ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
"ಸಸ್ಯಸಂಕುಲ " ವಸ್ತು ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವ ಪ್ರಾಯೋಗಿಕ ಕಾರ್ಯ ಪೋಷಕರು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದೆ ಎಂದು ಭಾಗ್ಯಾವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಎಸ್ ಲಿಂಗೇಶ್ ತಿಳಿಸಿದ್ದಾರೆ.ಇಲ್ಲಿನ ಹರ್ಷ ಕಲ್ಪತರು ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಸ್ಯ ಸಂಕುಲ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕೆ ಪಠ್ಯಚಟುವಟಿಕೆಗಳ ಜೊತೆಜೊತೆಗೆ ಪ್ರಾಯೋಗಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಿಸುತ್ತವೆ. ಅಂತಹ ಕಾರ್ಯವನ್ನು ಹರ್ಷ ಕಲ್ಪತರು ಶಾಲೆಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಪ್ರತಿ ತರಗತಿಯ ಶಿಕ್ಷಕರು ವಿವಿಧ ರೀತಿಯ ಸಸ್ಯಗಳನ್ನು ಪ್ರದರ್ಶನ ಮಾಡುವುದರ ಜೊತೆಗೆ ಆಯಾ ಗಿಡಗಳ ಬಗ್ಗೆ ಅದರ ಅನೂಕೂಲಗಳ ಬಗ್ಗೆ ಹಾಗೂ ಮಹತ್ವ ಅದರ ವೈಶಿಷ್ಟತೆ ಹಾಗೂ ಅವಶ್ಯಕತೆಗಳ ಬಗ್ಗೆ ಪರಿಚಯಿಸುವ ಕಾರ್ಯವನ್ನು ಆಯಾ ತರಗತಿಗಳ ಶಿಕ್ಷಕರು ಮಕ್ಕಳನ್ನು ತೊಡಗಿಸಿಕೊಂಡು ಮಾಡಿರುವ ಸಸ್ಯಗಳ ವಸ್ತು ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆಯ ಜೊತೆಗೆ ಸೃಜನಶೀಲತೆ ಬೆಳೆಸುತ್ತದೆ. ಇಂತಹ ಕ್ರಿಯಾ ಚಟುವಟಿಕೆಯನ್ನು ಆಯೋಜಿಸಿದ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಹರ್ಷಕಲ್ಪತರು ಶಾಲೆಯ ಪ್ರಾಂಶುಪಾಲ ಮೋಹನ್ ಕುಮಾರ್ ಮಾತನಾಡಿ, ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ನಮಗೆ ಪೋಷಕರ ಸಹಕಾರ ಅತ್ಯಗತ್ಯವಾಗಿ ದೊರೆಯುತ್ತಿರುವುದರಿಂದ ಶಾಲೆಯಲ್ಲಿ ಸಸ್ಯಗಳ ವಸ್ತು ಪ್ರದರ್ಶನ ಹಮ್ಮಿಕೊಂಡಿದ್ದು, ವಿಶೇಷವಾಗಿ ಸಸ್ಯ ಸಂಕುಲಗಳಾದ ಬೋನ್ಸಾಯ್, ಡ್ರಾಗನ್, ಅಂಜೂರ, ಎಗ್‌ಫ್ರೂಟ್, ಪಾಮ್ ಫ್ರೂಟ್, ಹಾಗೂ ಏಕದಳ ಸಸ್ಯಗಳು, ದ್ವಿದಳ ಸಸ್ಯಗಳು, ಜಲಚರ ಸಸ್ಯಗಳು, ಸ್ನೇಕ್‌ಪ್ಲಾಂಟ್, ಆಯುರ್ವೆದ ಸಸ್ಯಗಳು, ಔಷಧೀಯ ಸಸ್ಯಗಳ ವಸ್ತು ಪ್ರದರ್ಶನ ಮಾಡುವುದರ ಮೂಲಕ ಮಕ್ಕಳಿಗೆ ಓದುವುದರ ಜೊತೆಗೆ ಸಸ್ಯಸಂಕುಲಗಳ ಮಹತ್ವ ಸಾರಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲ ಲಿಂಗೇಶ್, ಕಲ್ಪತರು ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಡಾ. ಕುಮಾರ್‌ಎಂ.ಸಿ, ಶಾಲೆಯ ಸದಸ್ಯರಾದ ಶಿವಣ್ಣ, ಮಲ್ಲಿಕಾರ್ಜನ್, ಶಿಕ್ಷಕರಾದ ಲೋಹಿತ್, ಕಮಲೇಶ್, ಶಬಾನಾ, ಉಷಾ, ನಾಗರತ್ನ, ರಮ್ಯ, ವರ್ಷಿತಾ, ತಾರ, ಗೀತಾ, ಸುಮಾ, ಚಿತ್ರಾವತಿ, ಸಿದ್ದಿಕ್ ಚೇತನ್, ಮುಂತಾದವರು ಹಾಜರಿದ್ದರು.* ಹೇಳಿಕೆಗಳು1. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಯುವ ವಿಷಯಗಳನ್ನು ವಾಸ್ತವವಾಗಿ ಪರಿಚಯಿಸುವ ಕಾರ್ಯವನ್ನು ಮಾಡಲಾಗಿದೆ. ಇದರಿಂದ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡುವುದರ ಜೊತೆಗೆ ವಿಷಯದ ಮಹತ್ವ ಅರಿವಾಗುತ್ತದೆ.
- ಅನುಷಾ ಜಗದೀಶ್, ಪೋಷಕರು.2. ನಮ್ಮ ಶಾಲೆಯಲ್ಲಿ ವಿನೂತನವಾಗಿ ಸಸ್ಯ ಸಂಕುಲಗಳ ಬಗ್ಗೆ ವಸ್ತು ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಸಸ್ಯಶಾಸ್ತ್ರದ ಬಗ್ಗೆ ವಾಸ್ತವಿಕ ಮಾಹಿತಿ ಪಡೆಯಲು ಅನೂಕೂಲವಾಗಿದೆ.ಧನುಷ್, ವಿದ್ಯಾರ್ಥಿ