ಗ್ರಾಮದ ಚನ್ನಕೇಶವಸ್ವಾಮಿ, ದೇವಿರಮ್ಮ ಹಾಗೂ ಲಕ್ಷ್ಮೀದೇವಿ ದೇಗುಲಗಳಿಗೆ ಭೇಟಿ ನೀಡಿದ ಅವರು, ವಿಶೇಷ ಪೂಜೆ ಸಲ್ಲಿಸಿ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ ನೂರಾರು ಭಕ್ತರ ನಡುವೆ ದೇವರ ಆಶೀರ್ವಾದ ಪಡೆದರು. ಕುಮಾರಸ್ವಾಮಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯಘೋಷಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ದೇಗುಲಗಳ ಭೇಟಿಯ ನಂತರ ದೇವಾಲಯದ ಆವರಣದಲ್ಲಿ ಸಾವಿರಾರು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ವತಿಯಿಂದ ಕುಮಾರಸ್ವಾಮಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಇತ್ತೀಚೆಗೆ ಸಿಎಂ ಪದಕ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸುಭಾಷ್ ಅವರನ್ನು ಕುಮಾರಸ್ವಾಮಿ ಸನ್ಮಾನಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಮೀಪದ ಬೂವನಹಳ್ಳಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಶ್ರೀ ದೇವಿರಮ್ಮ ದೇವಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ಅವರು ಶುಕ್ರವಾರ ಅಧಿಕೃತ ಚಾಲನೆ ನೀಡಿದರು.

ಈ ವೇಳೆ ಗ್ರಾಮದ ಚನ್ನಕೇಶವಸ್ವಾಮಿ, ದೇವಿರಮ್ಮ ಹಾಗೂ ಲಕ್ಷ್ಮೀದೇವಿ ದೇಗುಲಗಳಿಗೆ ಭೇಟಿ ನೀಡಿದ ಅವರು, ವಿಶೇಷ ಪೂಜೆ ಸಲ್ಲಿಸಿ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ ನೂರಾರು ಭಕ್ತರ ನಡುವೆ ದೇವರ ಆಶೀರ್ವಾದ ಪಡೆದರು. ಕುಮಾರಸ್ವಾಮಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯಘೋಷಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ದೇಗುಲಗಳ ಭೇಟಿಯ ನಂತರ ದೇವಾಲಯದ ಆವರಣದಲ್ಲಿ ಸಾವಿರಾರು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ವತಿಯಿಂದ ಕುಮಾರಸ್ವಾಮಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಇತ್ತೀಚೆಗೆ ಸಿಎಂ ಪದಕ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸುಭಾಷ್ ಅವರನ್ನು ಕುಮಾರಸ್ವಾಮಿ ಸನ್ಮಾನಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ನಂತರ ಕೇಂದ್ರ ಸಚಿವರು ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲೆಯ ಪ್ರಮುಖವಾದ ದೇವರು ಶ್ರೀ ಚನ್ನಕೇಶವ ಸ್ವಾಮಿ, ದೇವಿರಮ್ಮ ತಾಯಿಯ ಜಾತ್ರಾಮಹೋತ್ಸದ ಕಾರ್ಯಕ್ರಮಕ್ಕೆ ಇಲ್ಲಿ ಸುತ್ತಮುತ್ತಲ ಹಲವಾರು ಗ್ರಾಮಗಳ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯುತ್ತಿದೆ. ಈ ದೇವರ ಆಶೀರ್ವಾದ ನಾಡಿನ ಜನತೆ ಮೇಲೆ ಸಂಪೂರ್ಣ ಅನುಗ್ರಹ ಕುರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶವು ಮುಂದಿನ ಚುನಾವಣೆಗೂ ಈ ಉಪಚುನಾವಣೆಗೂ ಯಾವ ಸಂಬಂಧವಿಲ್ಲ. ಮುಂಬರುವ ಯಾವುದೇ ಚುನಾವಣೆಯ ಮೇಲೂ ಪರಿಣಾಮ ಬೀರುವುದಿಲ್ಲ. ಹಿಂದೆ ಹಲವಾರು ಬಾರಿ ನೋಡಿದ್ದೀರಿ, ಸರಕಾರದ ಪರವಾಗಿ ಉಪ ಚುನಾವಣೆಗಳಲ್ಲಿ ಫಲಿತಾಂಶ ಬಂದರೂ ನಂತರ ನಡೆದ ಚುನಾವಣೆಯಲ್ಲಿ ಸರಕಾರಗಳು ಪಥನವಾಗಿದೆ. ಆದ್ದರಿಂದ ಈ ಉಪ ಚುನಾವಣೆ ಬಗ್ಗೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು. ಜಿಪಂ ಹಾಗೂ ತಾಪಂ ಚುನಾವಣೆ ಬಗ್ಗೆ ಎಲ್ಲಾ ಪಕ್ಷದಲ್ಲು ಸಿದ್ಧತೆ ನಡೆದಂತೆ ನಮ್ ಪಕ್ಷದಿಂದಲೂ ನಡೆಯುತ್ತಿದೆ. ಪಕ್ಷ ಸಂಪೂರ್ಣ ಸಜ್ಜಾಗಿದ್ದು, ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸ್ವಾಮಿಗೌಡ, ತಹಸೀಲ್ದಾರ್‌ ಗೀತಾ, ತಾಪಂ ಮಾಜಿ ಸದಸ್ಯ ಜಯರಾಂ, ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್ ಬೊಮ್ಮೇಗೌಡ ಸೇರಿದಂತೆ ಶಿವರಾಮೇಗೌಡ, ಹರೀಶ್, ಮಂಜುನಾಥ್, ರವಿ, ದುರ್ಗಾಪ್ರಸಾದ್, ಸ್ವಾಮಿ, ಮಲ್ಲೇಶ್, ಕರಿಯಯ್ಯ, ಲಕ್ಷ್ಮಣ್ ಹಾಗೂ ಇತರರು ಉಪಸ್ಥಿತರಿದ್ದರು.

ಇಂದು ರಥೋತ್ಸವ:

ಮೇ ೯ರಂದು ಮುಂಜಾನೆ ೩ ಗಂಟೆಗೆ ಬಾಯಿ ಬೀಗ ಸೇವೆ ಆರಂಭವಾಗಲಿದೆ. ಬೆಳಗ್ಗೆ ೮.೩೦ಕ್ಕೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಗಣ್ಯರು, ಗ್ರಾಮಸ್ಥರ ಸಮ್ಮುಖದಲ್ಲಿ ದೇವಿರಮ್ಮ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಮಧ್ಯಾಹ್ನ ೧೨ಕ್ಕೆ ಮಹಾ ಮಂಗಳಾರತಿ, ೧೨.೩೦ಕ್ಕೆ ಪ್ರಸಾದ ವಿನಿಯೋಗ ಕಾರ್ಯಕ್ರಮವಿದೆ. ಸಂಜೆ ೭.೩೦ರಿಂದ ಆರ್ಕೆಸ್ಟ್ರಾ ಇರಲಿದೆ. ಉತ್ಸವದ ಉದ್ಘಾಟನೆಯನ್ನು ಶ್ರೀ ಶಂಭುನಾಥ ಸ್ವಾಮೀಜಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಅವರ ಪತ್ನಿ ಚನ್ನಮ್ಮ, ಸ್ಥಳೀಯ ಶಾಸಕ ಎಚ್. ಪಿ.ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಮಾಜಿ ಶಾಸಕರಾದ ಪ್ರೀತಂ ಜೆ.ಗೌಡ, ಬಿ.ವಿ.ಕರೀಗೌಡ, ಹಾಸನ ಜಿಪಂ ಮಾಜಿ ಅಧ್ಯಕ್ಷ ಸ್ವಾಮಿಗೌಡ, ತಾಪಂ ಮಾಜಿ ಸದಸ್ಯ ಬಿ.ಈ.ಜಯರಾಂ ಮೊದಲಾದವರು ಭಾಗಿಯಾಗುವರು. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭಾನ್ವಿತಾ ಸೇರಿದಂತೆ ಎಲ್ಲ ಅಧಿಕಾರಿಗಳು ಭಾಗಿಯಾಗಲಿದ್ದಾರೆ.