ಸುಂಟಿಕೊಪ್ಪದ ‘ರಾಜ್‌ಕುಮಾರ್‌’ ಇನ್ನಿಲ್ಲ

| Published : Feb 05 2024, 01:45 AM IST / Updated: Feb 05 2024, 03:58 PM IST

ಸಾರಾಂಶ

ಸುಂಟಿಕೊಪ್ಪ ಚಾಮುಂಡೇಶ್ವರಿ ಬಡಾವಣೆ ನಿವಾಸಿ, ರಾಜ್ ಕುಮಾರ್ ಎಂದೇ ಹೆಸರುವಾಸಿಯಾದ ಎಂ.ಎಸ್. ರವಿ (47) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು.

ಸುಂಟಿಕೊಪ್ಪ: ಇಲ್ಲಿನ ಸುಂಟಿಕೊಪ್ಪ ಚಾಮುಂಡೇಶ್ವರಿ ಬಡಾವಣೆ ನಿವಾಸಿ, ರಾಜ್ ಕುಮಾರ್ ಎಂದೇ ಹೆಸರುವಾಸಿಯಾದ ಎಂ.ಎಸ್. ರವಿ (47) ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾದರು. 

ಅಪ್ಪಟ ಕನ್ನಡಾಭಿಮಾನಿಯಗಿದ್ದ ರವಿ, ಸುಂಟಿಕೊಪ್ಪದಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ವೇಷಭೂಷಣ ಧರಿಸಿ ಕನ್ನಡ ಬಾವುಟ ಹಿಡಿದು ಕನ್ನಡ ನಾಡು, ನುಡಿ ಕುರಿತಾದ ಗೀತೆಗಳಿಗೆ ನರ್ತಿಸುವ ಮೂಲಕ ಗಮನ ಸೆಳೆಯುತ್ತಿದ್ದರು. 

ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸೆಬಾಸ್ಟೀನ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು, ಜಿಲ್ಲಾಡಳಿತ, ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.ಮರ ನಾಟಗಳ ಅಕ್ರಮ ದಾಸ್ತಾನು: ಅರಣ್ಯ ಇಲಾಖೆ ದಾಳಿ

ಶನಿವಾರಸಂತೆ: ಇಲ್ಲಿಗೆ ಸಮೀಪದ ಬಿದರೂರು ಗ್ರಾಮದ ಎಚ್.ಪಿ. ಮಲ್ಲೇಶ್ ಅವರ ಮೂದರವಳ್ಳಿಯ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮತ್ತು ಹೊನ್ನೆ ಮರವನ್ನು ಕಡಿದು ನಾಟಗಳನ್ನಾಗಿ ಪರಿವರ್ತಿಸಿ ದಾಸ್ತಾನಿರಿಸಿದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ದಾಳಿ ಮಾಡಿ ನಾಟಗಳನ್ನು ವಶಪಡಿಸಿಕೊಂಡಿದೆ.

ಶನಿವಾರಸಂತೆಯ ವಲಯ ಅರಣ್ಯಾಧಿಕಾರಿ ಗಾನಶ್ರೀ, ದಾಸ್ತಾನಿ ಇರಿಸಿದ ಜಾಗಕ್ಕೆ ತೆರಳಿ ಬೀಟೆ ಮತ್ತು ಹೊನ್ನೆ ಮರದ ನಾಟಗಳನ್ನು ವಶಪಡಿಸಿಕೊಂಡರು. ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. 

ರೈತರು ಯಾವುದೇ ಉದ್ದೇಶಕ್ಕಾಗಿ ವಿನಾಯಿತಿ ಇರುವ ಮರಗಳನ್ನು ಹೊರತುಪಡಿಸಿ ಬಾಕಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿರುತ್ತದೆ. 

ಅನುಮತಿ ಇಲ್ಲದೆ ಮರ ತೆರವುಗೊಳಿಸಲು ಮುಂದಾದವರ ಮೇಲೆ ಕಾನೂನು ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಿಸಲಾಗುವುದು ಎಂದು ಶನಿವಾರಸಂತೆಯ ವಲಯ ಅರಣ್ಯಾಧಿಕಾರಿ ಗಾನಶ್ರೀ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಪ್ರಶಾಂತ್, ಗಸ್ತುವನಪಾಲಕ ಜಯಕುಮಾರ್ ಭಾಗವಹಿಸಿದ್ದರು.