ಸಾರಾಂಶ
ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂ.ಐ.ಟಿ.) ಇದರ ಎಂಬಿಎ ವಿಭಾಗದ ವತಿಯಿಂದ ಒಂದು ವಾರದ ವೈಬ್ರೇಶನ್ ವೀಕ್ ಎಂಬ ವಿಭಿನ್ನ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂ.ಐ.ಟಿ.) ಇದರ ಎಂಬಿಎ ವಿಭಾಗದ ವತಿಯಿಂದ ಒಂದು ವಾರದ ವೈಬ್ರೇಶನ್ ವೀಕ್ ಎಂಬ ವಿಭಿನ್ನ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಎಂಐಟಿ ಉಪಪ್ರಾಂಶುಪಾಲ ಪ್ರೊಫೆಸರ್ ಮೇಲ್ವಿನ್ ಡಿಸೋಜ ಮಾತನಾಡಿ, ಸ್ಪರ್ಧೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ, ವಿದ್ಯಾರ್ಥಿಗಳೆಲ್ಲರೂ ಸಕ್ರಿಯವಾಗಿ ಒಂದು ವಾರಗಳ ಕಾಲ ನಡೆಯುವಂತಹ ಈ ವಿಭಿನ್ನವಾದ ಕಾರ್ಯಕ್ರಮದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಐ.ಎಂ.ಜೆ. ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳ್ಲಲಿ ಭಾಗವಹಿಸಿ ಅವಕಾಶದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ.ಸುಚಿತ್ರಾ, ವಿದ್ಯಾರ್ಥಿಗಳು ತಮಗೆ ಸಿಕ್ಕಂತಹ ಅವಕಾಶಗಳನ್ನು ನಿಖರವಾಗಿ ಸದುಪಯೋಗ ಮಾಡಿಕೊಂಡು ನಡೆಯುವಂತಹ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುವರು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರೊ. ತಿಲಕಾ ಲಕ್ಷ್ಮೀ, ಪ್ರೊ.ಕಾವ್ಯ, ಪ್ರೊ. ಪೂರ್ಣಿಮಾ ಹಾಗೂ ಪ್ರೊ. ನೀಲ್ ಉಪಸ್ಥಿತರಿದ್ದರು. ಸುಶ್ಮಿತಾ ಶೇಖರ್ ಕಾರ್ಯಕ್ರಮ ನಿರೂಪಿಸಿದರು.ವೈಬ್ರೇಶನ್ ವೀಕ್ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸುವ ರೆಟ್ರೋ ರೌಂಡ್, ಮ್ಯಾನೇಜ್ ಮೆಂಟ್ ಕ್ವಿಜ್, ಮ್ಯಾಡ್ ಆ್ಯಡ್, ಮಿಸ್ ಮ್ಯಾಚ್, ಪ್ರೆಸೆಂಟೇಶನ್ ಮತ್ತು ಗ್ರೂಪ್ ಡ್ಯಾನ್ಸ್ ನಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.;Resize=(128,128))
;Resize=(128,128))
;Resize=(128,128))
;Resize=(128,128))