ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತವಾಗದಿರಿ ನೈತಿಕ ಶಿಕ್ಷಣ ಅಗತ್ಯ

| Published : Nov 04 2024, 12:26 AM IST

ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತವಾಗದಿರಿ ನೈತಿಕ ಶಿಕ್ಷಣ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವೈಜ್ಞಾನಿಕವಾಗಿ ದಿನೇ ದಿನೆ ಅಭಿವೃದ್ಧಿ ಹೊಂದುತ್ತಿದ್ದೇವೆ ಆದರೂ ಶಿಕ್ಷಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಸಿಲೆಬಸ್ ಮುಗಿಸುವುದು ಮತ್ತು ಅಂಕಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಶಾಲಾ ಕಾಲೇಜುಗಳು ಆದ್ಯತೆ ಕೊಡಬೇಕೆಂದು ಮಾಜಿ ಅಡ್ವೋಕೇಟ್ ಜನರಲ್ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು ಚಂದ್ರಶೇಖರ ಭಾರತೀಯ ವಿದ್ಯಾಸಂಸ್ಥೆಯ ಅಧ್ಯಕ್ಷರು ಆದ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಮಾಲೆಕಲ್ ತಿರುಪತಿ ಚಂದ್ರಶೇಖರ ಭಾರತಿ ಸಮುದಾಯ ಭವನದಲ್ಲಿ ಆಯೋಜಿಸಿದ ಸಂಸ್ಥೆಯ 31ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಶ್ರೀ ಚಂದ್ರಶೇಖರ್ ಭಾರತೀಯ ಮತ್ತು ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಇದು ತೃಪ್ತಿ ತಂದಿದೆ. ಆದರೂ ಮಕ್ಕಳಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದಾಗ ಅವುಗಳನ್ನು ಉತ್ತಮ ಮಕ್ಕಳಿಗೆ ದೊರಕಿಸುವ ನಿಟ್ಟಿನಲ್ಲಿ ಪೋಷಕರು ಬರುತ್ತಾರೆ, ಸ್ಕೇಟಿಂಗ್ ಕೋರ್ಟ್‌, ಮೊದಲಾದ ಸೌಲಭ್ಯವನ್ನು ವರ್ಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಚಿಂತಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳಿಗೆ ವಿಭಿನ್ನ ಆಕರ್ಷಣೀಯ ಸೌಲಭ್ಯಗಳು ಇಂದು ಅನಿವಾರ್ಯವಾಗಿದೆ ಎಂದ ಅವರು ಸಂಸ್ಥೆಯ ನಿರ್ದೇಶಕರು ಹೆಚ್ಚು ಕ್ರಿಯಾಶೀಲರಾಗಿ ಶಾಲಾ ಕಾಲೇಜು ಅಭಿವೃದ್ಧಿ ಹಾಗೂ ಪ್ರತಿಭ ವಿದ್ಯಾರ್ಥಿಗಳನ್ನು ಹೊರತರುವ ನಿಟ್ಟಿನಲ್ಲಿ ಹೆಚ್ಚು ಪರಿಶ್ರಮ ಪಡಬೇಕೆಂದು ಮನವಿ ಮಾಡಿದರು. ಚಂದ್ರಶೇಖರ ಭಾರತೀಯ ವಿದ್ಯಾಸಂಸ್ಥೆ ತಾಲೂಕು ಬ್ರಾಹ್ಮಣ ಸಂಘ ಬೇರೆಯಲ್ಲ ಎಲ್ಲರ ಸಹಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ವಾರ್ಷಿಕ ವರದಿ ನೀಡಿದ ಕಾರ್ಯದರ್ಶಿ ನಾರಾಯಣ್ ವಿದ್ಯಾಸಂಸ್ಥೆ 31 ವರ್ಷಗಳನ್ನು ಕಂಡಿದೆ ಎಂದರೆ ಇದಕ್ಕೆ ಎಲ್ಲರ ಸಹಕಾರ ಸಾಧ್ಯವಾಗಿದೆ. ನಮ್ಮ ಚಂದ್ರಶೇಖರ್ ಭಾರತಿ ಕೈಗಾರಿಕಾ ಸಂಸ್ಥೆಯು ರಾಜ್ಯದಲ್ಲಿ 11ನೇ ಸ್ಥಾನವನ್ನು ಹೊಂದಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಐಟಿಐನಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಒಳ್ಳೆಯ ಸ್ಥಾನಗಳನ್ನು ಅಲಂಕರಿಸಿದ್ದಾರೆ. 16 ಮಕ್ಕಳಿಂದ ಪ್ರಾರಂಭವಾದ ಶಾಲೆಯು ಇಂದು 600 ವಿದ್ಯಾರ್ಥಿಗಳನ್ನು ಹೊಂದಿದೆ. ಇದಕ್ಕೆ ಶಾಲೆಯಲ್ಲಿ ನೀಡುವ ಗುಣಮಟ್ಟದ ಶಿಕ್ಷಣ ಮತ್ತು ನೈತಿಕ ಶಿಕ್ಷಣವು ಕಾರಣವಾಗಿದೆ. ಅರ್ಹ ಶಿಕ್ಷಕರುಗಳನ್ನೇ ನಾವು ನೇಮಿಸಿಕೊಂಡಿದ್ದೇವೆ. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಹಂಸಿತ ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಪಡೆದು ಕೀರ್ತಿ ತಂದಿದ್ದಾಳೆ, ರಾಜ್ಯಮಟ್ಟದ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 7 ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ ಎಂದರು.

ನಿರ್ದೇಶಕ ಕುಮಾರ್ ಕಳೆದ ಸಾಲಿನ ಮಹಾಸಭೆ ನಡವಳಿಯನ್ನು ಓದಿದರು. ಖಜಾಂಚಿ ಶ್ರೀರಾಮಚಂದ್ರ ಕಳೆದ ಸಾಲಿನ ಆಯವ್ಯಯ ಮಂಡಿಸಿದರು. ಪ್ರಭಾಕರ್, ಉಪಾಧ್ಯಕ್ಷ ಹಿರಿಯಣ್ಣ, ಟಿ ಆರ್‌ ನಾಗರಾಜ್, ಉಪಾಧ್ಯಕ್ಷ ವೆಂಕಟರಾಮು, ಆಡಿಟರ್ ಸುಬ್ಬಣ್ಣ ಡಿ.ಎಸ್ ರಾಮಸ್ವಾಮಿ ಮೊದಲಾದವರು ಸಭೆ ಚರ್ಚೆಯಲ್ಲಿ ಪಾಲ್ಗೊಂಡರು.