ಲೋಕೋಪಯೋಗಿ ಇಲಾಖೆಯಿಂದ ಶ್ರೀಕಂಠಯ್ಯಗೆ ಅಪಮಾನ

| Published : Nov 18 2025, 12:15 AM IST

ಸಾರಾಂಶ

ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಮಂತ್ರಿಗಳಾಗಿದ್ದ ಎಚ್. ಸಿ. ಶ್ರೀಕಂಠಯ್ಯನವರು ತಾಲೂಕಿಗೆ ಪ್ರಥಮವಾಗಿ ನ್ಯಾಯಾಲಯದ ಸಂರ್ಕೀಣವನ್ನು ಅಂದಿನ ಸರ್ಕಾರದಲ್ಲಿ ಮಂಜೂರು ಮಾಡಿಸಿ ನಿರ್ಮಾಣ ಮಾಡಿದ್ದರು. ಇದಕ್ಕೂ ಮೊದಲು ಜನರು ಹೊಳೆನರಸೀಪುರದ ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿ ಇತ್ತು. ಆದರೆ ಇದನ್ನು ಅರಿತಿದ್ದ ಶ್ರೀಕಂಠಯ್ಯನವರು ಚನ್ನರಾಯಪಟ್ಟಣಕ್ಕೆ ಹೊಸದಾಗಿ ನ್ಯಾಯಾಲಯ ಸಂರ್ಕೀಣವನ್ನು ನಿರ್ಮಾಣ ಮಾಡಿಸಿದ್ದರು. ಆದರೆ ಇತ್ತೀಚೆಗೆ ತಾಲೂಕಿಗೆ ಹೊಸ ಸಂರ್ಕೀಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಳೇ ಕಲ್ಲನ್ನು ರಸ್ತೆಯ ಪಕ್ಕ ಎಸೆದ ಲೋಕೋಪಯೋಗಿ ಇಲಾಖೆಯವರು ಶ್ರೀಕಂಠಯ್ಯನವರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಅಭಿವೃದ್ಧಿಗೆ ಶ್ರೀಕಂಠಯ್ಯನವರ ಕೊಡುಗೆ ಅಪಾರವಾದದ್ದು. ಆದರೆ ಲೋಕೋಪಯೋಗಿ ಇಲಾಖೆಯವರು ರಾಜಕೀಯ ಮಾಡಿ ಅವರು ನ್ಯಾಯಾಲಯಕ್ಕೆ ಶಂಕುಸ್ಥಾಪನೆ ಮಾಡಿರುವ ಕಲ್ಲನ್ನು ತಿಪ್ಪೆಗೆ ಎಸೆದು ತಾಲೂಕಿನ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಹಿರಿಯ ವಕೀಲ ಹಾಗೂ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ಗೌಡ ತಿಳಿಸಿದರು.

ಅವರು ಪಟ್ಟಣದ ನ್ಯಾಯಾಲಯ ಸಂಕೀರ್ಣದ ಎದುರು ಸುದ್ದಿಗಾರರೊಂದಿಗೆ ಮಾತನಾಡಿ, ೧೯೭೭ರಂದು ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಮಂತ್ರಿಗಳಾಗಿದ್ದ ಎಚ್. ಸಿ. ಶ್ರೀಕಂಠಯ್ಯನವರು ತಾಲೂಕಿಗೆ ಪ್ರಥಮವಾಗಿ ನ್ಯಾಯಾಲಯದ ಸಂರ್ಕೀಣವನ್ನು ಅಂದಿನ ಸರ್ಕಾರದಲ್ಲಿ ಮಂಜೂರು ಮಾಡಿಸಿ ನಿರ್ಮಾಣ ಮಾಡಿದ್ದರು. ಇದಕ್ಕೂ ಮೊದಲು ಜನರು ಹೊಳೆನರಸೀಪುರದ ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿ ಇತ್ತು. ಆದರೆ ಇದನ್ನು ಅರಿತಿದ್ದ ಶ್ರೀಕಂಠಯ್ಯನವರು ಚನ್ನರಾಯಪಟ್ಟಣಕ್ಕೆ ಹೊಸದಾಗಿ ನ್ಯಾಯಾಲಯ ಸಂರ್ಕೀಣವನ್ನು ನಿರ್ಮಾಣ ಮಾಡಿಸಿದ್ದರು. ಆದರೆ ಇತ್ತೀಚೆಗೆ ತಾಲೂಕಿಗೆ ಹೊಸ ಸಂರ್ಕೀಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಳೇ ಕಲ್ಲನ್ನು ರಸ್ತೆಯ ಪಕ್ಕ ಎಸೆದ ಲೋಕೋಪಯೋಗಿ ಇಲಾಖೆಯವರು ಶ್ರೀಕಂಠಯ್ಯನವರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ನ ಒಬ್ಬ ಅಜಾತಶತ್ರುವಿಗೆ ಇಂತಹ ಸ್ಥಿತಿ ತಂದ ಕೆಲ ಕುತಂತ್ರ ರಾಜಕಾರಣಿಗಳಿಗೆ ಹಾಗೂ ಇಲಾಖೆಯವರಿಗೆ ದಿಕ್ಕಾರವಿದೆ. ಕೂಡಲೇ ಕಲ್ಲನ್ನು ಗೌರವಯುತವಾಗಿ ಶೇಖರಿಸಿ ಇಡದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದರು.