ಮೈತ್ರಿ ಗಟ್ಟಿಯಾಗಿದ್ದರೆ ಚುನಾವಣೆಯಲ್ಲಿ ಗೆಲುವು ಸುಲಭ

| Published : Jan 13 2025, 12:45 AM IST

ಮೈತ್ರಿ ಗಟ್ಟಿಯಾಗಿದ್ದರೆ ಚುನಾವಣೆಯಲ್ಲಿ ಗೆಲುವು ಸುಲಭ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತರೂಢ ಪಕ್ಷವು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಅಲ್ಲದೆ ಭಾಗ್ಯ, ಗ್ಯಾರಂಟಿಗಳನ್ನು ಸಮರ್ಪವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಸಭೆ ಸಮಾರಂಭಗಳಲ್ಲಿ ಚಪ್ಪಾಳೆ, ಶಿಳ್ಳೆ ಮೂಲಕ ಪುಕ್ಕಟೆ ಪ್ರಚಾರ ಪಡೆಯಲು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ರಸ್ತೆಗಳ ಹಳ್ಳಕೊಳ್ಳಗಳಿಂದ ಕುಂಟೆಗಳು, ಕಾಲುವೆಗಳಂತೆ ಪರಿವರ್ತನೆಯಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಾಗಿ ಈ ಕ್ಷೇತ್ರದಲ್ಲಿ ಯಾವುದೇ ಚುನಾವಣೆಗಳಲ್ಲಿ ಬೇಕಾದರೂ ಜಯಬೇರಿ ಬಾರಿಸಬಹುದಾಗಿದೆ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ೧೪ ಕ್ಷೇತ್ರಗಳಲ್ಲಿ ೧೦ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಈ ಪೈಕಿ ೨ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸೇರಿದಂತೆ ೮ ಕ್ಷೇತ್ರಗಳಲ್ಲಿ ಮೈತ್ರಿಯ ಸಹಕಾರ ಮತ್ತು ಸಮನ್ವಯತೆ ಮತ್ತು ಒಮ್ಮತದ ಶ್ರಮದ ಫಲವಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹರ್ಷ ವ್ಯಕ್ತಪಡಿಸಿದರು.ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ

ನಗರದ ತಮ್ಮ ಗೃಹ ಕಚೇರಿಯಲ್ಲಿ ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಜಯಬೇರಿ ಬಾರಿಸಿದ ಅಭ್ಯರ್ಥಿಗಳು ಹಾಗೂ ಮೈತ್ರಿ ಪಕ್ಷದ ಮುಖಂಡರ ಸಭೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಹಾಗೂ ಮುಖಂಡರನ್ನು ಅಭಿನಂದಿಸಿ ಮಾತನಾಡಿ, ಉಳಿದ ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಪರಾರ್ಜಿತರಾದರೂ ಹತಾಶರಾಗದೆ ಅದೇ ಉತ್ಸಾಹದಲ್ಲಿ ಮುಂದುವರಿಯಬೇಕು ಎಂದರು. ಆಡಳಿತರೂಢ ಪಕ್ಷವು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಅಲ್ಲದೆ ಭಾಗ್ಯ, ಗ್ಯಾರಂಟಿಗಳನ್ನು ಸಮರ್ಪವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಸಭೆ ಸಮಾರಂಭಗಳಲ್ಲಿ ಚಪ್ಪಾಳೆ, ಶಿಳ್ಳೆ ಮೂಲಕ ಪುಕ್ಕಟೆ ಪ್ರಚಾರ ಪಡೆಯಲು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ರಸ್ತೆಗಳ ಹಳ್ಳಕೊಳ್ಳಗಳಿಂದ ಕುಂಟೆಗಳು, ಕಾಲುವೆಗಳಂತೆ ಪರಿವರ್ತನೆಯಾಗಿದೆ. ಸರ್ಕಾರಿ ಆಸ್ಪತ್ರೆಗಳು ನಾಯಿಗಳ ತಾಣವಾಗಿದೆ. ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಅದರೂ ಸ್ವಲ್ಪವೂ ನಾಚಿಕೆ ಇಲ್ಲದೆ ಪೊಳ್ಳು ಭರವಸೆಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಟೀಕಿಸಿದರು.

ಒಟ್ಟಾಗಿ ಎದುರಿಸಿದ ಫಲ

ನಮಗೆ ಶಾಸಕರು ಇಲ್ಲದಿದ್ದರೂ ಸಹ ಜನತೆಯ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರ ಬೆಂಬಲದಿಂದ ನಾವುಗಳು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಗೆಲವು ಸಾಧಿಸಿದ್ದೇವೆ. ವೇಮಗಲ್ ಕೆ.ಎಂ.ವೆಂಕಟೇಶ್, ವಕ್ಕಲೇರಿ ಮಂಜುನಾಥ್ ಎಂ., ಉತ್ತರ ಕಸಬಾ ಸೊಣ್ಣೇಗೌಡ, ವಡಗೂರು ವೆಂಕಟರಾಮಪ್ಪ, ಕೆಂದಟ್ಟಿ ಎ,ಶಿವಕುಮಾರ್, ಅವಿರೋಧವಾಗಿ ವಿಟ್ಟಪ್ಪನಹಳ್ಳಿ ವಿ.ಎಂ.ವೆಂಟೇಶ್, ದಕ್ಷಿಣ ಕಸವಾ ಮಹಿಳಾ ಮೀಸಲು ಕ್ಷೇತ್ರದಿಂದ ಅಂಬಿಕ, ಸಾಲಗಾರರಲ್ಲದ ಕ್ಷೇತ್ರದಿಂದ ಮೂರಂಡಹಳ್ಳಿ ನರೇಶ್ ಬಾಬು.ಜಿ ಆಯ್ಕೆಯಾಗಿದ್ದಾರೆ ತಿಳಿಸಿದ್ದಾರೆ.

