ಸಾರಾಂಶ
ಗೋಕಾಕ ಮತಕ್ಷೇತ್ರದಿಂದ ಸುಮಾರು 80ಕ್ಕೂ ಹೆಚ್ಚು ಯಾತ್ರಿಕರು ಅಯೋಧ್ಯೆಯ ಶ್ರೀ ಬಾಲರಾಮನ ದರ್ಶನಕ್ಕೆ ಬಾಗಲಕೋಟ ರೈಲು ನಿಲ್ದಾಣದ ಮಾರ್ಗವಾಗಿ ಅಯೋಧ್ಯೆಗೆ ತೆರಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಹಿಂದುಗಳ ಆರಾಧ್ಯದೈವ ಶ್ರೀರಾಮನ ಆದರ್ಶಗಳು ಎಲ್ಲರಿಗೂ ಸರ್ವಕಾಲಕ್ಕೂ ದಾರಿದೀಪವಾಗಿವೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ಬುಧವಾರ ಗೋಕಾಕ ಮತಕ್ಷೇತ್ರದಿಂದ ಅಯೋಧ್ಯೆಗೆ ತೆರಳುತ್ತಿರುವ ಯಾತ್ರಿಕರ ವಾಹನಗಳಿಗೆ ಪೂಜೆ ಸಲ್ಲಿಸಿ, ಯಾತ್ರಿಕರ ಪ್ರಯಾಣ ಸುಖಕರವಾಗಲಿ ಎಂದು ತಮ್ಮ ಕಚೇರಿಯ ಆವರಣದಲ್ಲಿ ಶುಭಹಾರೈಸಿ ಬೀಳ್ಕೊಟ್ಟರು. ಈ ವೇಳೆ ಮಾತನಾಡಿದ ಅವರು, ಹಿಂದುಗಳ ಶತಮಾನಗಳ ಕನಸು ಈಗ ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ಮಂದಿರ ನಿರ್ಮಾಣವಾಗಿದ್ದು, ಇದು ಹಿಂದುಗಳಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ ಎಂದರು.
ಗೋಕಾಕ ಮತಕ್ಷೇತ್ರದಿಂದ ಸುಮಾರು 80ಕ್ಕೂ ಹೆಚ್ಚು ಯಾತ್ರಿಕರು ಅಯೋಧ್ಯೆಯ ಶ್ರೀ ಬಾಲರಾಮನ ದರ್ಶನಕ್ಕೆ ಬಾಗಲಕೋಟ ರೈಲು ನಿಲ್ದಾಣದ ಮಾರ್ಗವಾಗಿ ಅಯೋಧ್ಯೆಗೆ ತೆರಳಿದರು.ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಮಾಜಿ ಜಿಪಂ ಸದಸ್ಯ ಟಿ.ಆರ್ ಕಾಗಲ, ಎಂ.ಎಲ್ ತೋಳಿನವರ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ, ಬಿಜೆಪಿ ಮುಖಂಡ ಭೀಮಶಿ ಮಾಳೇದ, ಸುರೇಶ ಪಾಟೀಲ, ನಾಗಲಿಂಗ ಪೋತದಾರಮ, ಬಸಲಿಂಗಪ್ಪ ನಾವಲಗಟ್ಟಿ, ಚುನಪ್ಪ ಹಟ್ಟಿ, ಭರಮಣ್ಣಾ ಖಾರೆಪಟನ ಸೇರಿ ಅನೇಕರು ಇದ್ದರು.