ವೇಮಗಲ್-ಕುರಗಲ್ ಪಪಂ ಚುನಾವಣೆ: ಮೈತ್ರಿ ಪಟ್ಟಿ ಪ್ರಕಟ

| Published : Aug 03 2025, 11:45 PM IST

ಸಾರಾಂಶ

ವೇಮಗಲ್ ಮತ್ತು ಕುರಗಲ್ ಪಟ್ಟಣ ಪಂಚಾಯಿತಿಯ ೧೭ ವಾರ್ಡ್‌ಗಳಲ್ಲಿ ಎಲ್ಲ ಮತದಾರರಿಗೆ ಸಮ್ಮತಿಯಾಗಿ ಗೆಲ್ಲುವಂತ ಸೂಕ್ತವಾದ ಅಭ್ಯರ್ಥಿಗಳನ್ನೇ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ೯ ವಾರ್ಡ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ೮ ವಾರ್ಡುಗಳಲ್ಲಿ ಚುನಾವಣಾ ಕಣಕ್ಕೆ ಇಳಿಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರವೇಮಗಲ್- ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೈತ್ರಿ (ಎನ್‌ಡಿಎ) ಅಭ್ಯರ್ಥಿಗಳನ್ನು ಚುನಾವಣೆಯ ಕಣಕ್ಕೆ ಇಳಿಸಲು ಭಾನುವಾರ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಎರಡು ಪಕ್ಷಗಳ ಮುಖಂಡರು ಸಮ್ಮತಿಸಿದ್ದು, ೧೭ ಸ್ಥಾನಗಳನ್ನೂ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲಾಗುವುದು ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.ನಗರದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್‌ರವರ ಗೃಹ ಕಚೇರಿಯಲ್ಲಿ ನಡೆದ ಮುಖಂಡರ ಚುನಾವಣಾ ಪೂರ್ವಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಎರಡೂ ಪಕ್ಷಗಳ ಸಮ್ಮತ ಅಭ್ಯರ್ಥಿ

ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷದಲ್ಲಿ ಪಟ್ಟಣ ಪಂಚಾಯಿತಿಗೆ ಗೆಲ್ಲುವ ಅಭ್ಯರ್ಥಿಗಳನ್ನೆ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಎರಡು ಪಕ್ಷಗಳ ಎಲ್ಲಾ ಮುಖಂಡರು ಈ ಚುನಾವಣೆಯಲ್ಲಿ ಸಂಘಟಿತರಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಗುರಿ ಹೊಂದಿರುವುದಾಗಿ ಹೇಳಿದರು.ಬಿಜೆಪಿ 9, ಜೆಡಿಎಸ್‌ 8 ಸ್ಥಾನಕ್ಕೆ ಸ್ಪರ್ಧೆ

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ವೇಮಗಲ್ ಮತ್ತು ಕುರಗಲ್ ಪಟ್ಟಣ ಪಂಚಾಯಿತಿಯ ೧೭ ವಾರ್ಡ್‌ಗಳಲ್ಲಿ ಎಲ್ಲ ಮತದಾರರಿಗೆ ಸಮ್ಮತಿಯಾಗಿ ಗೆಲ್ಲುವಂತ ಸೂಕ್ತವಾದ ಅಭ್ಯರ್ಥಿಗಳನ್ನೇ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ೯ ವಾರ್ಡ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ೮ ವಾರ್ಡುಗಳಲ್ಲಿ ಚುನಾವಣಾ ಕಣಕ್ಕೆ ಇಳಿಸಲಾಗುವುದು. ಎರಡೂ ಪಕ್ಷಗಳ ಮುಖಂಡರು ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು

