‘ಸಂವಿಧಾನ ನಮಗೆ ನೀಡಿರುವ ಮತಹಕ್ಕನ್ನು ಚಲಾಯಿಸಬೇಕು’

| Published : Apr 27 2024, 01:23 AM IST

‘ಸಂವಿಧಾನ ನಮಗೆ ನೀಡಿರುವ ಮತಹಕ್ಕನ್ನು ಚಲಾಯಿಸಬೇಕು’
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ನಮಗೆ ನೀಡಿರುವ ಮತಹಕ್ಕನ್ನು ಚಲಾಯಿಸಬೇಕು. ಪ್ರತಿಯೊಬ್ಬರೂ ಪ್ರಜಾಪ್ರಭುತ್ವದಲ್ಲಿ ಮತದಾನವನ್ನು ಹಬ್ಬದ ರೀತಿ ಸಂಭ್ರಮಿಸಿ ಅಭಿವೃದ್ಧಿಗೆ ನಾವು ಸಾಕ್ಷಿಯಾಗಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನ ಹಬ್ಬವಿದ್ದಂತೆ. ಮತದಾನ ಮಾಡುವ ಮೂಲಕ ಸಂಭ್ರಮವನ್ನು ಕಾಣಬೇಕು. ಎಲ್ಲರೂ ಮತದಾನ ಮಾಡಿ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ಅಶೋಕ ನಗರದರಲ್ಲಿರುವ ನ್ಯಾಷನಲ್ ಚಿಲ್ಡ್ರನ್ ಶಾಲೆಯ ಮತಗಟ್ಟೆಯಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮತ್ತು ಕುಟುಂಬದವರು ಮತದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಸಂವಿಧಾನ ನಮಗೆ ನೀಡಿರುವ ಮತಹಕ್ಕನ್ನು ಚಲಾಯಿಸಬೇಕು. ಪ್ರತಿಯೊಬ್ಬರೂ ಪ್ರಜಾಪ್ರಭುತ್ವದಲ್ಲಿ ಮತದಾನವನ್ನು ಹಬ್ಬದ ರೀತಿ ಸಂಭ್ರಮಿಸಿ ಅಭಿವೃದ್ಧಿಗೆ ನಾವು ಸಾಕ್ಷಿಯಾಗಬೇಕು ಎಂದರು.

ಪ್ರಜಾಪ್ರಭುತ್ವದಲ್ಲಿ ಮತದಾನ ಹಬ್ಬವಿದ್ದಂತೆ. ಮತದಾನ ಮಾಡುವ ಮೂಲಕ ಸಂಭ್ರಮವನ್ನು ಕಾಣಬೇಕು. ಎಲ್ಲರೂ ಮತದಾನ ಮಾಡಿ, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ನುಡಿದರು.

ಮತಗಟ್ಟೆಗಳನ್ನು ಬಹಳ ವ್ಯವಸ್ತಿತವಾಗಿ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಿದ್ದಾರೆ, ಮಹಿಳೆಯರು, ವಿಶೇಷಚೇತನರು, ಯುವ ಮತದಾರರನ್ನು ಗಮನದಲ್ಲಿರಿಸಿಕೊಂಡು ಉತ್ತಮ ಮತಕೇಂದ್ರಗಳನ್ನು ನಿರ್ಮಾಣ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಚಂದ್ರು ರಾಜೇಶ್, ಮುರಳೀಧರ ಮತ್ತಿತರರಿದ್ದರು.ಪ್ರಮುಖರಿಂದ ಮತದಾನ

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ ಅವರು ಪತ್ನಿ ಬಿ.ಎಂ. ಮಾಲತಿ ಅವರೊಂದಿಗೆ ಮಂಡ್ಯ ತಾಲೂಕು ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯತ್ತಗದಹಳ್ಳಿ ಮತಗಟ್ಟೆ ಸಂಖ್ಯೆ ೧೯ರಲ್ಲಿ ಮತ ಚಲಾಯಿಸಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮೈಸೂರಿನ ಕೆ.ಆರ್. ಕ್ಷೇತ್ರದ ನಟರಾಜ್ ಸ್ಕೂಲ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮಂಡ್ಯದ ತಾವರೆಗೆರೆಯಲ್ಲಿ ಎಸ್‌.ಬಿ.ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮತದಾನ ಮಾಡಿದರು.

ಹಲಗೂರು ಇಂದಿರಾ ಕಾಲೋನಿಯಲ್ಲಿ ವಾಸವಾಗಿರುವ ಅಂಗವಿಕಲ ನಂದೀಶ್‌ ಮತಗಟ್ಟೆಗೆ ಬಂದಾಗ ಹಲಗೂರು ಗ್ರಾಮ ಪಂಚಾಯ್ತಿ ಸದಸ್ಯರಾದ ಸುರೇಂದ್ರ, ಎಚ್‌.ಎಸ್‌.ಶ್ರೀನಿವಾಸಾಚಾರಿ, ದೀಪು ಸಹಕಾರದೊಂದಿಗೆ ಮತಚಲಾಯಿಸಿದರು.ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಸುಭಾಷ್ ನಗರ ಬಡಾವಣೆಯ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಮೀರಾ ಮತ್ತು ಪ್ರಾಚಿ ಜೈನ್, ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಂಡ್ಯದ ಅನ್ನಪೂರ್ಣೇಶ್ವರಿ ನಗರ ಬಡಾವಣೆಯ ಎಸ್‌.ರುಚಿತಾ ಅವರು ಕ್ಯಾತುಂಗೆರೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೊದಲಬಾರಿಗೆ ಮತ ಚಲಾಯಿಸಿದರು.ಮಂಡ್ಯ ನಗರದ ನಿವಾಸಿಗಳಾದ ಸ್ಫಟಿಕ ಎಸ್ ಜೈನ್ ರವರು ಬೆಂಗಳೂರಿನಿಂದ ಬಂದು ತಮ್ಮ ಜೀವನದ ಮೊದಲ ಮತದಾನ ಮಾಡಿದರು.

ಮಂಡ್ಯ ತಾಲೂಕು ಬಸರಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ.ಕೆ.ಶ್ವೇತಾ ಮೊದಲಬಾರಿಗೆ ಮತ ಚಲಾಯಿಸಿದ ಅನುಭವ ಪಡೆದುಕೊಂಡರು. ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆಯ ವಿಕಲಚೇತನ ಮತದಾರ ರಮೇಶ್ ಅವರು 75% ಅಂಗವಿಕಲತೆ ಹೊಂದಿದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಕೆ.ಆರ್‌.ಪೇಟೆ ತಾಲೂಕಿನ ಹಿರೇಕಳಲೆ ಗ್ರಾಮದಲ್ಲಿ ಅಂಗವಿಕಲರೊಬ್ಬರು ಮತದಾನಕ್ಕೆ ವ್ಹೀಲ್‌ಚೇರ್‌ನಲ್ಲಿ ಆಗಮಿಸಿದರು.