ಹಿಂದಿ ಹೇರಿಕೆಯಿಂದ ದೇಶದ ಏಕತೆಗೆ ಧಕ್ಕೆ

| Published : Sep 15 2024, 01:53 AM IST

ಸಾರಾಂಶ

ದೇಶದಲ್ಲಿ 22 ಆಡಾಳಿತಾತ್ಮಕ ಭಾಷೆಗಳಿವೆ, ಎಲ್ಲಾ ಭಾಷೆಗಳನ್ನು ತುಳಿತ್ತಕ್ಕೆ ಒಳಪಡಿಸಲು, ಕೇಂದ್ರ ಸರ್ಕಾರ ಹಿಂದಿ ಸಪ್ತಾಹ, ಹಿಂದಿ ದಿವಸ್ ಅನ್ನುವ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹಿಂದಿ ದಿವಸ್ ಹೇರಿಕೆ ದಬ್ಬಾಳಿಕೆ ಮಾಡಿದಂತೆ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದು ಕೂಡಲೇ ಹಿಂದಿ ದಿವಸ್ ಆಚರಣೆಯನ್ನು ಕೇಂದ್ರ ಸರ್ಕಾರ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ. ಹರೀಶ್ ಅವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಶನಿವಾರ ಬೈಕ್ ರ್‍ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಹರೀಶ್‌, ದೇಶದಲ್ಲಿ 22 ಆಡಾಳಿತಾತ್ಮಕ ಭಾಷೆಗಳಿವೆ, ಎಲ್ಲಾ ಭಾಷೆಗಳನ್ನು ತುಳಿತ್ತಕ್ಕೆ ಒಳಪಡಿಸಲು, ಕೇಂದ್ರ ಸರ್ಕಾರ ಹಿಂದಿ ಸಪ್ತಾಹ, ಹಿಂದಿ ದಿವಸ್ ಅನ್ನುವ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕರಾಳ ದಿನವಾಗಿ ಆಚರಣೆ

ಈಗಾಗಲೇ ದೇಶದ ಹಲವು ಉದ್ಯೋಗಗಳ ಪರಿಕ್ಷೆಯಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಿದ್ದಾರೆ. ಈಗ ಹಿಂದಿ ದಿವಸ್ ಬಲವಂತವಾಗಿ ಹೇರಿಕೆ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಕರವೇ ತೀವ್ರವಾಗಿ ಖಂಡಿಸುವುದಲ್ಲದೆ ಹಿಂದಿ ದಿವಸ್ ಕಾರ್ಯಕ್ರಮವನ್ನು ಧಿಕ್ಕರಿಸಿ ಕರವೇ ವತಿಯಿಂದ ಕರಾಳ ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.

ರಾಜ್ಯದ ವಿವಿಧ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸುವಾಗ ಕನ್ನಡ ಭಾಷೆ ಬಳಕೆಗೆ ಮೊದಲ ಆದ್ಯತೆ ನೀಡಬೇಕು. ಹಿಂದಿ ಭಾಷೆ ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹೇರುತ್ತಿರುವುದರಿಂದ ಕನ್ನಡಿಗರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿದೆ. ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಿ, ಬ್ಯಾಂಕಿನ ಡಿಜಿಟಲ್ ನಾಮಫಲಕಗಳು, ಎಟಿಎಂ ಯಂತ್ರಗಳು, ಅರ್ಜಿ ಪ್ರತಿಗಳು ಎಲ್ಲೆಡೆ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್ ವುಲ್ಲಾ, ನಗರ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಕೆ, ಮಹಿಳಾ ತಾಲೂಕು ಅಧ್ಯಕ್ಷರಾದ ಗಂಗರತ್ನಮ್ಮ, ಸಂಚಾಲಕರಾದ ಶಿವಕುಮಾರ್ ಕೆ.ಎನ್ , ಕಾರ್ಯದರ್ಶಿಗಳಾದ ಶಂಕರ್ ಕಾರ್ಮಿಕ ಘಟಕದ ಕೃಷ್ಣಪ್ಪ , ಖಜಾಂಚಿ ನಾರಾಯಣಸ್ವಾಮಿ, ವಕ್ತಾರದ ಕೃಷ್ಣ ನಾಯಕ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಗಂಗರಾಜ್ ಎಂ.ಸಿ ರಾಜು, ಗಗನ್ ಮತ್ತಿತರರು ಇದ್ದರು.