ವಾರ್ಡ್ ಸಂಖ್ಯೆ ೧ ಚಿನ್ನಪ್ಪನಹಳ್ಳಿ + ಕುರುಬರಹಳ್ಳಿ ಬಿ.ಸಿ.ಎಂ.(ಎ)ಹಿಂ, ವರ್ಗ ಮಹಿಳಾ ಮೀಸಲು ಕ್ಷೇತ್ರದಿಂದ ಶ್ವೇತ ಸುಬ್ರಮಣಿ. ವಾರ್ಡ್ ಸಂಖ್ಯೆ ೪ ಮಲ್ಲಿಯಪ್ಪಹಳ್ಳಿ (ಪ.ಜಾ,) ಮಹಿಳೆ ಅನುಷಾ ಮುನಿರಾಜು, ವಾರ್ಡ್ ಸಂಖ್ಯೆ ೬ ಸುಳಿದೇನಹಳ್ಳಿ + ವಿಶ್ವನಗರ ಬಿ.ಸಿ.ಎಂ.(ಎ)ಹಿಂ, ಎ,ವರ್ಗ ಸಿ.ಎಸ್.ವೆಂಕಟೇಶ್, ವಾರ್ಡ್ ಸಂಖ್ಯೆ ೮ ಕುರುಗಲ್,ಹಿಂ (ಬಿ.ಸಿ.ಎಂ.) ಬಿ ವರ್ಗ ಸುಬ್ರಮಣಿ, ವಾರ್ಡ್ ಸಂಖ್ಯೆ ೧೨ ಶಿಂಗಹಳ್ಳಿ + ಐ.ಬಿ. ಪ್ರದೇಶ (ಪ.ಪಂ) ಮುನಿರಾಜು, ವಾರ್ಡ್ ೧೩,ಎ೧ ಬ್ಲಾಕ್ (ಸಾ.ಮಹಿಳೆ) ಲಲಿತಮ್ಮ ಮುನಿಯಪ್ಪ, ವಾರ್ಡ್ ಸಂಖ್ಯೆ ೧೪,ಎ ೨ ಬ್ಲಾಕ್ (ಸಾಮಾನ್ಯ) ನಾಗೇಶ್ ವಿ.ಎಂ, ವಾರ್ಡ್ ಸಂಖ್ಯೆ ೧೬, ಬಿ.೨ ಬ್ಲಾಕ್ (ಸಾ. ಮಹಿಳೆ) ಸುಜಾತ ಮುನಿರಾಜು, ವಾರ್ಡ್ ಸಂಖ್ಯೆ ೧೭, ಸಿ.ಬ್ಲಾಕ್ (ಪ.ಜಾ.) ಮಹಿಳೆ ಸುಗುಣ ರಮೇಶ್ ಇವರನ್ನು ಆಯ್ಕೆ ಮಾಡಲಾಗಿದೆ. ಜೆಡಿಎಸ್ ಬೆಂಬಲಿತ ಸ್ಪರ್ಧಿಗಳುವಾರ್ಡ್ ಸಂಖ್ಯೆ ೩.ಚಿಕ್ಕವಲ್ಲಬಿ + ಕಲ್ವ (ಸಾಮಾನ್ಯ) ಜೆ,ಸಿ.ಬಿ.ರವಿ, ವಾರ್ಡ್ ಸಂಖ್ಯೆ ೫, ಕೆ.ಮಲ್ಲಂಡಹಳ್ಳಿ (ಸಾಮಾನ್ಯ) ಲೋಕೇಶ್ ಮರಿಯಪ್ಪ,ವಾರ್ಡ್ ಸಂಖ್ಯೆ ೭ ಮಡಿವಾಳ (ಸಾಮಾನ್ಯ) ಮಹಿಳೆ ಮಮತಾ ಲೋಕೇಶ್, ವಾರ್ಡ್ ಸಂಖ್ಯೆ ೯, ಕುರಗಲ್-೨ (ಸಾಮಾನ್ಯ) ರಮೇಶ್, ವಾರ್ಡ್ ಸಂಖ್ಯೆ ೧೦, ಹಾರ್ಜೇನಹಳ್ಳಿ (ಸಾಮಾನ್ಯ) ಮುನಿಕೃಷ್ಣಪ್ಪ. ವಾರ್ಡ್ ಸಂಖ್ಯೆ ೧೧, ಪೆರ್ಜೇನಹಳ್ಳಿ +ಪುರಹಳ್ಳಿ (ಪ.ಜಾ.) ವೆಂಕಟರವಣಪ್ಪ, ವಾರ್ಡ್ ಸಂಖ್ಯೆ ೧೫, ಬಿ. ಬ್ಲಾಕ್ ವೇಮಗಲ್ (ಸಾಮಾನ್ಯ) ಭವ್ಯ ಕೃಷ್ಣ, ವಾರ್ಡ್ ಸಂಖ್ಯೆ ೨ ಬೆಟ್ಟ ಹೊಸಪುರ (ಪ.ಜಾ.) ಜೆ.ಡಿ.ಬಿ. ರಾಮು ಸ್ಪರ್ಧಿಸಲಿದ್ದಾರೆ ಎಂದರು. ಚುನಾವಣೆಗೆ ಸಿದ್ದತೆ: ವೈಎಎನ್

ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದೆ. ಎನ್.ಡಿ.ಎ ಮೈತ್ರಿಯಡಿ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಸಿ.ಎಂ.ಆರ್. ಶ್ರೀನಾಥ್, ಬೆಗ್ಲಿ ಸೂರ್ಯಪ್ರಕಾಶ್, ಬಣಕನಹಳ್ಳಿ ನಟರಾಜ್, ಬಾಬು ಮೌನಿ, ವಡಗೂರು ರಾಮು, ಬಂಕ್ ಮಂಜುನಾಥ್, ಸಿ.ರಾಕೇಶ್‌ಗೌಡ ಇದ್ದರು.