ದೇಶಕ್ಕೆ ಪ್ರಧಾನಿ ಮೋದಿ ಅನಿವಾರ್ಯ

| Published : Apr 20 2024, 01:06 AM IST

ಸಾರಾಂಶ

ಟೆಂಟ್‌ನಿಂದ ಭವ್ಯ ಮಂದಿರದಲ್ಲಿ ರಾಮಲಲ್ಲಾನ ವಿರಾಜಮಾನ, ಕಾಶ್ಮೀರದಲ್ಲಿ ದಶಕಗಳ ಭಯೋತ್ಪಾದನಾ ಚಟುವಟಿಕೆಗಳಿಗೆ ಅಂತ್ಯ, ಆರ್ಟಿಕಲ್ 370 ರದ್ದು, ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಜಾರಿಯಂತಹ ದಿಟ್ಟ ನಿರ್ಧಾರ ಮೋದಿಯಿಂದ ಮಾತ್ರ ಸಾಧ್ಯ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ಅಭಿವೃದ್ಧಿಯ ಜೊತೆಗೆ ದೇಶದ ಹಿತಕ್ಕಾಗಿ ಮೋದಿ ಅನಿವಾರ್ಯ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಿಸಿ ಮತಯಾಚನೆ ಬಳಿಕ ಅವರು ಮಾತನಾಡಿದರು. ಟೆಂಟ್‌ನಿಂದ ಭವ್ಯ ಮಂದಿರದಲ್ಲಿ ರಾಮಲಲ್ಲಾನ ವಿರಾಜಮಾನ, ಕಾಶ್ಮೀರದಲ್ಲಿ ದಶಕಗಳ ಭಯೋತ್ಪಾದನಾ ಚಟುವಟಿಕೆಗಳಿಗೆ ಅಂತ್ಯ, ಆರ್ಟಿಕಲ್ 370 ರದ್ದು, ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಜಾರಿಯಂತಹ ದಿಟ್ಟ ನಿರ್ಧಾರ ಮೋದಿಯಿಂದ ಮಾತ್ರ ಸಾಧ್ಯ ಎಂದರು.

ಉಗ್ರರ ನಿಗ್ರಹಕ್ಕಾಗಿ ಎರಡು ಬಾರಿ ಪಾಕ್‌ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಅತ್ಯಂತ ಯಶಸ್ವಿ ವಿದೇಶಾಂಗ ನೀತಿಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ ಮೇಲೆ ಒತ್ತಡ ಹೇರಿದರು. ದೇಶದ ಗಟ್ಟಿ ನಾಯಕತ್ವಕ್ಕಾಗಿ ಮೋದಿ ಬೆಂಬಲಿಸಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಿಗೆ ಮತ ನೀಡಿ ಎಂದರು.

ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ರೇಖಾ ಕಲಬುರ್ಗಿ, ಸುಜಾತಾ ಶಿಂಧೆ, ಶರಣಪ್ಪ ಗುಳೇದ, ಸತೀಶ ಗಾಯಕವಾಡ, ಸಂಗನಗೌಡ ಗೌಡರ, ರಮೇಶ ಹೊನ್ನಳ್ಳಿ, ಪ್ರವೀಣ ಕೋಲೆ, ಸಿದ್ದು ಸರೂರ, ಚಂದ್ರು ಸರೂರ, ಮಹೇಶ ಅಂಗಡಿ, ರಾಜು ಗಾಣಿಗೇರ, ಗಣೇಶ ರಾಠೋಡ, ಯಂಕಣ್ಣ ಹಲಗಲಿ, ವೀರಣ್ಣ ಕಲ್ಲೂರ, ಕಪ್ಪಯ್ಯ ಮುತ್ತಿನಮಠ, ಬಸವರಾಜ ಮಾಗಿ, ಪಾಲಾಕ್ಷಿ ಕಟ್ಟಿಮಠ, ಸುರೇಶ ಹಿರೇಮಠ, ಬಸವರಾಜ ಹುನಗುಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನಗರದ ಬಾಂಬೆ ಚಾಳ ಕೆಂಪ ರಸ್ತೆಯಿಂದ ಪ್ರಾರಂಭವಾದ ಪಾದಯಾತ್ರೆ, ನಗರಸಭೆ ಸದಸ್ಯೆ ಜೋತಿ ಭಜಂತ್ರಿಯವರ 18ನೇ ವಾರ್ಡ್‌ಗಳಲ್ಲಿ ಸಂಚರಿಸಿತು. ಪಾದಯಾತ್ರೆ ಮೂಲಕ ಮನೆ ಮನೆಗೆ ತೇರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು.