ತೆರಿಗೆ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Oct 17 2023, 12:45 AM IST

ತೆರಿಗೆ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಜನ ಕಟ್ಟಿದ ತೆರಿಗೆ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸಲು ಹೊರಟಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಗದಗ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಗದಗ:ರಾಜ್ಯದ ಜನ ಕಟ್ಟಿದ ತೆರಿಗೆ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸಲು ಹೊರಟಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ವಿಪ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಆಡಳಿತಕ್ಕೆ ಬಂದಿರುವ ಸರ್ಕಾರ ಪೂರ್ಣ ಭ್ರಷ್ಟಾರದಿಂದ ಮುಳುಗಿದೆ ಹಾಗೂ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣೆ ಮಾಡಲು ನಮ್ಮ ರಾಜ್ಯದ ಜನ ಕಟ್ಟಿದ ತೆರಿಗೆ ಹಣವನ್ನು ಬಳಸಲು ಹೊರಟಿರುವದು ವಿಷಾದನೀಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಮಾತನಾಡಿ, ಕಾಂಗ್ರೆಸ್ ಪಕ್ಷ ಭ್ರಷ್ಟತನದಿಂದ ಮುಳಗಿದ್ದು, ಆಡಳಿತ ಮಾಡಲು ಯೋಗ್ಯವಲ್ಲದ ಪಕ್ಷವಾಗಿದೆ. ಬಿಟ್ಟಿ ಭಾಗ್ಯದಿಂದ ನಮ್ಮ ರಾಜ್ಯದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಖಜಾಂಚಿ ನಾಗರಾಜ ಕುಲಕರ್ಣಿ ಮಾತನಾಡಿ, ಬಿಟ್ಟಿ ಭಾಗ್ಯ ತೋರಿಸಿ ರಾಜ್ಯದ ಜನರ ಹಣವನ್ನು ಬೇರೆ ರೀತಿಯಿಂದ ವಸೂಲಿ ಮಾಡಿ ಬೇರೆ ರಾಜ್ಯಗಳ ತಮ್ಮ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣೆ ಮಾಡಲು ಹೊರಟಿರುವುದು ಖೇದಕರ ಸಂಗತಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ಗಣಾಚಾರಿ, ಸಿದ್ರಾಮಪ್ಪ ಮೊರಬದ, ಅನಿಲ ಅಬ್ಬಿಗೇರಿ, ಜಗನ್ನಾಥಸಾ ಭಾಂಡಗೆ,ಶ್ರೀಪತಿ ಉಡುಪಿ, ಎಂ.ಎಂ. ಹಿರೇಮಠ, ಡಾ. ಶೇಖರ ಸಜ್ಜನರ, ರಾಘವೇಂದ್ರ ಯಳವತ್ತಿ, ಶಿವು ಹಿರೇಮನಿಪಾಟೀಲ, ಪ್ರಕಾಶ ಅಂಗಡಿ, ಮಾಧುಸಾ ಮೇರವಾಡೆ, ಸುಧೀರ ಕಾಟಿಗರ, ಅಶೋಕ ಕುಡತಿನಿ, ಬೂದಪ್ಪ ಹಳ್ಳಿ, ಈರ್ಷಾದ ಮಾನ್ವಿ, ಚಿನ್ನಪ್ಪ ನೆಗಳೂರ, ಸುರೇಶ ಮರಳಪ್ಪನವರ, ರಮೇಶ ಸಜ್ಜಗಾರ, ಮಂಜುನಾಥ ಶಾತಗೇರಿ, ಮಂಜು ಮುಳಗುಂದ, ಸುರೇಶ ಚಿತ್ತರಗಿ,ನಗರಸಭೆ ಅಧ್ಯಕ್ಷೆ ಉಷಾ ದಾಸರ, ವಿದ್ಯಾವತಿ ಗಡಗಿ, ನಿರ್ಮಲಾ ಕೊಳ್ಳಿ, ರಾಚಯ್ಯ ಹೊಸಮಠ, ಕೆ.ಪಿ. ಕೋಟಿಗೌಡ್ರ, ಅಪ್ಪಣ್ಣ ಟೆಂಗಿನಕಾಯಿ, ಪಂಚಾಕ್ಷರಿ ಅಂಗಡಿ, ಸುರೇಶ ಹೆಬಸೂರ, ಮಹಾದೇವಪ್ಪ ಚಿಂಚಲಿ, ವಸಂತ ಹಬೀಬ, ದೇವೆಂದ್ರಪ್ಪ ಹೂಗಾರ, ವಿನೋದ ಹಂಸನೂರ ಹಾಗೂ ಪ್ರಮುಖರು ಇದ್ದರು.