‘ದೇಶದಲ್ಲಿ ಕಾರ್ಪೊರೇಟ್‌ ಕಂಪನಿ ಸರ್ಕಾರಗಳಿವೆ’

| Published : Sep 29 2024, 01:30 AM IST / Updated: Sep 29 2024, 01:31 AM IST

ಸಾರಾಂಶ

ಬಿಎಸ್ ಎನ್ ಎಲ್ ಮುಚ್ಚಿಹೋಗುತ್ತಿದೆ. ಏರ್‌ಟೆಲ್ ಆಗಲಿ, ಜಿಯೋ ಕಂಪನಿಯಾಗಲಿ ದಿನೇ ದಿನೆ ವೃದ್ಧಿಯಾಗುತ್ತಿದೆ ಇಲ್ಲಿ ಕಾರ್ಪೋರೇಟ್ ಕಂಪನಿಗಳು ಸರ್ಕಾರ ನಡೆಸುತ್ತಿವೆ. ಪ್ರಜಾಪ್ರಭುತ್ವ ಸತ್ತು ಹೋಗಿದೆ ನಾವು ಹಾಕುವ ಪ್ರತಿಯೋಂದು ಓಟು ಶ್ರೀಮಂತರ ಪರವಾಗಿ ಕಾನೂನು ರೂಪಿಸುವ ಶಾಸನಗಳಾಗುತ್ತಿವೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತೆಂಟು ವರ್ಷಗಳಾಗಿವೆ. ಇನ್ನೂ ಶಿಕ್ಷಣ, ಉದ್ಯೋಗ, ಶ್ರೀಮಂತ ಬಡವ ಅನ್ನೋ ವ್ಯತ್ಯಾಸದಲ್ಲೆ ಬದುಕುತಿದ್ದೇವೆ. ಆದರೆ ನಮಗಿಂತ ಎರಡು ವರ್ಷ ತಡವಾಗಿ ಸ್ವಾತಂತ್ರ್ಯ ಪಡೆದ ಚೀನಾ ನೂರು ವರ್ಷ ಮುಂದಕ್ಕೆ ಹೋಗಿದೆ. ಅಲ್ಲಿ ಕಟ್ಟಿದ ತೆರಿಗೆ ಪ್ರತಿಯೊಂದು ಪೈಸೆ ಸರ್ಕಾರಕ್ಕೆ ಹೋಗುತ್ತೆ. ನಮ್ಮಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಸೇರುತ್ತೆ. ಇದೇ ಅವರಿಗೂ ನಮಗೂ ಇರುವ ವ್ಯತ್ಯಾಸ ಎಂದು ಎಸ್‌ಎಫ್‌ಐ ರಾಜ್ಯ ಮಾಜಿ ಕಾರ್ಯದರ್ಶಿ ಕೆ.ಪ್ರಕಾಶ್ ಅಭಿಪ್ರಾಯಪಟ್ಟರು ನಗರದ ಕೆ ಇ ಬಿ ಕಲ್ಯಾಣ ಮಂಟಪದಲ್ಲಿ ನಡೆದ ಎಸ್ ಎಫ್ ಐ ನ ಮೂರು ದಿನಗಳ ರಾಜ್ಯ ಸಮ್ಮೇಳನ ಮುಕ್ತಾಯ ಸಮಾರಂಭ ಮತ್ತು ಭಗತ್ ಸಿಂಗ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಚ್ಚುತ್ತಿರುವ ಸರ್ಕಾರಿ ಉದ್ಯಮ

ಸಾರ್ವಜನಿಕ ಉದ್ದಿಮೆಗಳು ಒಂದೊಂದೆ ಬಾಗಿಲು ಮುಚ್ಚುತ್ತಿವೆ ಅದಕ್ಕೆ ತಾಜಾ ಉದಾಹರಣೆ ಎಂದರೆ ಕೇಂದ್ರ ಸರ್ಕಾರ ಸ್ವಾಮ್ಯದ ಬಿ ಎಸ್ ಎನ್ ಎಲ್ ಮುಚ್ಚಿಹೋಗುತ್ತಿದೆ. ಏರ್‌ಟೆಲ್ ಆಗಲಿ, ಜಿಯೋ ಕಂಪನಿಯಾಗಲಿ ದಿನೇ ದಿನೆ ವೃದ್ಧಿಯಾಗುತ್ತಿದೆ ಇಲ್ಲಿ ಕಾರ್ಪೋರೇಟ್ ಕಂಪನಿಗಳು ಸರ್ಕಾರ ನಡೆಸುತ್ತಿವೆ. ಪ್ರಜಾಪ್ರಭುತ್ವ ಸತ್ತು ಹೋಗಿದೆ ನಾವು ಹಾಕುವ ಪ್ರತಿಯೋಂದು ಓಟು ಶ್ರೀಮಂತರ ಪರವಾಗಿ ಕಾನೂನು ರೂಪಿಸುವ ಶಾಸನಗಳಾಗುತ್ತಿವೆ ಎಂದು ಅಶಮಾಧಾನ ವ್ಯಕ್ತಪಡಿಸಿದರು.

ಕುತಂತ್ರಗಳನ್ನು ವಿರೋಧಿಸಿ

ಚೀನಾದಲ್ಲಿ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು,ಆಸ್ಪತ್ರೆಗಳು,ಕೈಗಾರಿಕೆಗಳು ಸರ್ಕಾರವೇ ಸ್ಥಾಪಿಸಿ ಪ್ರತಿಯೊಬ್ಬರಿಗೂ ಉದ್ಯೋಗ ಕೊಡುತ್ತಿದೆ. ವಿದ್ಯಾರ್ಥಿಗಳಾದ ನೀವು ದೇಶದ ಕುಲಗೆಟ್ಟ ರಾಜಕೀಯ ಹಾಗು ರಾಜಕಾರಣಿಗಳ ಕುತಂತ್ರಗಳನ್ನ ವಿರೋಧಿಸಬೇಕು. ಪ್ರತಿಯೊಬ್ಬರೂ ಭಗತ್ ಸಿಂಗ್ ಚಂದ್ರಶೇಖರ್ ಅಜಾದ್ ಗಳಾಗಿ ಪರಿವರ್ತನೆಯಾಗಬೇಕು ಎಂದು ಕರೆ ನೀಡಿದರು ಎಸ್ ಎಫ್ ಐ ರಾಜ್ಯ ಸಮಿತಿ ನೂತನ ಅಧ್ಯಕ್ಷ ಶಿವಪ್ಪ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದ ನ್ಯೂ ಎಜುಕೇಶನ್ ಪಾಲಸಿಯನ್ನ ವಿರೋಧಿಸಿ ಬಹಳ ದೊಡ್ಡ ಹೋರಾಟ ಮಾಡಿದ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ ಇ ಪಿ ರದ್ದುಗೊಳಿಸಿ ಎಸ್ ಇ ಪಿ ಯನ್ನ ಜಾರಿಗೆ ತಂದಿದ್ದಾರೆ ಎಂದರು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಬೀಮನಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅನಿಲ್ ಕುಮಾರ್, ಗೌರವಾದ್ಯಕ್ಷ ಸರ್ದಾರ್ ಚಾಂದ್ ಪಾಶ,ಜೆ ಎಂ ಎಸ್ ಮಾಜಿ ಅಧ್ಯಕ್ಷೆ ವಿ.ಗೀತಾ,ಮಾಜಿ ಎಸ್ ಎಫ್ ಐ ಅಧ್ಯಕ್ಷ ಅಂಬರೀಶ್,ಚನ್ನರಾಯಪ್ಪ, ಎಂ.ಪಿ. ಮುನಿವೆಂಕಟಪ್ಪ ಮತ್ತಿತರರು ಇದ್ದರು.