ಮಣ್ಯಕ್ಕೆ ಬಂದ ಬಗೆಯನ್ನು ಜೆಡಿಎಸ್‌ ಮುಖಂಡರೊಬ್ಬರು ವಿವರಿಸಿದ್ದಾರೆ.