28 ರಂದು ‘ಆಪರೇಷನ್‌ ಲಂಡನ್‌ ಕೆಫೆ (ಒಎಲ್‌ಸಿ)’ ಸಿನೆಮಾ ತೆರೆಗೆ

| Published : Nov 23 2025, 03:00 AM IST

ಸಾರಾಂಶ

ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ವಿಜಯ್‌ ಕುಮಾರ್‌ ಶೆಟ್ಟಿ ಅವರಾಲ್‌, ರಮೇಶ್‌ ಕೊಠಾರಿ, ದೀಪಕ್‌ ರಾಣೆ ಮತ್ತು ವಿಜಯ ಪ್ರಕಾಶ್‌ ಇಂಡಿಯನ್‌ ಫಿಲಂ ಫ್ಯಾಕ್ಟರಿ ಮತ್ತು ದೀಪಕ್‌ ರಾಣೆ ಫಿಲಂಸ್‌ ಲಾಂಛನದ ಅಡಿಯಲ್ಲಿ ಬಹಳ ಅದ್ದೂರಿಯಾಗಿ ನಿರ್ಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುನಿರೀಕ್ಷೆಯ ‘ಆಪರೇಷನ್‌ ಲಂಡನ್‌ ಕೆಫೆ (ಒಎಲ್‌ಸಿ)’ ಸಿನೆಮಾ ಮರಾಠಿ, ಕನ್ನಡ, ಹಿಂದಿ ಭಾಷೆಯಲ್ಲಿ ನ.28ರಂದು 300 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಎಂದು ಚಿತ್ರದ ನಾಯಕ ನಟ ಕವೀಶ್‌ ಶೆಟ್ಟಿ ತಿಳಿಸಿದರು.

ಶನಿವಾರ ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ವಿಜಯ್‌ ಕುಮಾರ್‌ ಶೆಟ್ಟಿ ಅವರಾಲ್‌, ರಮೇಶ್‌ ಕೊಠಾರಿ, ದೀಪಕ್‌ ರಾಣೆ ಮತ್ತು ವಿಜಯ ಪ್ರಕಾಶ್‌ ಇಂಡಿಯನ್‌ ಫಿಲಂ ಫ್ಯಾಕ್ಟರಿ ಮತ್ತು ದೀಪಕ್‌ ರಾಣೆ ಫಿಲಂಸ್‌ ಲಾಂಛನದ ಅಡಿಯಲ್ಲಿ ಬಹಳ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ನಿರ್ದೇಶಕ ಸಡಗರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅರ್ಜುನ್‌ ಕಾಪಿಕಾಡ್‌, ಮೇಘಾ ಶೆಟ್ಟಿ ಉತ್ತಮ ಪಾತ್ರದಲ್ಲಿ ಮಿಂಚಿಸಿದ್ದಾರೆ. ಮರಾಠಿ ಚಿತ್ರರಂಗದ ಶಿವಾನಿ ಸುರ್ವೆ, ವಿರಾಟ್‌ ಮಡ್ಕೆ, ಪ್ರಸಾದ್‌ ಖಾಂಡೇಕರ್‌ ಮುಂತಾದವರು ಚಾಲೆಂಜಿಗ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ನಕ್ಸಲ್‌ ಜೀವನಾಧಾರಿತ ಸಿನಿಮಾ:

ನಕ್ಸಲ್‌ ಜೀವನಾಧಾರಿತ ಸಿನಿಮಾ ಇದಾಗಿದ್ದು, ಉಡುಪಿ, ಕಾರ್ಕಳ, ಸೀತಾನದಿ, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರದಲ್ಲಿ ಪಾಂಶು ಝಾ ಸಂಗೀತ, ಆರ್‌.ಡಿ. ನಾಗಾರ್ಜುನ್‌ ಛಾಯಾಗ್ರಹಣ, ವರದರಾಜ್‌ ಕಾಮತ್‌ ಕಲೆ, ವಿಕ್ರಂ ಮೊರ್‌, ಮಾಸ್‌ ಮಾದ ಮತ್ತು ಅರ್ಜುನ್‌ ರಾಜ್‌ ಸಾಹಸ, ಕವಿರಾಜ್‌, ಡಾ. ನಾಗೇಂದ್ರ ಪ್ರಸಾದ್‌ ಮತ್ತು ಸಡಗರ ರಾಘವೇಂದ್ರ ಸಾಹಿತ್ಯವಿದೆ. ಅನಿರುದ್ಧ್‌ ಶಾಸ್ತ್ರಿ, ಬ್ರಿಜೇಶ್‌ ಶಾಂಡಿಲ್ಯ, ಐಶ್ವರ್ಯ ರಂಗರಾಜನ್‌, ಪೃಥ್ವಿ ಭಟ್‌ ಮತ್ತು ಲಕ್ಷ್ಮೀ ಬೆಳ್ಮಣ್ಣು ಸಾಹಿತ್ಯಕ್ಕೆ ಇಂಪಾದ ಸ್ವರ ಸೇರಿಸಿದ್ದಾರೆ ಎಂದರು.ನಿರ್ಮಾಪಕ ವಿಜಯ್‌ ಕುಮಾರ್‌ ಶೆಟ್ಟಿ ಹವರಾಲ್‌ ಮಾತನಾಡಿ, ನಟ ಅರ್ಜುನ್‌ ಕಾಪಿಕಾಡ್‌ ಈ ಚಿತ್ರದಲ್ಲಿ ಒಬ್ಬ ಖಡಕ್‌ ಆರ್ಮಿ ಆಫೀಸರ್‌ ಪಾತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ತನ್ನ ಮೊದಲ ಚಿತ್ರ ಜಿಲ್ಕಾದ ಮೂಲಕ ಭರವಸೆ ಮೂಡಿಸಿರುವ ಯುವ ನಟ ಕವೀಶ್‌ ಶೆಟ್ಟಿ ತನ್ನ ಅದ್ಭುತ ನಟನೆ ಮತ್ತು ವಿಭಿನ್ನ ಸಾಹಸಗಳ ಮೂಲಕ ಪ್ರೇಕ್ಷಕರ ಮನಮುಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.ಚಿತ್ರದ ನಟ ಅರ್ಜುನ್‌ ಕಾಪಿಕಾಡ್‌ ಮಾತನಾಡಿ, ಮರಾಠಿ ಭಾಷೆ ಬಾರದೆ ಇದ್ದರೂ ಯಾವುದೇ ಸಮಸ್ಯೆಯಾಗದಂತೆ ನಟಿಸಲು ಸಹಕಾರ ನೀಡಿದ್ದಾರೆ. ತುಳುವರು ನನ್ನನ್ನು ಬೆಳೆಸಿದ್ದಾರೆ. ಅದೇ ಪ್ರೀತಿ ಈ ಕನ್ನಡ ಸಿನಿಮಾಕ್ಕೂ ಇರಲಿ ಎಂದರು.----------------