ಸಾರಾಂಶ
ಪ್ರತಿಯೊಬ್ಬರು ಇದರ ಉಪಯೋಗ ಪಡೆದು ಆಯುಷ್ಯ ಹೆಚ್ಚಿಸಿಕೊಳ್ಳಿ.
ಕನ್ನಡಪ್ರಭ ವಾರ್ತೆ ಐಗಳಿ ಜ್ಞಾನ ಸಂಪಾದನೆ ಜೊತೆಗೆ ಶರೀರ ಸಂಪತ್ತು ಕಾಯ್ದುಕೊಳ್ಳಿ. ಗಳಿಸಿದ ಸಂಪತ್ತು ಕದಿಯಬಹುದು ಆದರೆ, ಶರೀರ ಸಂಪತ್ತು ಮತ್ತು ಜ್ಞಾನ ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು.
ಸ್ಥಳೀಯ ಯುವಕರ ಬಳಗದ ಜಿಮ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸಮಾನ ಮನಸ್ಕರ ಯುವಕರು ಸೇರಿ ಮಾಡಿದ ಕಾರ್ಯ ಶರೀರ ಆರೋಗ್ಯಕ್ಕೆ ಪೂರಕ ಆಗಲಿದೆ. ಪ್ರತಿಯೊಬ್ಬರು ಇದರ ಉಪಯೋಗ ಪಡೆದು ಆಯುಷ್ಯ ಹೆಚ್ಚಿಸಿಕೊಳ್ಳಿ. ಐಗಳಿ ಯುವಕರಂತೆ ಪ್ರತಿ ಗ್ರಾಮಗಳಲ್ಲಿ ಯುವಕರು ಮುಂದಾಗಬೇಕು. ದಾರಿ ತಪ್ಪುತ್ತಿರುವ ಯುವಕರನ್ನು ಜಿಮ್ ಕೇಂದ್ರಕ್ಕೆ ತಂದು ಸರಿದಾರಿ ತೋರಿಸಿ ಎಂದು ಹೇಳಿದರು.ಕಾಂಗ್ರೆಸ್ ಯುವ ಮುಖಂಡ ಶಿವಾನಂದ ಗುಡ್ಡಾಪೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕುಸ್ತಿ, ಕಬಡ್ಡಿ, ಖೋಖೋ, ಹಗ್ಗ ಜಗ್ಗಾಟ, ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಉಳಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಾಮಗ್ರಿಗಳನ್ನು ಸರ್ಕಾರದಿಂದ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಧುರೀಣ ಸಿ.ಎಸ್.ನೇಮಗೌಡ, ಅಪ್ಪಾಸಾಬ ಪಾಟೀಲ, ಬಸವರಾಜ ಬಿರಾದಾರ, ದುಂಡಪ್ಪ ದೊಡಮನಿ, ಬಸವರಾಜ ಬಿರಾದಾರ, ಅಪ್ಪಾಸಾಬ ತೆಲಸಂಗ, ಸೇರಿದಂತೆ ಅನೇಕರು ಇದ್ದರು. ಯುವಕರ ಮುಖಂಡ ಅಕ್ಷಯ ತೆಲಸಂಗ, ಆಶಿಪ್ ಮುಜಾವರ, ಭೂಮು ಝರೆ, ಸಂತೋಷ ನೇಮಗೌಡ, ಅಕ್ಷಯ ಬಡಿಗೇರ, ರಾಜು ಕರಿಗಾರ, ವಾಸೀಮ್ ಮುಲ್ಲಾ ಇವರು ಮುಖಂಡ ಚಿದಾನಂದ ಸವದಿ ಹಾಗೂ ಶಿವಾನಂದ ಗುಡ್ಡಾಪೂರ ಇವರನ್ನು ಸತ್ಕರಿಸಿದರು.