ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವ ಅವಾಂತರಗಳ ನಡುವೆ ರಾಜಕಾಲುವೆಗಳ ಒತ್ತುವರಿಂದಾಗಿ ಉಂಟಾಗುವ ಸಮಸ್ಯೆ ಜನರನ್ನು ತತ್ತರಿಸುವಂತೆ ಮಾಡಿದೆ.ಹೌದು ಕಳೆದ ಎರಡು ವರ್ಷಗಳ ಹಿಂದೆ ಮಳೆಯಿಂದಾಗಿ ಬಡಾವಣೆಗಳು ಜಲಾವೃತಗೊಂಡಾಗ ಬಿರುಸಿನ ಕಾರ್ಯಾಚರಣೆ ಕೈಗೊಂಡು ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು. ಈಗ ಪುನಃ ಹಲವೆಡೆ ಕಾಲುವೆಗಳ ಒತ್ತುವರಿಯಾಗಿದ್ದು ರಾಜಕಾಲವೇಗಳು ಚರಂಡಿಯಂತಾಗಿವೆ. ಆದರೆ ಮಳೆ ನಿಂತ ಕೂಡಲೇ ಅಧಿಕಾರಿಗಳು ತಟಸ್ಥರಾಗುತ್ತಾರೆ.
ತಾಲೂಕಿನಲ್ಲಿ 244 ಕೆರೆಗಳಿದ್ದು ಪ್ರತಿ ವರ್ಷ ಅಕ್ರಮ ಒತ್ತುವರಿ ತೆರವು ಸಂರಕ್ಷಣೆ ಮತ್ತು ಮತ್ತೆ ಒತ್ತುವರಿ ನಿರಂತರ ಪ್ರಕ್ರಿಯೆಯಾಗಿದೆ. ಆದರೆ ಸಮಸ್ಯೆ ಬಂದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಂಡು ಮತ್ತೆ ಮೌನ ಆಗುವುದರಿಂದ ನಿರೀಕ್ಷೆಯ ಪ್ರಗತಿ ಕಂಡುಬರುತ್ತಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಳೆಯಿಂದ ಮನೆಗಳೊಳಗೆ 2 ಅಡಿಗಳಷ್ಟು ನೀರು ನಿಂತಿತ್ತು. ಆಗ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರೆವು ಗೊಳಿಸುವ ಭರವಸೆ ನೀಡಿದ್ದರು. ಆದರೆ ಅದು ಬರೀ ಭರವಸೆಯಾಗಿಯೇ ಉಳಿದಿದೆ. ಈಗ ಮತ್ತೆ ಮಳೆಗಾಲ ಶುರುವಾಗಿದೆ. ಕಾಲುವೆ ಪಕ್ಕದ ಮನೆಯವರಿಗೆಲ್ಲ ಆತಂಕ ಶುರುವಾಗಿದೆ.ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬಡಾವಣೆ ನಿವಾಸಿಗಳು ಎಲ್ಲರೂ ಸೇರಿ 2 ಬಾರಿ ಕಚೇರಿ ಭೇಟಿ ನೀಡಿ ಅಧಿಕಾರಿಗಳಿಗೆ ವಿಷಯ ತಿಳಿಹೇಳಿದರು ಇದರ ಬಗ್ಗೆ ಗಮನ ಹರಿಸಿರುವುದಿಲ್ಲ. ಒಂದು ವೇಳೆ ಈ ಬಾರಿ ಮತ್ತೆ ಅದೇ ರೀತಿಯಾದಲ್ಲಿ ಯಾದಲ್ಲಿ ಈ ನಗರದಲ್ಲಿ ನಿಲ್ಲುವ ಎಲ್ಲಾ ಕೆಸರನ್ನು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಸುರಿಯುತ್ತೇವೆ ಎಂದು ನಿವೃತ್ತ ಪ್ರಾಂಶುಪಾಲ ಡಿ.ಜಯರಾಮಯ್ಯ ಎಚ್ಚರಿಕೆ ನೀಡಿದ್ದಾರೆ.ಅರವಿಂದ ನಗರದಲ್ಲಿ 8 ಅಡಿ ಅಗಲದ ರಾಜಕಾಲುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಈಗ ರಾಜಕಾಲುವೆ ನಿರ್ಮಾಣ ವಾಗಿರುವುದು. ಕೇವಲ 4 ಅಡಿ ಅಗಲ ಮಾತ್ರ. ಅದನ್ನೂ ಸರಿಯಾಗಿ ನಿರ್ಮಾಣ ಮಾಡಲಿಲ್ಲ ಅವೈಜ್ಞಾನಿಕವಾಗಿ ಮತ್ತು ಬೇಕಾಬಿಟ್ಟಿ ಕಾಮಗಾರಿ ಮಾಡಿದ್ದಾರೆ. ಒಂದು ಬಾರಿಯೂ ಎಂಜಿನಿಯರ್ ಆಗಲಿ, ಗುತ್ತಿಗೆದಾರನಾಗಲಿ, ಈ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಸ್ಥಳಪರಿಶೀಲನೆ ಮಾಡಿಲ್ಲ ಎಂದು ಬಡಾವಣೆ ನಿವಾಸಿ ನಿವೃತ್ತ ಅಧಿಕಾರಿ ಅಶ್ವತ್ಥಪ್ಪ ಆರೋಪಿಸಿದರು. ಈಗ ಮತ್ತೆ ಮಳೆಗಾಲ ಶುರುವಾಗಿದೆ ಮಳೆ ಬಂದರೆ ಪುನಃ ಮನೆಗಳಿಗೆ ನೀರು ನುಗ್ಗುವ ಭಯದ ಭೀತಿಯಲ್ಲಿ ನಗರದ ಸಾರ್ವಜನಿಕರು ಚಿಂತಿಸುತ್ತಿದ್ದಾರೆ ರಾಜಕಾಲುಗೆ ಸಂಬಂಧಪಟ್ಟ ಯಾವುದೇ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಒತ್ತುವರಿದಾರರ ಪ್ರಭಾವ ಹಾಗೂ ಸ್ಥಳೀಯ ಮುಖಂಡರ ಪ್ರಭಾವದಿಂದ ಕಾಮಗಾರಿ ಆರಂಭದಲ್ಲೇ ನಿಲ್ಲುತ್ತದೆ. ಕೆಇಬಿ ಹಿಂಭಾಗ ಕರೆಕಲ್ಲಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ಎಷ್ಟೋ ರಾಜಕಾಲುವೆಗಳು ಕೆಲವರ ಸ್ವಾರ್ಥಕ್ಕೆ ಸಮಾಧಿಯಾಗಿವೆ. ಇನ್ನೂ ಕೆಲವೇ ಇರುವ ಸಣ್ಣಪುಟ್ಟ ರಾಜಕಾಲುವೆಗಳು ಚರಂಡಿಗಳಂತಾಗಿವೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಒತ್ತುವರಿ ತೆರವಿಗೆ ಒತ್ತಾಯ
ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವಿನ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಇದರ ನಡುವೆ ಪ್ರಭಾವಿ ಅಧಿಕಾರಿಗಳು ಎಲ್ಲರು ಒಂದಾಗಿ ರಾಜಕಾಲುವೆಯನ್ನು ಲೇಔಟ್ ಗಳಲ್ಲಿ ಸೇರಿಸಿದ್ದಾರೆ. ರಾಜಕಾಲುವೆ ಒತ್ತುವರಿಯಾಗಿದ್ದರೂ ಲೇಔಟ್‌ಗಳಿಗೆ ಮಾನ್ಯತೆ ನೀಡಲಾಗುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಬಲಾಢ್ಯರು ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಗರದ ಎಲ್ಲಾ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ರಾಜ್ಯಕಾಲುವೇಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮೊದಲಿನಿಂದಲೂ ಕೆರೆ ಮತ್ತು ರಾಜ ಕಾಲವೇ ಸಂರಕ್ಷಣಾ ಕಾರ್ಯ ಅಸಮರ್ಪಕವಾಗಿ ನಡೆಯುತ್ತಿದೆ. ಅಭಿವೃದ್ಧಿ ಯೋಜನೆಗಳು ಸಂರಕ್ಷಣೆ ಕಾರ್ಯಗಳು ಮತ್ತು ಅನುದಾನದ ಖರ್ಚು, ಅರ್ಧಂಬರ್ಧ ಸಾಧನೆಗೆ ಸೀಮಿತವಾಗಿದೆ ಅವೈಜ್ಞಾನಿಕ ಕ್ರಮಗಳಿಂದ ಧಾರಾಕಾರ ಮಳೆ ಸುರಿದರು ಕೆರೆಗಳಲ್ಲಿ ನೀರನ್ನು ಹಿಡಿದಿಡುವ ಕೆಲಸವಾಗುತ್ತಿಲ್ಲ.