ಮೈಸೂರು ವಿಭಾಗೀಯ ರೈಲ್ವೆಯಿಂದ ರಕ್ತದಾನ ಶಿಬಿರ

| Published : Sep 12 2025, 01:00 AM IST

ಮೈಸೂರು ವಿಭಾಗೀಯ ರೈಲ್ವೆಯಿಂದ ರಕ್ತದಾನ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಅನೇಕ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿದರು

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಭಾಗೀಯ ರೈಲ್ವೆ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ವ್ಯವಸ್ಥಾಪಕ ಮುದಿತ್‌ಮಿತ್ತಲ್‌ ಸೇರಿ ಹಲವರು ರಕ್ತದಾನ ಮಾಡಿದರು.

ಮೈಸೂರು ವಿಭಾಗದಿಂದ ಗುರುವಾರ ರೈಲ್ವೆ ಆಸ್ಪತ್ರೆ ಹಾಗೂ ರಕ್ತ ನಿಧಿ, ಕೆ.ಆರ್. ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಯಶಸ್ವಿಯಾಗಿ ರಕ್ತದಾನ ಶಿಬಿರ ನಡೆಯಿತು.

ಶಿಬಿರದ ಉದ್ದೇಶ ಸೇವಾ ಮನೋಭಾವ, ಸಹಾನುಭೂತಿ ಹಾಗೂ ಸಾಮಾಜಿಕ ಹೊಣೆಗಾರಿಕೆ ಉತ್ತೇಜಿಸುವುದು.

ಅನೇಕ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿದರು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಸೇರಿ ಒಟ್ಟು 48 ಮಂದಿ ಸ್ವಯಂಸೇವಕರು ರಕ್ತದಾನ ಮಾಡಿದರು.

ರಕ್ತದಾನ ಶಿಬಿರವು ರಕ್ತದಾನ ಪೂರೈಕೆಯನ್ನು ಬಲಪಡಿಸಿ, ಪ್ರದೇಶದ ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಉದ್ದೇಶವನ್ನು ಹೊಂದಿದ್ದರಿಂದ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಯಿತು. ಮೈಸೂರು ವಿಭಾಗವು ತನ್ನ ಸಮಾಜಮುಖಿ ಸೇವಾ ಬದ್ಧತೆಯನ್ನು ಪುನರುಚ್ಚರಿಸಿ, ಆರೋಗ್ಯ ಸಂಬಂಧಿತ ಹಿತಾಸಕ್ತಿ ಕಾರ್ಯಕ್ರಮ ಹಾಗೂ ಸಾಮಾಜಿಕ ಉಪಕ್ರಮಕ್ಕೆ ನಿರಂತರವಾಗಿ ಬೆಂಬಲ ನೀಡುವುದಾಗಿ ತಿಳಿಸಿದೆ.

ಶಿಬಿರವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಉದ್ಘಾಟಿಸಿದರು. ಈ ವೇಳೆಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಮ್ಮಾಸ್ ಹಮೀದ್, ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎನ್‌. ಅಶೋಕ್ ಕುಮಾರ್, ಡಾ. ಕುಸುಮಾ ಹಾಗೂ ಡಾ. ಚಿಂಟು ಮೇರಿ ಮ್ಯಾಥ್ಯೂ, ಕೆ.ಆರ್. ಆಸ್ಪತ್ರೆ ಮತ್ತು ರಕ್ತನಿಧಿ ಕೇಂದ್ರದ ಸಿಬ್ಬಂದಿ ಇದ್ದರು.