ಜಾನಪದ ಪರಿಷತ್ತಿನಿಂದ ಸಂಗೀತ ಸಾಧಕರಿಗೆ ಸನ್ಮಾನ

| Published : Nov 05 2024, 12:38 AM IST / Updated: Nov 05 2024, 12:39 AM IST

ಸಾರಾಂಶ

ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಡೆದ ಬೇಲೂರು ತಾಲೂಕು ಜಾನಪದ ಪರಿಷತ್ತಿನಿಂದ ಸಂಗೀತಾ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಐಶ್ವರ್ಯ ಜಾನಪದ ಸೇರಿದಂತೆ ಸಂಗೀತದ ವಿವಿಧ ಪ್ರಕಾರದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ್ದಾಳೆ. ಸರಿಗಮಪ ಕಾರ್ಯಕ್ರಮದ ಮೆಟ್ಟಿಲೇರಿ, ಸಂಗೀತ ದಿಗ್ಗಜ ಹಂಸಲೇಖ ಅವರ ಮೆಚ್ಚುಗೆ ಪಡೆದಿದ್ದಾರೆ. ಬೇಲೂರು ತಾಲೂಕು ಜಾನಪದ ಪರಿಷತ್ತಿನವರು ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಉಪ ಪ್ರಾಂಶುಪಾಲ ಮುಳ್ಳಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಬೇಲೂರು ತಾಲೂಕು ಜಾನಪದ ಪರಿಷತ್ತಿನವರು ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಉಪ ಪ್ರಾಂಶುಪಾಲ ಮುಳ್ಳಯ್ಯ ಹೇಳಿದರು.

ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಡೆದ ಬೇಲೂರು ತಾಲೂಕು ಜಾನಪದ ಪರಿಷತ್ತಿನಿಂದ ಸಂಗೀತಾ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಐಶ್ವರ್ಯ ಜಾನಪದ ಸೇರಿದಂತೆ ಸಂಗೀತದ ವಿವಿಧ ಪ್ರಕಾರದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ್ದಾಳೆ. ಸರಿಗಮಪ ಕಾರ್ಯಕ್ರಮದ ಮೆಟ್ಟಿಲೇರಿ, ಸಂಗೀತ ದಿಗ್ಗಜ ಹಂಸಲೇಖ ಅವರ ಮೆಚ್ಚುಗೆ ಪಡೆದಿದ್ದಾರೆ.

ರಾಜ್ಯ ಪರಿಸರ ದಿನಾಚರಣೆ, ತರಳಬಾಳು ಹುಣ್ಣಿಮೆ, ಜಿಲ್ಲಾ ಮಟ್ಟದ ಸಂಗೀತೋತ್ಸವ, ಕಲೋತ್ಸವ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಪ್ರತಿವರ್ಷ ಗೆಲುವು ಸಾಧಿಸಿದ್ದನ್ನು ಪರಿಗಣಿಸಿ ಐಶ್ವರ್ಯ ಅವರನ್ನು ಗೌರವಿಸಿರುವುದು ಸಂತಸದ ವಿಚಾರ ಎಂದರು. ಇದೇ ಸಂದರ್ಭದಲ್ಲಿ ಉಪ ಪ್ರಾಂಶುಪಾಲ ಮುಳ್ಳಯ್ಯ ಮಾತನಾಡಿದರು. ತಾಲೂಕು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಧನಂಜಯ ಸಿ.ಎಚ್.ಮಾತನಾಡಿ, ಕರ್ನಾಟಕದ ಜಾನಪದ ಪರಿಷತ್ತು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದೆ. ಪರಿಷತ್ತು ವಿಶ್ವ ಮಾನ್ಯತೆ ಪಡೆದಿರುವುದರಿಂದ ಗ್ರಾಮೀಣ ಪ್ರದೇಶದ ಜಾನಪದದ ಎಲ್ಲಾ ಪ್ರಾಕಾರಗಳು ಗರಿಗೆದರಲಿವೆ ಎಂದರು.

ಪತ್ರಕರ್ತ ಎಚ್.ಎಸ್.ಅನಿಲ್ ಕುಮಾರ್‌ ಮಾತನಾಡಿ, ಹಿಂದೆ ಒಂದು ಕಾಲದಲ್ಲಿ ಜಾನಪದ ಗ್ರಾಮೀಣ ಜನರ ಜೀವನಾಡಿಯಾಗಿತ್ತು. ಜನಪದ ಹಾಡುಗಳು ಇಂದಿಗೂ ಜೀವಂತವಾಗಿದ್ದು, ಬದುಕಿನ ಪಾಠಗಳನ್ನು ಹೇಳುತ್ತವೆ. ಸಂಗೀತ ಸಾಧಕಿ ಐಶ್ವರ್ಯ ಸಂಗೀತದ ವಿವಿಧ ಪ್ರಕಾರದೊಂದಿಗೆ ಜಾನಪದದ ಹಾಡುಗಳಲ್ಲಿಯೂ ತಮ್ಮ ಕಂಠಸಿರಿ ವ್ಯಕ್ತಪಡಿಸುತ್ತಾರೆ ಎಂದರು.ಉಪನ್ಯಾಸಕಿ ಗೋಮತಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಭಾಗವಹಿಸಿದ್ದರು.