ಸಾರಾಂಶ
ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶ್ರೀ ಕೃಷ್ಣ ಲೀಲಾ ವಿಭೂತಿ ಎಂಬ ಗೇಯ ನೃತ್ಯ ರೂಪಕ (ಪದ್ಮಭೂಷಣ ಶ್ರೀ ಡಿ. ವಿ. ಗುಂಡಪ್ಪ ಅವರ ಶ್ರೀಮದ್ ಭಾಗವತ ಕಥಾಸಾರ ಆಧಾರಿತ) ಪ್ರಸ್ತುತಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ, ಮೈಸೂರಿನ ಚಂಪಕ ಅಕಾಡೆಮಿಯ ವಿದುಷಿ ಡಾ। ನಾಗಲಕ್ಷ್ಮಿ ನಾಗರಾಜನ್ ಹಾಗೂ ಶಿಷ್ಯ ವೃಂದದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಲೀಲಾ ವಿಭೂತಿ ಎಂಬ ಗೇಯ ನೃತ್ಯ ರೂಪಕ (ಪದ್ಮಭೂಷಣ ಶ್ರೀ ಡಿ. ವಿ. ಗುಂಡಪ್ಪ ಅವರ ಶ್ರೀಮದ್ ಭಾಗವತ ಕಥಾಸಾರ ಆಧಾರಿತ) ಪ್ರಸ್ತುತಗೊಂಡಿತು.
ಸಂಗೀತ ಸಂಯೋಜನೆ ಮತ್ತು ಗಾಯನದಲ್ಲಿ ವಿದುಷಿ ಚೇತನ ನಾಗರಾಜ್, ಕೊಳಲಿನಲ್ಲಿ ವಿದ್ವಾನ್ ಗಣೇಶ್ ಕೆ. ಎಸ್., ಮೃದಂಗದಲ್ಲಿ ವಿದ್ವಾನ್ ಕಿರಣ್ ಕುಮಾರ್ ಎಮ್. ಜೆ., ಗಮಕ ಮತ್ತು ಸಂಭಾಷಣೆಯಲ್ಲಿ ವಿದುಷಿ ಪಾವನ ಅವರು ಸಹಕರಿಸಿದರು.ಭಾನುವಾರ ಸಂಜೆ ತುಂಬಿದ ಸಭಾಂಗಣದಲ್ಲಿ ಅದ್ಭುತವಾಗಿ ಮೂಡಿ ಬಂದ ಈ ಪ್ರಸ್ತುತಿಯು ಭರತನಾಟ್ಯ ರಸಿಕರಿಗೆ ರಸದೌತಣ ನೀಡಿತು.