“ಸ್ವದೇಶಿ 4ಜಿ” ನೆಟ್‌ವರ್ಕ್‌ ಉದ್ಘಾಟನೆ

| Published : Sep 28 2025, 02:00 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ರಾಜ್ಯದಲ್ಲಿ ಬಿಎಸ್ಎನ್‌ಎಲ್ ವತಿಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ “ಸ್ವದೇಶಿ 4ಜಿ” ನೆಟ್‌ವರ್ಕ್‌ ಅನ್ನು ಉದ್ಘಾಟಿಸಿದ್ದು, ಇದು ಟೆಲಿಕಾಂ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ಭಾರತದ ನಡೆಯನ್ನು ಎತ್ತಿ ತೋರಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ರಾಜ್ಯದಲ್ಲಿ ಬಿಎಸ್ಎನ್‌ಎಲ್ ವತಿಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ “ಸ್ವದೇಶಿ 4ಜಿ” ನೆಟ್‌ವರ್ಕ್‌ ಅನ್ನು ಉದ್ಘಾಟಿಸಿದ್ದು, ಇದು ಟೆಲಿಕಾಂ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯತ್ತ ಭಾರತದ ನಡೆಯನ್ನು ಎತ್ತಿ ತೋರಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಾದ್ಯಂತ 97,500 ಮೊಬೈಲ್ ಟವರ್‌ಗಳನ್ನು ಉಡಾವಣೆಯೊಂದಿಗೆ ನಿಯೋಜಿಸಲಾಗಿದ್ದು, ಅವುಗಳಲ್ಲಿ 92,600 4ಜಿ ಸೈಟ್‌ಗಳಾಗಿ ಸುಮಾರು 37,000 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರೀತಿ ನಿಯೋಜಿಸಲಾದ ನೆಟ್ವರ್ಕ್ ಕ್ಲೌಡ್-ಆಧಾರಿತ ಮತ್ತು ಭವಿಷ್ಯಕ್ಕೆ ಸಿದ್ಧವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, 5ಜಿ ಗೆ ಸರಾಗವಾಗಿ ಅಪ್ಗ್ರೇಡ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ದೇಶದಾದ್ಯಂತ ಸುಮಾರು 26,700 ಕ್ಕೂ ಹೆಚ್ಚು ಸಂಪರ್ಕವಿಲ್ಲದ ಹಳ್ಳಿಗಳಿಗೆ ಈಗ ಟೆಲಿಕಾಂ ಪ್ರವೇಶವನ್ನು ಪಡೆಯುತ್ತಿದ್ದು, ಇದರಿಂದ ದೇಶದ ಸುಮಾರು 20 ಲಕ್ಷಕ್ಕೂ ಹೆಚ್ಚು (2 ಮಿಲಿಯನ್) ಹೊಸ ಚಂದಾದಾರರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ಈ ಟವರ್‌ಗಳು ಸೌರಶಕ್ತಿ ಚಾಲಿತವಾಗಿದ್ದು, ಅವುಗಳನ್ನು ಭಾರತದ ಅತಿದೊಡ್ಡ ಹಸಿರು ಟೆಲಿಕಾಂ ಸೈಟ್‌ಗಳ ಸಮೂಹವನ್ನಾಗಿ ಮಾಡಿದೆ ಮತ್ತು ಈ ಉಪಕ್ರಮವು “ಡಿಜಿಟಲ್ ಭಾರತ್ ನಿಧಿ” ಮೂಲಕ ಹಳ್ಳಿಗಳಲ್ಲಿ ಶೇ.100 ರಷ್ಟು 4ಜಿ ಸ್ಯಾಚುರೇಶನ್ ಸಾಧಿಸುವ ಮಿಷನ್-ಮೋಡ್ ಪುಶ್ನ ಭಾಗವಾಗಿದೆ ಎಂದು ಹೇಳಿದ್ದಾರೆ.ಪ್ರಧಾನ ಮಂತ್ರಿಗಳು ದೇಶದಾದ್ಯಂತ ಏಕಕಾಲಕ್ಕೆ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿದ್ದು, ಅದರಲ್ಲಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೊಳಪಡುವ ಈ ಕೆಳಕಂಡ ತಾಲೂಕುಗಳಲ್ಲಿ ಸುಮಾರು 90 ಸಂಖ್ಯೆಯ 4ಜಿ ಸ್ಯಾಚುರೇಶನ್ ಟವರ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಾಲೂಕು - 4ಜಿ ಸ್ಯಾಚುರೇಶನ್

ಟವರ್‌ಗಳ ಸಂಖ್ಯೆಹೊಸನಗರ-14ಸಾಗರ-26ತೀರ್ಥಹಳ್ಳಿ-16ಶಿವಮೊಗ್ಗ-05ಶಿಕಾರಿಪುರ-04ಸೊರಬ-01ಭದ್ರಾವತಿ-01ಬೈಂದೂರು -23ಒಟ್ಟು-90