ಗೃಹ ಸಚಿವ ಪರಮೇಶ್ವರ ಹೇಳಿಕೆಗೆ ಖಂಡನೆ

| Published : Apr 23 2024, 12:46 AM IST

ಸಾರಾಂಶ

ಇಂತಹ ಪ್ರಕರಣ ರಾಜ್ಯದಲ್ಲಿ ಮರುಕಳಿಸುತ್ತಿವೆ. ಸರ್ಕಾರವು ಶಾಲಾ ಕಾಲೇಜಿನಲ್ಲಿ ಭದ್ರತೆ ಕಲ್ಪಿಸಬೇಕು. ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆಯನ್ನು ಗೃಹ ಮಂತ್ರಿ ಪರಮೇಶ್ವರ ಆಕಸ್ಮಿಕ ಕೊಲೆ ಎಂದು ಹೇಳಿರುವುದು ಸರಿಯಲ್ಲ. ಇದು ಪೂರ್ವನಿಯೋಜಿತ ಕೊಲೆ. ಕೂಡಲೇ ಆರೋಪಿ ಫಯಾಜ್‌ನನ್ನು ವಿಚಾರಣೆ ನಡೆಸದೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠ ಒತ್ತಾಯಿಸಿದರು.

ನೇಹಾ ಹಿರೇಮಠ ಹತ್ಯೆ ಖಂಡಿಸಿ ಹುನಗುಂದ - ಇಲಕಲ್ಲ ತಾಲೂಕಿನ ಪ್ರಗತಿಪರ ಸಂಘಟನೆಗಳು, ನವ ಕರ್ನಾಟಕ ರಾಜ್ಯರೈತ ಸಂಘ, ತಾಲೂಕು ಬೇಡ ಜಂಗಮ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಪಟ್ಟಣದ ವಿಜಯ ಮಹಾಂತೇಶ ವೃತ್ತದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ ನಿಂಗಪ್ಪ ಬಿರಾದರ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹುಬ್ಬಳ್ಳಿ ಘಟನೆಯಿಂದ ಹೆಣ್ಣು ಮಕ್ಕಳಿಗೆ ಕಾಲೇಜಿಗೆ ಕಳುಹಿಸಲು ಭಯದ ವಾತವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೋರಾಟಗಾರ ನಾಗರಾಜ ಹೊಂಗಲ್ ಮಾತನಾಡಿ, ಇಂತಹ ಪ್ರಕರಣ ರಾಜ್ಯದಲ್ಲಿ ಮರುಕಳಿಸುತ್ತಿವೆ. ಸರ್ಕಾರವು ಶಾಲಾ ಕಾಲೇಜಿನಲ್ಲಿ ಭದ್ರತೆ ಕಲ್ಪಿಸಬೇಕು. ಕೊಲೆ ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಗ್ರಹಿಸಿದರು.

ಕರವೇ ಮುಖಂಡ ರೋಹಿತ ಬಾರಕೇರ, ಮಹಾಂತೇಶ ತೆಗ್ಗಿನಮಠ, ಶರಣು ಗಾಣಿಗೇರ, ವಿಶ್ವನಾಥ ಹಿರೇಮಠ, ಕೃಷ್ಣಾ ಜಾಳಿಹಾಳ, ಮಹಾಂತೇಶ ಮಠ, ಮುತ್ತಣ್ಣ ಕಲ್ಮಡಿ, ಮಹಾಂತೇಶ ಚಿತ್ತವಾಡಗಿ, ಮುತ್ತಣ್ಣ ಅವಾಲ್ದಾರ, ಅಕ್ಷಯ್ಯ ಕಂಬಾಳಿಮಠ, ಮಹಾಂತೇಶ ಕಂಬಾಳಿಮಠ, ಮಲ್ಲಣ್ಣ ಕಮರಿ, ಅಕ್ಷಯ ಕಂಬಾಳಿಮಠ, ಹುಸೇನ ಸಂದಿಮನಿ, ಅಬೂಬಕರ ಸಂಗಮಕರ, ಚನ್ನಬಸಯ್ಯ ಹಿರುಳ್ಳಿಮಠ, ಹುಚ್ಚಯ್ಯ ವಸ್ತ್ರದ, ಬಸವರಾಜ ಕಂಬಾಳಿಮಠ, ರಾಜಶೇಖರ ಕೂಡಲಗಿಮಠ, ಶರಣಯ್ಯ ಮಾಲಿ, ವಿರೇಶ ತಾವರಗೇರಿ, ಮಂಜುನಾಥ ಮುಂಡೇವಾಡಿ, ಹನಮಂತ ಸೇರಿದಂತೆ ಇತರರು ಇದ್ದರು.