ಸಾರಾಂಶ
ರಾಗಿ ಮಾಲ್ಟ್ ವಿತರಣೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಬಹು ಮಹತ್ವಕಾಂಕ್ಷಿ ಯೋಜನೆಯಾಗಿದೆ.
ಕನ್ನಡಪ್ರಭ ವಾರ್ತೆ ಬಾದಾಮಿ
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು ಸೇರಿದಂತೆ ಅನೇಕ ಉಚಿತ ಯೋಜನೆಗಳು ನೀಡಲಾಗುತ್ತದೆ ಎಂದು ಪ್ರೌಢಶಾಲೆಯ ಸಹಶಿಕ್ಷಕ ವೈ.ವೈ.ಹಾವರಗಿ ಹೇಳಿದರು.ತಾಲೂಕಿನ ಬೆಳವಲಕೊಪ್ಪದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ 1ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ರಾಗಿ ಮಾಲ್ಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಗಿ ಮಾಲ್ಟ್ ವಿತರಣೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಬಹು ಮಹತ್ವಕಾಂಕ್ಷಿ ಯೋಜನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಸ್. ಲಿಂಗರಡ್ಡಿ, ಉಪಾಧ್ಯಕ ಮಹಾಂತೇಶ ಹೊಸಮಠ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ರೇಣುಕಾ ಕಾಮಣ್ಣ ಪೂಜಾರಿ, ಎಸ್.ಡಿ.ಎಂ.ಸಿ. ಸದಸ್ಯ ವಾಸು ಭಾವಿ ಹಾಗೂ ದ್ಯಾಮಣ್ಣ ಅನವಾಲ ಹಾಗೂ ಗ್ರಾ.ಪಂ.ಸದಸ್ಯೆ ಜಯಶ್ರೀ ಸಂಕದಾಳ ಮತ್ತು ಸದಸ್ಯ ಬಸವರಾಜ ಅಬ್ಬಿಗೇರಿ ಸೇರಿದಂತೆ ಅನೇಕರು ಇದ್ದರು. ರಮೇಶ ಕೊಂತಿಕಲ್ ಸ್ವಾಗತಿಸಿದರು. ಬಿ.ಟಿ. ಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಆರ್.ವೈ ದೇವರಡ್ಡಿ ವಂದಿಸಿದರು.