ಮೂಡಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗ ಮತ್ತು ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಸಮಾಜಮುಖಿ ಚಟುವಟಿಕೆಯ ಅಂಗವಾಗಿ ಬ್ರಹ್ಮಾವರದ ‘ಸ್ಪಂದನ’ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿತು.
ಕುಂದಾಪುರ: ಇಲ್ಲಿನ ಮೂಡಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗ ಮತ್ತು ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಸಮಾಜಮುಖಿ ಚಟುವಟಿಕೆಯ ಅಂಗವಾಗಿ ಬ್ರಹ್ಮಾವರದ ‘ಸ್ಪಂದನ’ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿತು.
ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಉದ್ದೇಶದಿಂದ ಎಂಐಟಿ ತಂಡವು ಶಾಲೆಗೆ ಭೇಟಿ ನೀಡಿ, ದೇಣಿಗೆಯ ಚೆಕ್ ಅನ್ನು ನೇರವಾಗಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿತು.ಈ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಪ್ರೊ. ಕಾರ್ತಿಕೇಯನ್ ಅವರು ಮಾತನಾಡಿ, ಶಿಕ್ಷಣದೊಂದಿಗೆ ಮಾನವೀಯತೆ, ಸಹಾನುಭೂತಿ ಮತ್ತು ಸಾಮಾಜಿಕ ಅರಿವು ವಿದ್ಯಾರ್ಥಿಗಳಲ್ಲಿ ಬೆಳದರೆ ಮಾತ್ರ ನಿಜವಾದ ಉತ್ತಮ ನಾಗರಿಕರು ನಿರ್ಮಾಣವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.ವಿಭಾಗದ ಪ್ರಾದ್ಯಾಪಕ ಪ್ರೊ. ನಿರ್ಮಲ್, ಡಾ. ಸ್ಯಾಮ್, ಪ್ರೊ. ಫರಾನಾ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡರು. ‘ಸ್ಪಂದನ’ ಶಾಲೆಯ ಸಿಬ್ಬಂದಿಗಳು ಎಂಐಟಿಯ ಈ ಸಾರ್ಥಕ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿ, ಮಕ್ಕಳ ಪರವಾಗಿ ಈ ಮಾನವೀಯ ನಡೆಯನ್ನು ಶ್ಲಾಘಿಸಿದರು.