ಯುಪಿಎಂಸಿಯಲ್ಲಿ ‘ಕುಸಲ್ದ ಗೊಬ್ಬುಲು’ ತುಳು ಉತ್ಸವ ಸಂಪನ್ನ

| Published : Apr 05 2024, 01:03 AM IST

ಯುಪಿಎಂಸಿಯಲ್ಲಿ ‘ಕುಸಲ್ದ ಗೊಬ್ಬುಲು’ ತುಳು ಉತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ತುಳು ನಾಡಿನ ವೈಭವ, ತುಳು ಸಂಸ್ಕೃತಿಯ ಕುರಿತಾದ ‘ಕುಸಲ್ದ ಗೊಬ್ಬುಲು - ೨೦೨೪’ ಎಂಬ ಒಂದು ದಿನದ ತುಳು ಉತ್ಸವ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ ‘ಕುಸಲ್ದ ಗೊಬ್ಬುಲು - ೨೦೨೪’ ಎಂಬ ಒಂದು ದಿನದ ತುಳು ಉತ್ಸವಕ್ಕೆ ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ತುಳು ನಾಡಿನ ವೈಭವವನ್ನು ವಿವರಿಸುತ್ತ ತುಳು ಸಂಸ್ಕೃತಿಯನ್ನು ಅಳವಡಿಸಿಕೊಂಡು ಸುಸಂಸ್ಕೃತರಾಗಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜೊತೆಗೆ ದಿನ ನಿತ್ಯದ ಪಾಠ ಪ್ರವಚನಗಳೊಂದಿಗೆ ಇಂತಹ ಉತ್ಸವಗಳ ಆಚರಣೆಗಳು ವಿದ್ಯಾರ್ಥಿಗಳಲ್ಲಿ ಸಮಾನತೆ, ಸಹಬಾಳ್ವೆ, ಶಾಂತಿ, ಸೌಹಾರ್ದತೆಗಳು ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.

ತುಳು ಉತ್ಸವದ ಸಂಯೋಜಕ ಚಂದ್ರಶೇಖರ್, ತುಳು ಸಂಸ್ಕೃತಿಯ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಜಾವೇದ್, ರಾಘವೇಂದ್ರ ಜಿ.ಜಿ., ಹರಿಕೇಶವ್ ಸಹಕರಿಸಿದರು.

ಉದ್ಘಾಟನೆಯ ನಂತರ ಕರದರ್ಪುನಿ, ಕೆರೆದಡ, ಟೊಂಕಾಟ, ಗುಂಟಾಟ, ಲಗೋರಿ, ಸೊಪ್ಪಾಟ ಮೊದಲಾದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಆನಂದಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರಭಾ ಕಾಮತ್, ಭಾಷಾ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ರಾವ್ ಹಾಗೂ ಉತ್ಸವ ವಿದ್ಯಾರ್ಥಿ ಸಂಯೋಜಕರಾದ ಪ್ರೇಮಸಾಯಿ, ಮನೀಶ್ ಕಾಂಚನ್, ಸವೀನ್ ಪಾಲನ್, ಸುಹಾಗ್, ಆಶಿಕಾ, ಸಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು.

ನೌಶಿನ್ ತೃತೀಯ ಬಿ.ಕಾಂ ಸ್ವಾಗತಿಸಿದರು. ಕಾವ್ಯ ಶೆಟ್ಟಿ ತೃತೀಯ ಬಿಬಿಎ ವಂದಿಸಿದರು. ಚೈತ್ರಾ ದೇವಾಡಿಗ ತೃತೀಯ ಬಿಬಿಎ ಕಾರ್ಯಕ್ರಮ ನಿರೂಪಿಸಿದರು.