ಮುಂದೆ ಎ.ಪಿ.ಎಂ.ಸಿ. ತಾಪಂ, ಜಿಪಂ ಚುನಾವಣೆಗಳು ಬರಲಿದೆ. ಇದೇ ರೀತಿ ಎಲ್ಲರೂ ಒಗ್ಗಟ್ಟನ್ನು ಕಾಪಾಡಿಕೊಂಡರೆ ಮುಂಬರಲಿರುವ ಎಲ್ಲಾ ಚುನಾವಣೆಯಲ್ಲೂ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯ ಬಹುದೆಂಬ ವಿಶ್ವಾಸ ಉಂಟಾಗಿದೆ ಎಂದರು.ಪಕ್ಷಾಂತರ ಮಾಡದಂತೆ ಎಚ್ಚರಿಕೆ

ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಗೆಲವು ಅಭ್ಯರ್ಥಿಗಳ ಬೆನ್ನ ಹಿಂದೆ ಮುಖಂಡರ ಕಾರ್ಯಕರ್ತರ ಅಪಾರ ಶ್ರಮ ಇದೆ ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿದ್ದಾರೆ. ಗೆದ್ದ ಮೇಲೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ವಂಚಿಸಲು ಪ್ರಯತ್ನಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಅವರ ಗ್ರಹಚಾರ ಬಿಡಿಸಬೇಕಾಗುತ್ತದೆ. ಶ್ರೀನಾಥ್ ಸುಮ್ಮನಿದ್ದರೂ ನಾನಂತು ಸುಮ್ಮನಿರುವವನಲ್ಲ ಎಂದು ಎಚ್ಚರಿಸಿದರು. ಕಳೆದ ಎ.ಪಿ.ಎಂ.ಸಿ. ಚುನಾವಣೆಯಲ್ಲಿ ಇದೇ ರೀತಿ ೪ ಸೀಟ್ ಹೋಯಿತು ಎಂದು ನೆನಪಿಸಿದ ಅವರು ಮುಂಬರಲಿರುವ ತಾ.ಪಂ ಮತ್ತು ಜಿ.ಪಂ ಚುನಾವಣೆಗಳಲ್ಲಿ ಅವರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮತವೂ ಬೊಣಿಯಾಗದಂತೆ ಮಾಡಬೇಕು ಎಂದರು.

ಒಗ್ಗಟ್ಟಾದರೆ ಗೆಲುವು ಸುಲಭ

ನಗರ ಪ್ರದೇಶಗಳಲ್ಲಿ ಮುಸ್ಲಿಂಮರು ಇರುವುದರಿಂದ ಎಂ.ಎಲ್.ಎ. ಸೀಟ್ ಹೊಡೆದುಕೊಂಡರು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಮರು ಎಲ್ಲಿದ್ದಾರೆ. ಜೆ.ಡಿ.ಎಸ್. ಹಾಗೂ ಬಿಜೆಪಿ ಒಂದಾದರೆ ನಾವು ಗೆಲ್ಲುವುದು ಸುಲಭವಾಗಲಿದೆ ಮುಂದಿನ ಎಲ್ಲಾ ಚುನಾವಣೆಗಳು ಕುಮಾರಣ್ಣ ಹಾಗೂ ಯಡಿಯುರಪ್ಪರ ನೇತೃತ್ವದಲ್ಲಿ ರಾಜ್ಯದ ಆಡಳಿತ ಚುನಾವಣೆ ಹಿಡಿಯುವುದು ಖಚಿತ ಎಂದು ಭವಿಷ್ಯ ನುಡಿದರು.

ಈ ವೇಳೆ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ತಂಬಳ್ಳಿ ಮುನಿಯಪ್ಪ, ಬಾಬು ಮೌನಿ, ಟಮಕ ವೆಂಕಟೇಶ್, ವಡಗೂರು ರಾಮು, ಬಣಕನಹಳ್ಳಿ ನಟರಾಜ್, ಬಂಕ್ ಮಂಜುನಾಥ್, ಮದ್ದೇರಿ ವೆಂಕಟೇಶ್, ಮೂರಾಂಡಹಳ್ಳಿ ಗೋಪಾಲ್, ವಿಟಪನಹಳ್ಳಿ ವೆಂಕಟೇಶ್, ದಯಾನಂದ, ಕೃಷ್ಣಪ್ಪ ಇದ್ದರು.