ಸಂಯುಕ್ತಾ ಪಾಟೀಲ ಗೆಲವು ಖಚಿತ

| Published : Apr 22 2024, 02:19 AM IST

ಸಾರಾಂಶ

ಸಿ.ಎಂ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಮಹಿಳೆಯರಿಗೆ ₹2 ಸಾವೀರ ಹಣ, ಉಚಿತ ವಿದ್ಯುತ, ಉಚಿತ ಬಸ್ ಪ್ರಯಾಣ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ದೇಶದಲ್ಲಿ ಬಡವರ ಪರ ಇರುವ ಏಕೈಕ ಪಕ್ಷ ಕಾಂಗ್ರೆಸ್. ಆಹಾರ ಭದ್ರತೆ ಕಾಯ್ದೆ ಮೂಲಕ ದೇಶ ಜನರನ್ನು ಹಸಿವು ಮುಕ್ತರನ್ನಾಗಿಸಿದ್ದು ಕಾಂಗ್ರೆಸ್‌ ಸರ್ಕಾರ ಎಂದು ಕಾಂಗ್ರೆಸ್ ನಾಯಕಿ ಕವಿತಾ ಸಿದ್ದು ಕೊಣ್ಣೂರ ಹೇಳಿದರು.

ಭಾನುವಾರ ನಗರದ 21ನೇ ವಾರ್ಡಿನಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ರಾಜ್ಯ ಸರ್ಕಾರ ಹಲವು ಗ್ಯಾರಂಟಿ ಜಾರಿಗೆ ತಂದು ಜನರಲ್ಲಿ ಬದುಕಿನ ವಿಶ್ವಾಸ ತುಂಬಿದೆ. ಇಡೀ ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ. ರಾಜ್ಯದಲ್ಲಿ ಬಾಗಲಕೋಟ ಸೇರಿ ಕನಿಷ್ಠ 20 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾದಿಸಲಿದೆ. ನಮ್ಮ ಬಾಗಲಕೋಟ ಕ್ಷೇತ್ರದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯ ಯಲ್ಲನಗೌಡ ಪಾಟೀಲ ಮಾತನಾಡಿ ಸಿ.ಎಂ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ. ಮಹಿಳೆಯರಿಗೆ ₹2 ಸಾವೀರ ಹಣ, ಉಚಿತ ವಿದ್ಯುತ, ಉಚಿತ ಬಸ್ ಪ್ರಯಾಣ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲ ಜನ ನೆಮ್ಮದಿಯಿಂದ ಇರಬೇಕಾದರೆ ಕಾಂಗ್ರೆಸ್‌ ಅಭ್ಯರ್ಥಿ ಸಯುಂಕ್ತಾ ಪಾಟೀಲರಿಗೆ ತಮ್ಮ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದರು.

ಈ ವೇಳೆ ಪುರಸಭೆ ಸದಸ್ಯ ಬಲವಂತಗೌಡ ಪಾಟೀಲ್ ಮತ್ತು ಗಣ್ಯರಾದ ಸುನಿಲ್ ಗೌಡ ಪಾಟೀಲ, ಬಸವರಾಜ ರಾಯರ, ವಿಠ್ಠಲ ಕುಳಲಿ, ಲಕ್ಷ್ಮಣ ಮಾಂಗ, ಅರ್ಜುನ ದೊಡ್ಡಮನಿ, ಮಲ್ಲಪ್ಪ ಬಾವಿಕಟ್ಟಿ, ಮಲ್ಲು ಕೊಲ್ಲೋಳಿ, ಮಹಾಲಿಂಗ ಮಾಳಿ, ಶ್ರೀಶೈಲ ವಜ್ಜರಮಟ್ಟಿ, ವಿಠ್ಠಲ ಹಲಗಣಿ, ಆನಂದಯ್ಯ ಮಠಪತಿ, ಕವಿತಾ, ಮಾಲಾ ಮಾಳಿ, ಭಾರತಿ ಬಾಡಗಿ, ವಿಜಯಲಕ್ಷ್ಮೀ ಮಠಪತಿ, ಸಾವಿತ್ರಿ ಮಾಳಿ, ಪೂರ್ಣಿಮಾ ಬಾಡಗಿ, ಪ್ರಭಾವತಿ ಮಾಳಿ, ಸವಿತಾ ರಾಯರ, ಬಿಸ್ಮಿಲ್ಲಾ ಪಕಾಲಿ, ಮಹೇಶ ತಂಬದಮಠ, ವಿದ್ಯಾ ರಾಮಣ್ಣವರ, ಶೋಭಾ ಕೋಕಟನೂರ ಸೇರಿ ಅನೇಕ ಮುಖಂಡರು ಹಾಗೂ ಮಹಿಳೆಯರು ಇದ್ದರು.