ಸಾರಾಂಶ
ಭಾರತ ಪ್ರಜಾಸತ್ತಾತ್ಮಕ ಮತ್ತು ವಿವಿಧತೆಯಲ್ಲಿ ಏಕತೆ ಸಾಧಿಸುವಲ್ಲಿ ಸಂವಿಧಾನ ಅತ್ಯಂತ ಅವಶ್ಯ.
ಗೋಕಾಕ: ಡಾ. ಬಿ.ಆರ್.ಅಂಬೇಡ್ಕರ ಅವರು ಹಾಗೂ ಕರಡು ಸಮಿತಿ ನೀಡಿದ ಭಾರತದ ಸಂವಿಧಾನ ತತ್ವಗಳು ಜಗತ್ತಿಗೆ ಮಾದರಿಯಾಗಿದ್ದು, ಭಾರತದ ಪ್ರಗತಿಯಲ್ಲಿ ತುಂಬಾ ಮಹತ್ವಪೂರ್ಣ ಪಾತ್ರ ವಹಿಸಿವೆ ಎಂದು ವಿಶ್ವ ಹಿಂದು ಪರಿಷತ್ ಗೋಕಾಕ ನಗರ ಘಟಕದ ಅಧ್ಯಕ್ಷ ಆನಂದ ಪಾಟೀಲ ಹೇಳಿದರು.ಅವರು, ಗಣರಾಜ್ಯೋತ್ಸವದ ಅಂಗವಾಗಿ ನಗರದ ಶಂಕರಲಿಂಗ ಆದರ್ಶ ಶಾಲೆಯಲ್ಲಿ ಜರುಗಿದ ಆರಕ್ಷಕರಿಗೊಂದು ಗೀತ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಭಾರತ ಪ್ರಜಾಸತ್ತಾತ್ಮಕ ಮತ್ತು ವಿವಿಧತೆಯಲ್ಲಿ ಏಕತೆ ಸಾಧಿಸುವಲ್ಲಿ ಸಂವಿಧಾನ ಅತ್ಯಂತ ಅವಶ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುಮಧುರ ಸಂಗೀತ ಬಳಗದ ಸಂಚಾಲಕ ರಾಮಚಂದ್ರ ಕಾಕಡೆ, ಭಾರತವು ವಿಶ್ವಗುರುವಾಗುವಲ್ಲಿ ಇಲ್ಲಿಯ ಏಕತೆ, ಸಹಿಷ್ಣುತೆ ಜೊತೆಗೆ ವೈಜ್ಞಾನಿಕ ಸಾಧನೆಗಳು ಪೂರಕವಾಗಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಮಹಾಂತೇಶ ತಾಂವಶಿ, ರಜನಿ ಜೀರಗಾಳ, ಭಾರತಿ ಮದಭಾಂವಿ, ನ್ಯಾಯವಾದಿ ಈಶ್ವರ ಶೀಗಿಹಳ್ಳಿ ಸೇರಿದಂತೆ ಹಲವರು ಇದ್ದರು. ಮಧುರ ಸಂಗೀತ ಗೆಳೆಯರ ಬಳಗದ ಕಲಾವಿದರು ನಡೆಸಿಕೊಟ್ಟ ದೇಶಭಕ್ತಿಗೀತೆಗಳು ಜನಮನ ರಂಜಿಸಿದರು.