ಸಾರಾಂಶ
ಹಣದಾಸೆಗೆ ಬಲಿಯಾಗದೇ ಪ್ರಾಮಾಣಿಕತನ ಸೇವೆ ನೀಡಿದರೆ ಆ ವೈದ್ಯರ ಹೆಸರು ಎಲ್ಲೆಡೆ ಪಸರಿಸಲಿದೆ
ಕನ್ನಡಪ್ರಭ ವಾರ್ತೆ ತಾಳಿಕೋಟೆವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ರೋಗಿಗಳಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ರೋಗಿ ಶ್ರೀಮಂತನಾಗಿರಲಿ, ಬಡವನಾಗಿರಲಿ ಆತನಿಗೆ ಆತನ ಖಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ಡಾ.ಅರುಣಕುಮಾರ ಮದರಕಲ್ಲ ಅವರ ನೂತನ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣದಾಸೆಗೆ ಬಲಿಯಾಗದೇ ಪ್ರಾಮಾಣಿಕತನ ಸೇವೆ ನೀಡಿದರೆ ಆ ವೈದ್ಯರ ಹೆಸರು ಎಲ್ಲೆಡೆ ಪಸರಿಸಲಿದೆ ಎಂದರು. ಗಡಿ ಸೋಮನಾಳ ಹಿರೇಮಠದ ಶ್ರೀ ಇಂಧುದರ ಸ್ವಾಮಿ ಮಾತನಾಡಿ ವೈದ್ಯಕೀಯ ಸೇವೆಯಲ್ಲಿ ಅಪಾರ ಶಕ್ತಿ ಇದೆ. ವೈದ್ಯರು ಜನಮೆಚ್ಚುವ ಕಾರ್ಯ ಮಾಡಬೇಕು ಎಂದರು. ಪತ್ರಕರ್ತ ಜಿ.ಟಿ.ಘೋರ್ಪಡೆ ಮಾತನಾಡಿ, ಇಂದು ಉದ್ಘಾಟನೆಯಾದ ಡಾ.ಅರುಣಕುಮಾರ ಮದರಕಲ್ಲ ಅವರ ಆಸ್ಪತ್ರೆ ಈ ಹಿಂದಿನ ಹಿರಿಯರಾದ ಡಾ.ಬಿ.ಎಸ್.ಸಾಸನೂರ ಅವರ ಆಸ್ಪತ್ರೆಯಲ್ಲಿ ಒಳಗೊಂಡಿರುವುದು ಸಂತಸ ತಂದಿದೆ ಎಂದರು. ಈ ವೇಳೆ ಶ್ರೀ ಖಾಸ್ಗತೇಶ್ವರ ಮಠದ ವೇ.ಮುರುಘೇಶ ವಿರಕ್ತಮಠ, ಡಾ.ಬಿ.ಎಸ್.ಸಾಸನೂರ, ಸರ್ಕಾರಿ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ, ಡಾ.ಗಂಗಾಂಬಿಕಾ ಪಾಟೀಲ, ಡಾ.ವಿಜಯಲಕ್ಷ್ಮೀ ಹಜೇರಿ, ಡಾ.ಮಧು ಅಗರವಾಲಾ, ಡಾ.ರವಿ ಅಗರವಾಲಾ, ಡಾ.ಎಲ್.ಎನ್.ಶೆಟ್ಟಿ, ಡಾ.ಆನಂದ ಭಟ್, ಡಾ.ವಿಜಯಕುಮಾರ ಚಿತ್ತರಗಿ, ಡಾ.ನಜೀರ ಕೋಳ್ಯಾಳ, ವಿ.ಸಿ.ಹಿರೇಮಠ, ಬಿ.ಎನ್.ಹಿಪ್ಪರಗಿ, ರವಿ ಪಾಟೀಲ, ನ್ಯಾಯವಾದಿ ಆನಂದ ಮದರಕಲ್ಲ, ಸಿದ್ದನಗೌಡ ಮದರಕಲ್ಲ, ಎಸ್.ಎನ್.ಪಾಟೀಲ, ಎಸ್.ಸಿ.ದೇಸಾಯಿ, ಆರ್.ಟಿ.ಪಾಟೀಲ, ದ್ಯಾಮನಗೌಡ ಪಾಟೀಲ, ಶಿಕ್ಷಕ ಡೋಣಿ, ಎಂ.ಎಚ್.ಕೇಂಭಾವಿ, ಪ್ರಭುಗೌಡ ಮದರಕಲ್ಲ, ಬಸನಗೌಡ ಮದರಕಲ್ಲ, ಶಿವಾನಂದ ಹೂಗಾರ, ಅಣ್ಣಾಜಿ ಜಗತಾಪ, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಪರಶುರಾಮ ತಂಗಡಗಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ವಿಜಯಸಿಂಗ್ ಹಜೇರಿ, ಮಲ್ಲಿಕಾರ್ಜುನ ಮದರಕಲ್ಲ, ಎ.ಐ.ನಿಡಗುಂದಿ, ಮೊದಲಾದವರಿದ್ದರು.