ಸಂವಿಧಾನದ ಆಶಯಗಳನ್ನ ಪ್ರತಿಯೊಬ್ಬರೂ ಪಾಲಿಸಬೇಕು

| Published : Feb 18 2024, 01:38 AM IST

ಸಾರಾಂಶ

ಸ್ತಬ್ಧ ಚಿತ್ರ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ ಮೂರ್ತಿಗೆ ಯುವ ಮುಖಂಡ ಚಿದಾನಂದ ಸವದಿ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಅಥಣಿ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದ್ದು, ಅಂಬೇಡ್ಕರ ಅವರು ನೀಡಿರುವ ಈ ಸಂವಿಧಾನದ ಆಶಯಗಳನ್ನು ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದು ತಹಸೀಲ್ದಾರ ವಾಣಿ.ಯು ಹೇಳಿದರು.ಶನಿವಾರ ಅಥಣಿ ಪಟ್ಟಣದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕ ಆಡಳಿತದಿಂದ ನಮ್ಮ ಸಂವಿಧಾನ ರಚನೆಗೊಂಡು 75 ವರ್ಷಗಳ ಸಂಭ್ರಮಾಚರಣೆಯ ನಿಮಿತ್ತ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ಜನರಲ್ಲಿ ಜಾಗೃತಿ ಜಾಥಾ ವಾಹನ ಸ್ವಾಗತಿಸಿಕೊಂಡು ಮಾತನಾಡಿದ ಅವರು, ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳು ಪ್ರತಿಯೊಂದು ಮನೆ ಮನ ತಲುಪಬೇಕು. ಎಲ್ಲರಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ಕಾರ ಈ ಜಾಥಾ ಅಭಿಯಾನ ಹಮ್ಮಿಕೊಂಡಿದೆ. ಅಥಣಿ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಮತ್ತು ಪಟ್ಟಣದಲ್ಲಿ ಜರುಗಿದ ಸ್ತಬ್ಧ ಚಿತ್ರದ ವಾಹನದ ಮೆರವಣಿಗೆ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೂರ್ತಿಯ ಮೆರವಣಿಗೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

ಸ್ತಬ್ಧ ಚಿತ್ರ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ ಮೂರ್ತಿಗೆ ಯುವ ಮುಖಂಡ ಚಿದಾನಂದ ಸವದಿ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆ ಇಮ್ಮಡಿಗೊಳಿಸಿದ ಕಲಾತಂಡಗಳು: ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ವಿವಿಧ ವಾಧ್ಯಮೇಳ, ವಿವಿಧ ಶಾಲೆಯ ಶಾಲಾ ಮಕ್ಕಳಿಂದ ಹಮ್ಮಿಕೊಂಡಿದ್ದ ರೂಪಕಗಳು ಅದ್ದೂರಿ ಮೆರವಣಿಗೆಗೆ ಸಾಕ್ಷಿಯಾಗಿದ್ದವು. ಅಥಣಿ ಪಟ್ಟಣದ ಸಿಎಸ್ ಕಿತ್ತೂರ್ ಹೈಸ್ಕೂಲ್ ಆವರಣದಿಂದ ಆರಂಭವಾದ ಮೆರವಣಿಗೆ ಅಂಬೇಡ್ಕರ್ ವೃತ್ತದ ಮೂಲಕ ಮುಖ್ಯಬೀದಿಯಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಂವಿಧಾನ ಪೀಠಿಕೆ ಓದಿ ಸ್ವೀಕರಿಸಲಾಯಿತು. ನಂತರ ಶಿವಯೋಗಿ ವೃತ್ತದ ಮೂಲಕ ರಾಯಬಾಗ ತಾಲೂಕಿಗೆ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಉಪತಹಸೀಲ್ದಾರ ಬಿ ವೈ ಹೊಸಕೇರಿ, ಮಹದೇವ ಬಿರಾದಾರ, ತಾ.ಪಂ.ಅಧಿಕಾರಿ ಶಿವಾನಂದ ಕಲ್ಲಾಪುರ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಡಾ. ಬಸಗೌಡ ಕಾಗೆ, ಸಿಡಿಪಿಒ ಅಶೋಕ ಕಾಂಬಳೆ, ರೇಣುಕಾ ಹೊಸಮನಿ, ನಿಂಗಣ್ಣಾ ಬಿರಾದರ, ಎಂ. ಆರ್ ಕಳ್ಳಿಮನಿ, ಪ್ರವೀಣ ಹುಣಸೀಕಟ್ಟಿ, ಪ್ರಶಾಂತ ಗಾಣಿಗೇರ, ಡಿ. ಜೆ ಕಾಂಬಳೆ, ಎನ್. ಎಮ್ ಹಿರೇಮಠ, ಜೆ.ಎ ಹಿರೇಮಠ, ಎಂ. ಎಸ್ ಮಗದುಮ್ಮ,ರಾವಸಾಬ ಐಹೊಳೆ, ಸಂತೋಷ ಸಾವಡಕರ, ವಿಲಿನ ಯಳಮಲ್ಲೆ, ರಾಜು ಗುಡ್ಡೋಡಗಿ, ರಿಯಾಜ್ ಸನದಿ, ತೀಪ್ಪಣ್ಣ ಭಜಂತ್ರಿ, ವಿದ್ಯಾ ಐಹೊಳೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಶಾಲಾ , ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ವಿವಿಧ ದಲಿತ ಸಂಘಟನೆ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ತಡವಾಗಿ ಆರಂಭವಾದ ಮೆರವಣಿಗೆ: ಪಟ್ಟಣದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಜಾಗೃತಿ ಸ್ತಬ್ಧ ಚಿತ್ರ ವಾಹನದ ಮೆರವಣಿಗೆ ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು.